ಆಟಿಕೆ ಪಿಸ್ತೂಲಿನಿಂದ ರಿಕ್ಷಾ ಚಾಲಕನಿಗೆ ಟೆಕ್ಕಿ ಬೆದರಿಕೆ
ಬೆಂಗಳೂರು,
ಜ.11: ಬಹುಶಃ ಈ ರೀತಿ ಐನಾತಿ ಐಡಿಯಾಗಳು ಟೆಕ್ಕಿಗಳಿಗೆ ಬೇಗ ಹೊಳೆಯುತ್ತದೆ. ಬೆಂಗಳೂರಿನ ಆಟೋರಿಕ್ಷಾ ಚಾಲಕರು ಯಮಾರಿಸಿ, ಹಣ ಗಳಿಸುವುದೇನೋ ನಿಜ. ಹಾಗಂತ, ಇದುವರೆವಿಗೂ ಯಾರೂ ಈ ರೀತಿ ಸಾಹಸ ಮಾಡಿರಲಿಲ್ಲ. ವೈಟ್ ಫೀಲ್ಡ್ ಬಳಿಯ ಐಟಿ ಕಂಪೆನಿಯಲ್ಲಿ ದುಡುತ್ತಿರುವ ಟೆಕ್ಕಿ ಪ್ರಭು ಮಾಡಿದ ಕೆಲಸ ನಗಬೇಕೋ, ಹುಚ್ಚುತನ ಎನ್ನಬೇಕೊ ತಿಳಿಯದು. ಹೆಚ್ಚು ಬಾಡಿಗೆ ಕೇಳುವ ಆಟೋ ಚಾಲಕರಿಗೆ ಬುದ್ಧಿ ಕಲಿಸಲು ಪ್ರಭು(28) ಆಟಿಕೆ ಪಿಸ್ತೂಲ್ ಹಿಡಿದು ಬೆದರಿಸಿದ್ದಾನೆ. ನಂತರ ಮಹದೇವಪುರ ಪೊಲೀಸರ ಕೈಗೆ ಸಿಕ್ಕಿ ಜೈಲು ಕೋರ್ಟ್ ದರ್ಶನ ಮಾಡಿ ಬಂದಿದ್ದಾನೆ. id="toptextpromo">ಆಗಿದ್ದಿಷ್ಟು:
ಮಹದೇವಪುರ
ಬಸ್
ನಿಲ್ದಾಣದಿಂದ
ದೊಡ್ಡನೆಕ್ಕುಂದಿ
ಬಳಿಯ
ಆಲ್ಫೇನ್
ಅಪಾರ್ಟ್‌ಮೆಂಟ್
ಕಡೆಗೆ
ಬರುವಂತೆ
ಆತ
ಆಟೋ
ಚಾಲಕ
ಗೋಪಿಗೆ
ಕೇಳಿದ್ದಾನೆ.
ಬರಲು
ಒಪ್ಪಿದ
ಆತ
ಎರಡು
ಪಟ್ಟು
ಹಣ
ನೀಡುವಂತೆ
ಬೇಡಿಕೆ
ಇಟ್ಟಾಗ
ಆಕ್ರೋಶಗೊಂಡ
ಪ್ರಭು
ಚಾಲಕನಿಗೆ
ಚೆನ್ನಾಗಿ
ಬೈದಿದ್ದಾನೆ.
ಮಾತಿನ
ಚಕಮಕಿ,
ಕೈ
ಕೈ
ಮಿಲಾಯಿಸುವ
ಹಂತ
ತಲುಪಿದಾಗ
ಪ್ರಭು
ತನ್ನ
ಬಳಿಯಿದ್ದ
ಆಟಿಕೆ
ಪಿಸ್ತೂಲ್
ಹೊರ
ತೆಗೆದು
ಇದೇನು
ಗೊತ್ತಾ,
ಸುಟ್ಟು
ಬಿಡುತ್ತೀನಿ
ಎಂದು
ಫಿಲ್ಮಿ
ಸ್ಟೈಲ್
ನಲ್ಲಿ
ಗದರಿಸಿದ್ದಾನೆ.
id='are-slot-1'
class='oiad
oi-axt
oiadv'>
id='top-searched-articles'>
ಪಿಸ್ತೂಲ್
ನೋಡಿ ಗಾಬರಿಯಾದರೂ ಗೋಪಿ ನಂತರ ಧೈರ್ಯ ಮಾಡಿ ಪೊಲೀಸರ ಮೊರೆ ಹೊಕ್ಕಿದ್ದಾನೆ. ಇನ್‌ಸ್ಪೆಕ್ಟರ್ ಮಹಮ್ಮದ್ ರಫೀಕ್ ಅವರ ತಂಡ ಟೆಕ್ಕಿಯನ್ನು ಬಂಧಿಸಿ ವಿಚಾರಿಸಿದಾಗ , ನನಗೆ ಜೀವ ಬೆದರಿಕೆ ಇದೆ ಅದಕ್ಕೆ ಪಿಸ್ತೂಲ್ ಇಟ್ಟುಕೊಂಡಿದ್ದೆ ಎಂದಿದ್ದಾನೆ. ಕೊಲೆ ಬೆದರಿಕೆ ಪ್ರಕರಣ ದಾಖಲಿಸಿಕೊಂಡಿರುವ ಮಹದೇವಪುರ ಪೊಲೀಸ್ ಠಾಣೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. [ಆಟೋರಿಕ್ಷಾ]











Click it and Unblock the Notifications