ಬಿಎಸ್ ವೈ ವಿರುದ್ಧ ಮತ್ತೆ ಮೂರು ಕೇಸು ದಾಖಲು

ವಿಚಾರಣೆ ವಿಳಂಬ ಏಕೆ?: ಕೇಸಿಗೆ ಸಂಬಂಧಿಸಿದಂತೆ ಕೋರ್ಟ್ ಗೆ ನೀಡಿರುವ ದಾಖಲೆಗಳನ್ನು ಪರಿಶೀಲಿಸಿ ಪ್ರತಿ ದಾಖಲೆಗೂ ಪ್ರತ್ಯೇಕ ಸಂಖ್ಯೆ ನೀಡಲಾಗುತ್ತದೆ. ಸದರಿ ಕೇಸುಗಳ ದಾಖಲೆಗಳ ಸಂಖ್ಯೆ ಹೆಚ್ಚಾಗಿರುವುದರಿಂದ ದಾಖಲಾತಿ ಪರಿಶೀಲನೆ ನಡೆಸಿ, ಸಂಖ್ಯೆ ನೀಡಿದ ನಂತರ ನ್ಯಾಯಾಧೀಶರು ವಿಚಾರಣೆ ದಿನಾಂಕ ನಿಗದಿ ಮಾಡುತ್ತಾರೆ ಎಂದು ಸಿರಾಜಿನ್ ಭಾಷಾ ಹಾಗೂ ಬಾಲರಾಜ್ ಅವರ ಪರ ವಕೀಲ ಸಿ.ಎಚ್ ಹನುಮಂತರಾಯ ಹೇಳಿದರು.
'ನಾನು ಆಶಾವಾದಿ. ಮೊದಲೆರಡು ಫಿರ್ಯಾದಿಗೆ ಸಂಬಂಧಿಸಿದಂತೆ ಇಂದು 3 ಗಂಟೆಯೊಳಗೆ ದಾಖಲೆ ಪರಿಶೀಲನೆ ಪೂರ್ಣವಾಗುವ ಸಾಧ್ಯತೆಯಿದೆ. ನಾನಂತೂ ವಾದ ಮಾಡಲು ಸಂಪೂರ್ಣ ತಯಾರಿಗಿದ್ದೇನೆ' ಎಂದಿದ್ದಾರೆ. ಇಂದು ದಾಖಲಾದ ಉಳಿದ 3 ಕೇಸುಗಳ ವಿಚಾರಣೆ ಫೆ. 1 ಹಾಗೂ 2 ರಂದು ನಡೆಯಲಿದೆ ಎಂದು ನ್ಯಾಯಮೂರ್ತಿ ಸಿಬಿ ಹಿಪ್ಪರಗಿ ಹೇಳಿದ್ದಾರೆ. ಒಂದು ದೂರಿನಲ್ಲಿ ಮೂರು ಪ್ರಕರಣಗಳನ್ನು ಸೇರಿಸಬಹುದು ಎಂದು ಹನುಮಂತರಾಯರು ಹೇಳಿದರು.
ಆರೋಪಿಗಳು ಯಾರು: ಇಂದು ದಾಖಲಾದ ದೂರಿನಲ್ಲೂ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಪ್ರಮುಖ ಆರೋಪಿ ಮಾಡಲಾಗಿದೆ. ಉಳಿದಂತೆ ಬಿವೈ ರಾಘವೇಂದ್ರ, ಬಿವೈ ವಿಜಯೇಂದ್ರ, ಸೋಹನ್ ಕುಮಾರ್,ಪ್ರಕಾಶ್ ಶೆಟ್ಟಿ, ಭರತ್ ಹೋಮ್ಸ್, ಮಾಲೂರು ಕೃಷ್ಣಯ್ಯ ಶೆಟ್ಟಿ, ಪ್ರವೀಣ್ ಚಂದ್ರ, ಎಸ್ ಎಸ್ ಉಗೇಂದ್ರ, ನಮ್ರತಾ ಶಿಲ್ಪಿ, ಸುಗುಣಾ, ಡಾ. ಹೇಮಚಂದ್ರಸಾಗರ್, ಸಹ್ಯಾದ್ರಿ ಹೆಲ್ತ್ ಕೇರ್ ಪ್ರೈ ಲಿ. ಎಂಎಲ್ ಸಿ ಭಾರತಿ ಶೆಟ್ಟಿ, ಎನ್ನಾರೈ ಬಿಆರ್ ಶೆಟ್ಟಿ, ಸೆಲ್ವಕುಮಾರ್ ಮುಂತಾದವರಿದ್ದಾರೆ.[ಯಡಿಯೂರಪ್ಪ]












Click it and Unblock the Notifications