ಕರ್ನಾಟಕಕ್ಕೆ ಒಲಿದ ಕೃಷ್ಣಾ ನದಿ

Almatti Dam
ನವದೆಹಲಿ, ಡಿ. 30 : ಭಾರಿ ಕುತೂಹಲ ಕೆರಳಿಸಿದ್ದ ಕೃಷ್ಣಾ ನದಿ ನೀರು ಹಂಚಿಕೆ ನ್ಯಾಯಾಧೀಕರಣದ ತೀರ್ಪು ಹೊರಬಿದ್ದಿದೆ. ಆಲಮಟ್ಟಿ ಆಣೆಕಟ್ಟಿನ ಎತ್ತರವನ್ನು 524.25 ಅಡಿಗೆ ಎತ್ತರಿಸಲು ಅನುಮತಿ ನೀಡುವ ಮೂಲಕ ನ್ಯಾಯಾಧೀಕರಣ ಐತಿಹಾಸಿಕ ತೀರ್ಪು ನೀಡಿದೆ.

ಈ ತೀರ್ಪಿಗೆ ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವಡೆ ತೀರ್ಪನ್ನು ಸ್ವಾಗತಿಸಿದ್ದರೆ, ಇನ್ನು ಕೆಲ ಕಡೆಗಳಲ್ಲಿ ಸುಮಾರು 50 ಟಿಎಂಸಿ ನೀರಿನಿಂದ ವಂಚಿತರಾಗಿದ್ದೇವೆ ಎನ್ನುವ ಅಸಮಾಧಾನ ಕೂಗು ರಾಜ್ಯದ ವಿವಿಧ ಭಾಗಗಳಿಂದ ಕೇಳಿ ಬಂದಿದೆ. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶ ಬ್ರಿಜೇಶ್ ಮಿಶ್ರಾ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಿ ಕೆ ಶೇಟ್, ನ್ಯಾ. ಎಸ್ ಪಿ ಶ್ರೀವಾಸ್ತವ ನೇತೃತ್ವದ ನ್ಯಾಯಾಧೀಕರಣ ಈ ತೀರ್ಪು ನೀಡಿದೆ.

ತೀರ್ಪಿನ ಮುಖ್ಯಾಂಶಗಳು

* ಆಲಮಟ್ಟಿನ ಆಣೆಕಟ್ಟಿನ ಎತ್ತರವನ್ನು 519.6 ರಿಂದ 524.25 ಅಡಿಗೆ ಹೆಚ್ಚಿಸಲು ಅನುಮತಿ.
* ಎ ಮತ್ತು ಬಿ ಸ್ಕೀಂ ನಲ್ಲಿ ರಾಜ್ಯಕ್ಕೆ ಒಟ್ಟು 911 ಟಿಎಂಸಿ ನೀರು ಲಭ್ಯ.
* ಎ ಸ್ಕೀಂನಲ್ಲಿ 734 ಟಿಎಂಸಿ ಮತ್ತು, ಬಿ ಸ್ಕೀಂ ನಲ್ಲಿ 177 ಟಿಎಂಸಿ ನೀರು ಹಂಚಿಕೆ.
* ಆಂಧ್ರಪ್ರದೇಶಕ್ಕೆ ಸುಮಾರು 1001 ಟಿಎಂಸಿ ನೀರು ಬಳಕೆಗೆ ನ್ಯಾಯಾಧೀಕರಣ ಅನುಮತಿ.
* ಮಹಾರಾಷ್ಟ್ರ ಕೇವಲ 81 ಟಿಎಂಸಿ ನೀರು ಬಳಕೆಗೆ ಅನುಮತಿ.
* ಬಿ ಸ್ಕೀಂನಲ್ಲಿ ಅಂಧ್ರಪ್ರದೇಶ 190 ಟಿಎಂಸಿ ನೀರು ಬಳಕೆಗೆ ಅನುಮತಿ.
* 2050 ರ ತನಕ ಈ ತೀರ್ಪಿನಲ್ಲಿ ಯಾವುದೇ ಬದಲಾದವಣೆ ಇಲ್ಲ.
* ನ್ಯಾಯಾಧೀಕರಣ ತೀರ್ಪಿಗೆ ಮಹಾರಾಷ್ಟ್ರ ಸರಕಾರ ಅತೃಪ್ತಿ.
* ಸಂತಸದಲ್ಲಿ ತೇಲಾಡುತ್ತಿರುವ ಆಂಧ್ರಪ್ರದೇಶ.
* ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ. ತುಸು ಸಂತಸವೇ ಜಾಸ್ತಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+