ರೆಡ್ಡಿಗಳಿಂದ ಅಕ್ರಮ ಗಣಿಗಾರಿಕೆ : ಸಿವಿಸಿ ವರದಿ

ಅಲ್ಲದೇ, ಕರ್ನಾಟಕ-ಆಂಧ್ರದ ಗಡಿ ವಿವಾದ ಇರುವ ಹಿನ್ನಲೆಯಲ್ಲಿ ಉಭಯ ರಾಜ್ಯಗಳ ಗಡಿರೇಖೆಯನ್ನು ಗುರುತಿಸಬೇಕು. ಉಭಯ ರಾಜ್ಯಗಳ ಗಡಿಯನ್ನು ಗುರುತಿಸವರೆಗೂ ಉಭಯ ರಾಜ್ಯಗಳ ಗಡಿಗಳಲ್ಲಿ ಇರುವ ಗಣಿ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕು ಎಂದು ಸಿಇಸಿ ಶಿಫಾರಸು ಮಾಡಿದೆ.
ಈಗಾಗಲೇ ಧ್ವಂಸಗೊಂಡಿರುವ ಆಂಧ್ರದ ವ್ಯಾಪ್ತಿಯಲ್ಲಿ ಇರುವ ಜಿಟಿಎಸ್ ಪಾಯಿಂಟ್ ಅನ್ನು ಗುರುತಿಸಿ, ಜಿಟಿಎಸ್ ಅನ್ನು ಅಳವಡಿಸಿ ಬಳ್ಳಾರಿ ಐರನ್ ಓರ‍್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ವೈ. ಮಹಾಬಲೇಶ್ವರಪ್ಪ ಕಂಪನಿಗಳ ಪ್ರದೇಶಗಳನ್ನು ಗುರುತಿಸಿದ ನಂತರವೇ ಈ ಕಂಪನಿಗಳು ಗಣಿ ಚಟುವಟಿಕೆಗಳನ್ನು ನಡೆಸಲು ಪರವಾನಗಿ ನೀಡಬೇಕು.
ಸಿಇಸಿ ವರದಿ ಹಿಂದೆ ಹಣದ ಪ್ರಭಾವ : ಜನಾರ್ದನ ರೆಡ್ಡಿ
ಈ ಪ್ರದೇಶದ ಅರಣ್ಯ ಪ್ರದೇಶದಲ್ಲಿ ಇರುವ ಅರಣ್ಯ ತ್ಯಾಜ್ಯವನ್ನು ಗುರುತಿಸಿ ಅದು ಯಾವ ಕಂಪನಿಗಳ ವ್ಯಾಪ್ತಿಯಲ್ಲಿ ಬರುವುದೋ ಅವರಿಗೆ ಪ್ರಸ್ತುತ ಇರುವ ದಂಡಕ್ಕಿಂತಲೂ 20 ಪಟ್ಟು ಹೆಚ್ಚಿಗೆ ದಂಡವನ್ನು ವಿಧಿಸಬೇಕು ಎಂದು ಶಿಫಾರಸು ಮಾಡಿದೆ. ಮತ್ತು ಈ ಕುರಿತು ಮೇಲ್ಮನವಿ ಸಲ್ಲಿಸಲು 2 ವಾರ ಗಡುವು ನೀಡಿದೆ.
ಜೀವ್ರಾಜ್‌ಕಾ ನೇತೃತ್ವದ ಮಹೇಂದ್ರ ವ್ಯಾಸ್ ಮತ್ತು ರಾವ್ ಅವರನ್ನು ಒಳಗೊಂಡ ಸಿಇಸಿ ತಂಡ ಡಿಸೆಂಬರ್‌ನಲ್ಲಿ ಸ್ಥಳಕ್ಕೆ ಭೇಟಿ ನೀಡಿ ಈ ವರದಿ ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಸಿದೆ.
ಹುಬ್ಬಳ್ಳಿ ಮೂಲದ ಎಸ್ ಆರ್ ಹಿರೇಮಠ ಅವರು ಈ ವಿಷಯ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್‌ನ ಗ್ರೀನ್‌ಬೆಂಚ್‌ಗೆ ಅರ್ಜಿ ಸಲ್ಲಿಸಿದ್ದರು. ಟಪಾಲ್ ಗಣೇಶ್ ಕೂಡ ಈ ಕುರಿತು ಸುದೀರ್ಘ ಹೋರಾಟ ನಡೆಸಿದ್ದರು.(ಗಣಿಗಾರಿಕೆ)












Click it and Unblock the Notifications