ಅಶೋಕಪುರಂ ವ್ಯಕ್ತಿ ಸಾವು, ಪತ್ನಿ ಮೇಲೆ ಶಂಕೆ?
ಮೈಸೂರು,
ಜ. 10: ಇಲ್ಲಿನ ಅಶೋಕಪುರಂ ಬಡಾವಣೆಯಲ್ಲಿ ಕಳೆದ ರಾತ್ರಿ ಸಂಭವಿಸಿದ ವ್ಯಕ್ತಿಯೊಬ್ಬನ ಸಾವು ಹಲವಾರು ಅನುಮಾನಗಳ ಹುತ್ತವನ್ನು ಕಟ್ಟುತ್ತಿದೆ. ಕೌಟುಂಬಿಕ ಕಲಹ, ಪತ್ನಿಗೆ ಜೀವನಾಂಶ, ಕುಡುಕ ಪತಿ ಸಹವಾಸದಿಂದ ದೂರದ ಪತ್ನಿ, ಮೃತಪಟ್ಟ ವ್ಯಕ್ತಿ ದೇಹದ ಮೇಲೆ ಗಾಯಗಳು..ಇತ್ಯಾದಿ ಅಂಶಗಳು ಅಸಹಜ ಸಾವು ಎಂದು ಸೂಚಿಸುತ್ತಿದೆ. ಮೃತ ವ್ಯಕ್ತಿಯ ಕಡೆಯವರು ದೂರು ನೀಡಿದ್ದು, ಆಶೋಕಪುರಂ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. id="toptextpromo">ಸಮಾಜ
ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ಅಡುಗೆ ಕೆಲ್ಸ ಮಾಡಿಕೊಂಡಿದ್ದ ಅಶೋಕಪುರಂ ಬಡಾವಣೆಯ 11ನೆ ಕ್ರಾಸ್ ನಿವಾಸಿ ಸಿದ್ದರಾಜು (53) ಸಾವಿಗೀಡಾದವರು. ಆದರೆ, ಮಹಾನ್ ಕುಡುಕನಾಗಿದ್ದ ಈತ ತನ್ನ ಪತ್ನಿ ಕೌಸಲ್ಯಳಿಗೆ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ಪತ್ನಿ ಸುಮಾರು ಏಳು ವರ್ಷಗಳನ್ನು ತೊರೆದು ತವರುಮನೆ ಸೇರಿದ್ದಳು. ಆದರೆ, ಅಲ್ಲಿಗೂ ಹೋಗಿ ಸಿದ್ದರಾಜು ನಿತ್ಯ ಜಗಳವಾಡುತ್ತಿದ್ದ. id='are-slot-1' class='oiad oi-axt oiadv'> id='top-searched-articles'>ಸೋಮವಾರ
ರಾತ್ರಿ ಎಂದಿನಂತೆ ಪತ್ನಿ ತವರು ಮನೆಗೆ ಹೋದ ಸಿದ್ದರಾಜು ಮತ್ತೆ ಹಿಂತಿರುಗಲಿಲ್ಲ. ಇದರಿಂದ ಗಾಬರಿಗೊಂಡ ಆತನ ಸಂಬಂಧಿಕರು ಕುಡಿತದಿಂದ ಸಾವನ್ನಪ್ಪಿರಬಹುದು ಎಂದು ಎಣಿಸಿ ಶವಸಂಸ್ಕಾರಕ್ಕೆ ಮುಂದಾಗಿದ್ದರು. ಆದರೆ, ಮೃತನ ತಾಯಿ ಚಿಕ್ಕವೀರಮ್ಮ ಮತ್ತು ಸಹೋದರ ಈರಣ್ಣ ಎಂಬವರು ಸಿದ್ದರಾಜು ಅಸಹಜ ರೀತಿಯಲ್ಲಿ ಮೃತಪಟ್ಟಿದ್ದು, ಶವದ ಮೇಲೆ ಗಾಯದ ಗುರುತುಗಳಿವೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದರು.ಕೋರ್ಟ್
ಮೆಟ್ಟಿಲೇರಿದ
ಪತ್ನಿ:
ಪತಿಯಿಂದ
ದೂರವಾಗಿದ್ದ
ಕೌಸಲ್ಯ
ತನಗೆ
ಜೀವನಾಂಶ
ಕೊಡಿಸುವಂತೆ
ನ್ಯಾಯಾಲಯದ
ಮೊರೆಹೋಗಿದ್ದರು.
ಆದರೆ,
ಪ್ರಕರಣ
ಇತ್ಯರ್ಥವಾಗದೇ
ವಿಳಂಬವಾಗಿ
ವಿಚಾರಣೆ
ಸಾಗಿತ್ತು.
ಇದರಿಂದ
ಬೇಸತ್ತ
ಆಕೆ,
ತನ್ನ
ಸೋದರ
ದಿನೇಶ್
ಎಂಬಾತನ
ಜೊತೆ
ಸೇರಿ
ಸಿದ್ದರಾಜುವನ್ನು
ಕೊಲೆ
ಮಾಡಿರುವ
ಸಾಧ್ಯತೆಯಿದೆ
ಎಂದು
ಸಿದ್ದರಾಜು
ಸಂಬಂಧಿಕರು
ಆರೋಪಿಸಿದ್ದಾರೆ.
ಪೊಲೀಸರು
ಶವದ
ಮರಣೋತ್ತರ
ಪರೀಕ್ಷೆ
ವರದಿ
ಬಂದ
ನಂತರ
ಮುಂದಿನ
ಕ್ರಮ
ಕೈಗೊಳ್ಳುವುದಾಗಿ
ಭರವಸೆ
ನೀಡಿದ್ದಾರೆ.
[ಸಾವು]












Click it and Unblock the Notifications