ಸಿಎಂ, ಶಿಕಾರಿಪುರ ಜನತೆಯ ಕ್ಷಮೆಯಾಚಿಸಲಿ

"ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಈ ಹೇಳಿಕೆ ಉದ್ದಟತನದಿಂದ ಕೂಡಿದೆ. ಇದು ಶಿಕಾರಿಪುರ ಜನತೆಗೆ ಮಾಡಿದ ಅವಮಾನವಾಗಿದೆ. ತತ್‌ಕ್ಷಣವೇ ಅವರು ಶಿಕಾರಿಪುರ ತಾಲೂಕಿನ ಮತದಾರರ ಕ್ಷಮೆಯಾಚನೆ ಮಾಡಬೇಕು" ಎಂದು ಒತ್ತಾಯಿಸಿದ್ದಾರೆ.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಓರ್ವ ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪ ಈ ರೀತಿ ಹೇಳಿಕೆ ನೀಡಿದ್ದು ಸರಿಯಲ್ಲ. ಮತದಾರರಿಗೆ ಬೆದರಿಕೆ ಹಾಕುವ ಸ್ವರೂಪದಲ್ಲಿ ಯಡಿಯೂರಪ್ಪ ಮಾತನಾಡಿದ್ದಾರೆ. ಈ ಹೇಳಿಕೆಯನ್ನು ಅವರು ವಾಪಾಸ್ಸು ಪಡೆಯಬೇಕು. ಇಲ್ಲದಿದ್ದರೆ ಸಿಎಂ ವಿರುದ್ದ ಕಪ್ಪು ಭಾವುಟ, ಘೇರಾವ್ ಸೇರಿದಂತೆ ಎಲ್ಲ ರೀತಿಯ ಹೋರಾಟ ನಡೆಸಲಾಗುವುದು ಎಂದು ಅವರು ಹೇಳಿದರು.
ಈಸೂರಿನಲ್ಲಿ ಹಣ ಬಲ ಗೆಲ್ಲಲಿಲ್ಲ : ಶಿಕಾರಿಪುರ ತಾಲೂಕಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಬಿಜೆಪಿ ಪಕ್ಷ ಕೋಟ್ಯಾಂತರ ರೂ.ಗಳನ್ನು ಖರ್ಚು ಮಾಡಿದೆ. ಹಾಗೆಯೇ ತಮ್ಮ ಕ್ಷೇತ್ರದಲ್ಲಿಯೂ ಕೂಡ ಬಿಜೆಪಿ ತಮ್ಮನ್ನು ಸೋಲಿಸಲು ಇನ್ನಿಲ್ಲದ ಕಸರತ್ತು ನಡೆಸಿತು. ಆದರೆ ಇವ್ಯಾವುದಕ್ಕೂ ಈಸೂರು ಮತದಾರರು ಬೆಲೆ ಕೊಟ್ಟಿಲ್ಲ. ಬಿಜೆಪಿ ತಕ್ಕ ಪಾಠ ಕಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗೆ ತಾವು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ.
ಮತದಾರರಿಗೆ ನೀಡಿದ ಎಲ್ಲ ರೀತಿಯ ಭರವಸೆಗಳನ್ನು ಈಡೇರಿಸುತ್ತೇನೆ ಎಂದು ಅವರು ಭರವಸೆ ನೀಡಿದರು. ಮುಂದಿನ ದಿನಗಳಲ್ಲಿ ಬಿಜೆಪಿ ವಿರುದ್ದದ ಹೋರಾಟವನ್ನು ಶಿಕಾರಿಪುರದಲ್ಲಿ ಮತ್ತಷ್ಟು ತೀವ್ರಗೊಳಿಸಲಾಗುವುದು. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ಕುಟುಂಬದ ಸದಸ್ಯರ ಅವ್ಯವಹಾರವನ್ನು ಬಯಲಿಗೆಳೆಯಲಾಗುವುದು ಎಂದು ಅವರು ಹೇಳಿದರು. [ಮತದಾರ]











Click it and Unblock the Notifications