ಗಣತಂತ್ರ ದಿನದಂದು ತ್ರಿವರ್ಣ ಧ್ವಜ ಹಾರಿಸಬೇಡಿ
ಜಮ್ಮು,
ಜ.6: ಗಣರಾಜ್ಯೋತ್ಸವ ದಿನ ಶ್ರೀನಗರದಲ್ಲಿ ತ್ರಿವರ್ಣ ಧ್ವಜ ಹಾರಿಸುವ ಯೋಜನೆ ಕೈಬಿಡುವಂತೆ ಬಿಜೆಪಿಗೆ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಆಗ್ರಹಿಸಿದ್ದಾರೆ. ಕಣಿವೆ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಲ್ಲಿ ಅದಕ್ಕೆ ಆ ಪಕ್ಷವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. id="toptextpromo">ಈಗ
ತಣ್ಣಗಿರುವ ಕಾಶ್ಮೀರದಲ್ಲಿ ಮತ್ತೆ ಬೆಂಕಿ ಹಚ್ಚಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಅವರು ಬುಧವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಬಿಜೆಪಿ ಯುವ ಮೋರ್ಚಾ ಜನವರಿ 26ರಂದು ಹಮ್ಮಿಕೊಂಡಿರುವ ಕಾಶ್ಮೀರ ಚಲೋ ರ‌್ಯಾಲಿ ಮತ್ತು ಶ್ರೀನಗರದ ಲಾಲ್‌ಚೌಕದಲ್ಲಿ ತ್ರಿವರ್ಣ ಧ್ವಜ ಹಾರಿಸುವ ಯೋಜನೆ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು. id='are-slot-1' class='oiad oi-axt oiadv'> id='top-searched-articles'>ಗಣತಂತ್ರ
ದಿನ ಶ್ರೀನಗರಲ್ಲಿ ನಡೆಯುವ ಅಧಿಕೃತ ಸಮಾರಂಭದಲ್ಲಿ ಸರ್ಕಾರದ ವತಿಯಿಂದ ತ್ರಿವರ್ಣ ಧ್ವಜ ಹಾರಿಸಲಾಗುವುದು. ಜೊತೆಗೆ ಎಲ್ಲ ಜಿಲ್ಲಾ ಕೇಂದ್ರಗಳು, ಭದ್ರತಾಪಡೆ, ಸೇನೆ ಹಾಗೂ ಪೊಲೀಸ್ ಮೈದಾನ ಸೇರಿದಂತೆ ಹಲವೆಡೆ ಧ್ವಜ ಹಾರಿಸಲಾಗುತ್ತದೆ. ಹೀಗಿರುವಾಗ ಬಿಜೆಪಿ ವೈಯಕ್ತಿಕವಾಗಿ ಧ್ವಜ ಹಾರಿಸುವ ಅಗತ್ಯವಿಲ್ಲ. ಇತರರಿಗಿಂತ ತಮ್ಮ ಪಕ್ಷ ಹೆಚ್ಚು ರಾಷ್ಟ್ರೀಯವಾದಿ ಎಂದು ತೋರಿಸಿಕೊಳ್ಳುವ ಹುಚ್ಚುತನ ಬಿಟ್ಟುಬಿಡಿ ಎಂದು ಒಮರ್ ಹೇಳಿದ್ದಾರೆ. [ಬಾವುಟ]











Click it and Unblock the Notifications