ಜ.24 : ಗೌರ್ನರ್ ವಿರುದ್ಧ ಬಿಜೆಪಿ ಪೆರೇಡ್
ನವದೆಹಲಿ,
ಜ. 19 : ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಮತ್ತು ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಅವರ ನಡುವೆ ನಡೆಯುತ್ತಿರುವ ಹಣಾಹಣಿ ನಿರ್ಣಾಯಕ ಘಟ್ಟ ಬಂದು ತಲುಪಿದೆ. ರಾಜಭವನವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ರಾಜ್ಯಪಾಲರನ್ನು ತುರ್ತಾಗಿ ವಾಪಸ್ ಕರೆಸಿಕೊಳ್ಳಬೇಕು ಎಂದು ಆಗ್ರಹಿಸಿ ಜ.24 ರಂದು ಬಿಜೆಪಿ ಮುಖಂಡರು, ಸಂಸದರು ರಾಷ್ಪ್ರಪತಿ ಭವನದಲ್ಲಿ ಪೆರೇಡ್ ನಡೆಸಲು ತೀರ್ಮಾನಿಸಿದ್ದಾರೆ. id="toptextpromo">ಜಸ್ಟೀಸ್
ಲಾಯರ್ಸ್ ಫೋರಂಗೆ ತಮ್ಮ ವಿರುದ್ಧ ಮೊಕದ್ದಮೆ ಹೂಡಲು ರಾಜ್ಯಪಾಲರು ಅನುಮತಿ ಕೊಡಬಹುದು ಎಂದು ಆತಂಕಗೊಂಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಮಂಗಳವಾರ ವಿಶೇಷ ವಿಮಾನದ ಮೂಲಕ ದೆಹಲಿಗೆ ತೆರಳಿ ಬಿಜೆಪಿ ಮುಖಂಡರೊಂದಿಗೆ ಮಾತಕತೆ ನಡೆಸಿದ್ದಾರೆ. ಚರ್ಚೆ ನಂತರ ಮಾತನಾಡಿದ ಸಂಸದ ಡಿಬಿ ಚಂದ್ರೇಗೌಡ, ಜ. 24 ರಂದು ರಾಜ್ಯಪಾಲರನ್ನು ಹಿಂದಕ್ಕೆ ಕರೆಸಿಕೊಳ್ಳಿ ಎಂದು ಆಗ್ರಹಿಸಿ ಪೆರೇಡ್ ನಡೆಸಲು ನಿರ್ಧರಿಸಿರುವುದಾಗಿ ಹೇಳಿದರು. id='are-slot-1' class='oiad oi-axt oiadv'> id='top-searched-articles'>ಪದೆಪದೇ
ಸರಕಾರ ಅಭಧ್ರಗೊಳಿಸಲು ಯತ್ನಿಸುತ್ತಿರುವ ರಾಜ್ಯಪಾಲರ ವಿರುದ್ಧ ಯಾವ ಬತ್ತಳಿಕೆ ಪ್ರಯೋಗಿಸಬೇಕು. ಸದ್ಯ ಎದುರಾಗಿರುವ ಕಂಟಕದಿಂದ ಹೇಗೆ ಪಾರಾಗಬೇಕು ಎಂಬ ಬಗ್ಗೆ ಚರ್ಚಿಸಲು ಇಂದು ಬೆಂಗಳೂರಿನಲ್ಲಿ ಸಚಿವ ಸಂಪುಟ ನಡೆಯುವ ಸಾಧ್ಯತೆ ಇದೆ. ಮುಖ್ಯಮಂತ್ರಿ ವಿರುದ್ಧ ಮೊಕದ್ದಮೆ ದಾಖಲಿಸಲು ರಾಜ್ಯಪಾಲರು ಮುಂದಾದರೆ ಏನು ಮಾಡಬೇಕು. ಅನುಸರಿಸಬೇಕಾದ ಕಾನೂನು ಕ್ರಮಗಳ ಬಗ್ಗೆ ಪಕ್ಷದ ಮುಖಂಡರೊಂದಿಗೆ ಸುದೀರ್ಘ ಚರ್ಚೆ ನಡೆಸಲಾಗಿದೆ.(ಎಚ್ ಆರ್
ಭಾರದ್ವಾಜ್)












Click it and Unblock the Notifications