ಹಂಪಿ ಉತ್ಸವ ಮತ್ತು ವಿವಾದಗಳು!

ನಂತರದ ಉತ್ಸವಗಳಲ್ಲಿ ಉತ್ಸವ ಆಚರಿಸುವವರನ್ನು ತೀವ್ರವಾಗಿ ಕಾಡಿದ್ದು, ಬರ - ನೆರೆ, ಆರ್ಥಿಕ ಮುಗ್ಗಟ್ಟು. ಅಲ್ಲದೇ, ಸಂವಿಧಾನವಾಗಿ ರಾಜಕೀಯ ವ್ಯವಸ್ಥೆಯನ್ನೇ ಏರುಪೇರು ಮಾಡಿದ್ದು ಎಸ್.ಆರ್. ಬೊಮ್ಮಾಯಿ ಅವರ ಆಡಳಿತಾವಧಿಯಲ್ಲಿ ರಾಷ್ಟ್ರಪತಿ ಆಡಳಿತ. ಎಸ್.ಎಂ. ಕೃಷ್ಣ ಆಡಳಿತಾವಧಿಯಲ್ಲಿ ಜನವರಿ 26ರ ಸಂಜೆ ಉತ್ಸವ ಉದ್ಘಾಟನೆಗೊಳ್ಳಬೇಕಿತ್ತು. ಆದರೆ, ಹೊಸಪೇಟೆ ತಾಲೂಕು ಪಂಚಾಯಿತಿ ಅಧ್ಯಕ್ಷ ಸೂರ್ಯನಾರಾಯಣ ಧ್ವಜವಂದನೆ ಸ್ವೀಕರಿಸುವಾಗಲೇ ಆಗುಂತಕನ ಗುಂಡಿನ ಗುರಿಗೆ ಕೊಲೆ ಆಗಿದ್ದರು. ಉತ್ಸವ ರದ್ದಾಯಿತು.
ಪ್ರತಿವರ್ಷದ ನವೆಂಬರ್ ತಿಂಗಳಲ್ಲಿ ಈ ಉತ್ಸವ ಆಚರಿಸಲ್ಪಡುತ್ತಿತ್ತು. ದೇಶ - ವಿದೇಶಗಳ ಯಾತ್ರಾರ್ಥಿಗಳು ಕೂಡ ನವೆಂಬರ್‌ನಲ್ಲಿ ಹಂಪಿಗೆ ಭೇಟಿ ನೀಡಲು ಅತೀವ ಆಸಕ್ತಿ ತೋರುತ್ತಿದ್ದರು. ಸುಗ್ಗಿಯ ಮಾಗಿ ಛಳಿಯ ಆಸುಪಾಸಿನಲ್ಲಿ ಹಿಗ್ಗಿನಿಂದ ಇರುತ್ತಿದ್ದ ಸುತ್ತಲಿನ ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸವದಲ್ಲಿ ಪಾಲ್ಗೊಂಡು ಹಂಪಿ ಉತ್ಸವವನ್ನು ಗ್ರಾಮೀಣ ಉತ್ಸವವವಾಗಿ, ಹಳ್ಳಿಗರ ಹಬ್ಬವಾಗಿ, ಜನೋತ್ಸವವಾಗಿ ಆಚರಿಸುತ್ತಿದ್ದರು. ನವೆಂಬರ್ ನಿಂದ ಜನವರಿಗೆ ಉತ್ಸವಾಚರಣೆ ಮುಂದೂಡಿದ್ದರಿಂದ ಉತ್ಸವ ಕಾಟಾಚಾರಕ್ಕಷ್ಟೇ ನಡೆಯುತ್ತಿದೆ.
ಇದಕ್ಕೆ ಪೂರಕವಾಗಿ ತೆಲುಗರ ರಾಜ ಶ್ರೀಕೃಷ್ಣದೇವರಾಯರ ಪಟ್ಟಾಭಿಷೇಕದ 500ನೇ ಉತ್ಸವವನ್ನು ಬಿಜೆಪಿ ಆಚರಿಸಿ ವಿವಾದವನ್ನು ಮೈಮೇಲೆ ಎಳೆದುಕೊಂಡಿತು. ಇದೇ ಸಂದರ್ಭದಲ್ಲಿ ಕಳೆದ ವರ್ಷ ಬಳ್ಳಾರಿಯಲ್ಲಿ ಜನವರಿ 26ರಂದೇ ನಿರ್ಮಾಣ ಹಂತದಲ್ಲಿದ್ದ ಅಪಾರ್ಟ್‌ಮೆಂಟ್ ಕುಸಿತು 30 ಜನರು ಮೃತಪಟ್ಟರು. ಹಂಪಿ ಕನ್ನಡ ವಿಶ್ವವಿದ್ಯಾಲಯದ 80 ಎಕರೆ ಭೂಮಿಯನ್ನು ಥೀಮ್‌ಪಾರ್ಕ್'ಗಾಗಿ ಸರ್ಕಾರ ವಶಕ್ಕೆ ತೆಗೆದುಕೊಂಡು ಮತ್ತೊಂದು ರೀತಿಯಲ್ಲಿ ವಿವಾದವನ್ನೇ ಹೊದ್ದುಕೊಂಡಿತು.
ಪ್ರಸ್ತುತ ಹಂಪಿ ಉತ್ಸವ 2011ಕ್ಕೆ ರಾಜ್ಯ ಸರ್ಕಾರ, ಜಿಲ್ಲಾ ಆಡಳಿತ ಭರದಿಂದ ಸಜ್ಜುಗೊಳ್ಳುತ್ತಿದೆ. ಜನವರಿ 27, 28 ಮತ್ತು 29ರಂದು ಹಂಪಿಯಲ್ಲಿ ಉತ್ಸವ ಆಚರಣೆಗೆ ಪೂರ್ವಭಾವಿ ಸಿದ್ಧತೆ ನಡೆದಿದೆ. ರಾಜ್ಯ ಸರ್ಕಾರದ ಮೇಲೆ ರಾಜ್ಯಪಾಲರ ಅಂಕುಶ ತಿರುಗುತ್ತಿದೆ. ಮುಖ್ಯಮಂತ್ರಿಯವರ ವಿರುದ್ಧ ಅನೇಕ ಕೇಸುಗಳನ್ನು ಜಡಿಯಲಾಗಿದೆ. ಇದರ ಛಾಯೆ ಉತ್ಸವದ ಮೇಲೆ ಬಂದರೂ ಆಶ್ಚರ್ಯವಿಲ್ಲ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications