ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿನಿ ಗೋವಾ ವಿರುಪಾಪುರಗಡ್ಡೆಗೆ ಎಂದು ಮುಕ್ತಿ?

By Mahesh
|
Google Oneindia Kannada News

Virupapur Gadde, Gangavati
ಗಂಗಾವತಿ, ಜ.9: ಅಕ್ರಮ ಚಟುವಟಿಕೆ, ಅನೈತಿಕ ಆಟಗಳ ಕೂಟವಾಗಿ ಕುಖ್ಯಾತಿಯಾಗಿರುವ ಹಂಪಿ ಸಮೀಪದ ವಿರುಪಾಪುರಗಡ್ಡೆಯ ಶುಚೀಕರಣಕ್ಕೆ ಸ್ಥಳೀಯರು ಶತಪ್ರಯತ್ನ ನಡೆಸಿದ್ದಾರೆ. ಇದರ ಫಲವಾಗಿ ವಿಶ್ವ ಪರಂಪರೆ ತಾಣವಾದ ಹಂಪೆ ಸಮೀಪದ ಅಕ್ರಮ ರೆಸಾರ್ಟ್ ಗಳನ್ನು ತೆರವುಗೊಳಿಸಲು ವಿಶ್ವಪರಂಪರೆ ಪ್ರಾಧಿಕಾರ ಸೂಚನೆ ನೀಡಿದ್ದು, 2 ರೆಸಾರ್ಟ್ ಗಳನ್ನು ನೆಲಸಮಗೊಳಿಸಲಾಗಿದೆ.

ವಿಶೇಷವಾಗಿ ವಿದೇಶಿಯರಿಗಾಗಿ ನಿರ್ಮಿತವಾದ ಸುಮಾರು 30 ಕೊಠಡಿಗಳಿದ್ದ 2 ರೆಸಾರ್ಟ್ ಗಳನ್ನು ಶನಿವಾರ ನೆಲಕ್ಕುರಳಿಸಲಾಗಿದೆ. ಮೂರು ತಿಂಗಳ ಹಿಂದೆ ಬಳ್ಳಾರಿ ಆರ್ ವಿಜಯ ವೆಂಕಟ ನಾರಾಯಣ ಹಾಗೂ ಜಂಗಲಿ ಗ್ರಾಮದ ಗಾಂಧಿಬಾಬು ಅವರ ಮಗ ಆರ್ ನರೇಂದ್ರ ಎಂಬುವರು ಸುಮಾರು 17 ಲಕ್ಷಕ್ಕೂ ಹೆಚ್ಚು ಹಣ ಹೂಡಿ ರೆಸಾರ್ಟ್ ನಿರ್ಮಿಸಿದ್ದರು.

ಇದಕ್ಕೆ ಹಂಪಿ ಪ್ರಾಧಿಕಾರ ಆಕ್ಷೇಪ ವ್ಯಕ್ತಪಡಿಸಿ, ವಿರುಪಾಪುರಗಡ್ಡೆಯಲ್ಲಿ ಯಾವುದೇ ಹೊಸ ಕಟ್ಟಡ ನಿರ್ಮಿಸಬಾರದು ಎಂದು ನಿರ್ದೇಶನ ನೀಡಿತ್ತು. ಆದರೆ, ಪ್ರಾಧಿಕಾರದ ಸೂಚನೆ ಪಾಲಿಸದೆ ಕಟ್ಟಡಗಳನ್ನು ನಿರ್ಮಿಸಲಾಗಿತ್ತು. ಸದ್ಯಕ್ಕೆ ಎರಡು ರೆಸಾರ್ಟ್ ಗಳನ್ನು ನೆಲಸಮಗೊಳಿಸಲಾಗಿದ್ದು, ಅನಧಿಕೃತ ಕಟ್ಟಡಗಳನ್ನು ಹಾಗೂ ಚಟುವಟಿಕೆಗಳನ್ನು ನಿಯಂತ್ರಿಸಲಾಗುವುದು ಎಂದು ವಿಶ್ವ ಪರಂಪರೆ ಪ್ರಾಧಿಕಾರದ ಪ್ರಾದೇಶಿಕ ಕಚೇರಿ ತಿಳಿಸಿದೆ. [ಹಂಪಿ]

English summary
Illegal buildings near Hampi and Virupapur Gadde, Gangavati is damaging the World Heritage Site. In order to curb the illegal activities near Virupapur Gadde(gaddi) Heritage center has taken action to demolish illegal structures.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X