ಚಿಕ್ಕಮ್ಮನೊಂದಿಗೆ ಸರಸವಾಡಿದ ಯುವಕನ ಹತ್ಯೆ
ಗೌರಿಬಿದನೂರು,
ಜ. 6 : ಚಿಕ್ಕಮ್ಮನೊಂದಿಗೆ ಚಕ್ಕಂದಕ್ಕಿಳಿದ ವ್ಯಕ್ತಿಯೊಬ್ಬನನ್ನು ಆತನ ಚಿಕ್ಕಪ್ಪನೇ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ದಾರುಣ ಘಟನೆ ತಾಲೂಕಿನ ಬಾದಮರಳೂರು ಗ್ರಾಮದಲ್ಲಿ ನಡೆದಿದೆ. id="toptextpromo">ಶಿವಕುಮಾರ
(30) ಎಂಬಾತನೇ ಮೃತಪಟ್ಟ ಯುವಕ. ಶಿವಕುಮಾರ ಚಿಕ್ಕಮ್ಮ ಸುಜಾತಾಳೊಂದಿಗೆ ಅಕ್ರಮ ಸಂಬಂಧವಿರಿಸಿಕೊಂಡಿದ್ದು ಆತನ ಚಿಕ್ಕಪ್ಪ ಆಂಜಿನಪ್ಪನಿಗೆ ಗೊತ್ತಾಗಿದೆ. ಅಲ್ಲದೇ ಜ 1ರಂದು ಅವರಿಬ್ಬರು ಅಕ್ರಮ ಸಂಬಂಧದಲ್ಲಿ ತೊಡಗಿದ್ದನ್ನು ಪ್ರತ್ಯಕ್ಷವಾಗಿ ಕಂಡ ಆಂಜಿನಪ್ಪ ಶಿವಕುಮಾರನ ತಲೆಗೆ ದೊಣ್ಣೆಯಿಂದ ಹೊಡೆದು ಹತ್ಯೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಘಟನೆಯಿಂದ
ತೀವ್ರವಾಗಿ ಗಾಯಗೊಂಡ ಶಿವಕುಮಾರ ನನ್ನು ತಕ್ಷಣವೇ ಇಲ್ಲಿನ ಸಾರ್ವಜನಿಕ ಆಸ್ಪತ್ರೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶಿವಕುಮಾರ ಬುಧವಾರ ಸಂಜೆ ಮೃತಪಟ್ಟಿದ್ದಾನೆ. ಆರೋಪಿ ಅಂಜಿನಪ್ಪ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.(ಕ್ರೈಂ)











Click it and Unblock the Notifications