ಹೆಣ್ಮಕ್ಕಳಿಗೆ ಕಿರುಕುಳ ನೀಡಿದರೆ ಧರ್ಮದೇಟು

ಕುಲಶೇಖರದ ಚರ್ಚ್‌ಗೆ ಬರುತ್ತಿದ್ದ ಹುಡುಗಿಯರು, ಕೆಲಸಕ್ಕೆ, ಕಾಲೇಜಿಗೆ ಹೋಗುತ್ತಿದ್ದ ಹುಡುಗಿಯರನ್ನು ಬೈಕ್‌ನಲ್ಲಿ ಹಿಂಬಾಲಿಸಿ ಕಿರುಕುಳ ಕೊಡುತ್ತಿದ್ದ ಸುರೇಶ್ ಹಾಗೂ ಲತೀಫ್ ಎಂಬ ಕಾಮುಕರಿಬ್ಬರನ್ನು ಸಾರ್ವಜನಿಕರು ಥಳಿಸಿ ಬುದ್ದಿ ಕಲಿಸಿದ್ದಾರೆ.
ಕುಲಶೇಖರ ಕೈಕಂಬದ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಈ ಇಬ್ಬರು ತೀರ್ಥಹಳ್ಳಿ ಮೂಲದವರು ಎಂದು ತಿಳಿದು ಬಂದಿದೆ. ಮಧ್ಯಾಹ್ನ ಬಿಡುವಿನ ಹೊತ್ತಿನಲ್ಲಿ ಚರ್ಚ್ ಬಳಿ, ಕುಲಶೇಖರ ಜಂಕ್ಷನ್ ಬಳಿ ಬಂದು ಹುಡುಗಿಯರು ಬಸ್ಸಿಂದ ಇಳಿದ ಕೂಡಲೇ ಅವರನ್ನು ಹಿಂಬಾಲಿಸಿ ಲೈಂಗಿಕ ಕಿರುಕುಳ ಕೊಡುತ್ತಿದ್ದರು.
ನಿಟ್ಟುಸಿರು ಬಿಟ್ಟ ಹುಡುಗಿಯರು: ಈ ಇಬ್ಬರ ಕಾಟ ತಾಳಲಾರದೆ, ಯಾರಲ್ಲೂ ಹೇಳಲಾರದೆ ತೊಳಲಾಡುತ್ತಿದ್ದ ಕಾಲೇಜು ಹುಡುಗಿಯರು ಹಾಗೂ ಇತರರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಕೆಲವರು ಧೈರ್ಯ ಮಾಡಿ ಪೊಲೀಸರ ಬಳಿ ಹೋದರೂ ಅದು ಕಂಕನಾಡಿ ಪೊಲೀಸರ ವ್ಯಾಪ್ತಿಗೆ ಬರುತ್ತಿದೆ. ಇಲ್ಲ ಕದ್ರಿ ಠಾಣೆಗೆ ಬರುತ್ತಿದೆ ಎಂದು ದೂರು ಸ್ವೀಕರಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದರು ಎನ್ನಲಾಗಿದೆ. [ಕ್ರೈಂ]
ಸ್ಥಳೀಯ ರಿಕ್ಷಾ ಚಾಲಕರು ಹಾಗೂ ಸಾರ್ವಜನಿಕರು ಹೊಂಚು ಹಾಕಿ ಕಾದಿದ್ದು, ಕಾಮುಕರಿಬ್ಬರನ್ನು ಹಿಡಿದು ಥಳಿಸಿ, ಕದ್ರಿ ಠಾಣೆಗೆ ಒಪ್ಪಿಸಿದ್ದಾರೆ. ಭಜರಂಗಿಗಳಂತೆ ದೊಡ್ಡ ನಾಮಧರಿಸಿ ಬರುತ್ತಿದ್ದ ಈ ಇಬ್ಬರ ಗುರುತು ಹಿಡಿಯಲು ಕಷ್ಟವಾಗುತ್ತಿತ್ತು. ಆಮೇಲೆ ಸಮೀಪದ ತರಕಾರಿ ಅಂಗಡಿಯ ಹುಡುಗರು ಎಂದು ತಿಳಿದು ಬಂತು ಎಂದು ಸ್ಥಳೀಯರು ಹೇಳುತ್ತಾರೆ. ತರಕಾರಿ ಅಂಗಡಿ ಮಾಲೀಕನಿಗೆ ಇವರಿಬ್ಬರ ಚರ್ಯೆ ತಿಳಿದಿದ್ದರೂ ಸುಮ್ಮನಿದ್ದ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಸಾರ್ವಜನಿಕರಿಗೆ ಹೆಣ್ಮಕ್ಕಳು ಮನಸ್ಸಿನಲ್ಲೇ ಥ್ಯಾಂಕ್ಸ್ ಹೇಳಿ ಮನೆಗೆ ತೆರಳಿದ್ದಾರೆ.












Click it and Unblock the Notifications