ಯೋಗೀಶ್ ಭಟ್ ಉಪಸಭಾಧ್ಯಕ್ಷರಾಗಿ ಆಯ್ಕೆ
ಬೆಂಗಳೂರು,
ಜ. 11 : ಪ್ರತಿಪಕ್ಷಗಳ ಪ್ರತಿಭಟನೆ, ಗೊಂದಲದ ನಡುವೆಯೇ ವಿಧಾನಸಭೆಯ ನೂತನ ಉಪಸಭಾಧ್ಯಕ್ಷರಾಗಿ ಬಿಜೆಪಿಯ ಶಾಸಕ ಯೋಗೀಶ್ ಭಟ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. id="toptextpromo">ನಾಮಪತ್ರ
ಸಲ್ಲಿಸಲು ಸೋಮವಾರ ಬೆಳಗ್ಗೆ 10 ರಿಂಗ 12 ಗಂಟೆವರೆಗೆ ಸಮಯ ನಿಗದಿ ಮಾಡಲಾಗಿತ್ತು. ಈ ಅವಧಿಯಲ್ಲಿ ಯೋಗೀಶ್ ಭಟ್ ಸಲ್ಲಿಸಿದ್ದರು. ಉಳಿದಂತೆ ಯಾರೂ ನಾಮಪತ್ರವನ್ನು ಸಲ್ಲಿಸಿರಲಿಲ್ಲ. ಹೀಗಾಗಿ ಮಂಗಳೂರು ಬಿಜೆಪಿ ಶಾಸಕ ಯೋಗೀಶ್ ಭಟ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸ್ಪೀಕರ್ ಕೆ ಜಿ ಬೋಪಯ್ಯ ಸದನದಲ್ಲಿ ಘೋಷಣೆ ಮಾಡಿದರು. id='are-slot-1' class='oiad oi-axt oiadv'> id='top-searched-articles'>16
ಮಂದಿ ಶಾಸಕರ ಸದಸ್ಯತ್ವ ಅನರ್ಹಗೊಳಿಸಿರುವ ಹಿನ್ನೆಲೆಯಲ್ಲಿ ಉಪಸಭಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವುದು ಸರಿಯಲ್ಲ. ಈ ಪ್ರಕರಣ ಇತ್ಯರ್ಥವಾದ ನಂತರವೇ ಮುಂದಿನ ಚುನಾವಣೆ ನಡೆಸುವುದು ಸೂಕ್ತ ಎಂದು ಆಗ್ರಹಿಸಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಎಲ್ ಕೆಜಿ, ಯುಕೆಜಿ ಮಕ್ಕಳಂತೆ ಆಡಬೇಡಿ ಎಂದು ಸರಕಾರಕ್ಕೆ ಕಿವಿ ಮಾತು ಹೇಳಿದರು. ಈ ಸಂದರ್ಭದಲ್ಲಿ ಸದನದಲ್ಲಿ ಕೆಲ ಕಾಲ ಗೊಂದಲ ಏರ್ಪಟ್ಟಿತು.(ಕೆ ಜಿ
ಬೋಪಯ್ಯ)












Click it and Unblock the Notifications