ತೆರಿಗೆ ವಂಚನೆ ಸುಳಿಯಲ್ಲಿ ಬಳ್ಳಾರಿ ರೆಡ್ಡಿಗಳು

2007-08 ಸಾಲಿನಲ್ಲಿ ಸುಮಾರು 86 ಕೋಟಿ ರುಪಾಯಿಗಳನ್ನು ಪ್ರವಾಸೋಧ್ಯಮ ಸಚಿವ ಜಿ ಜನಾರ್ದನರೆಡ್ಡಿ ಒಡೆತನದ ಒಬಳಾಪುರಂ ಮೈನಿಂಗ್ ಕಂಪನಿಯು ವಂಚನೆ ಮಾಡಿದೆ ಎಂದು ಕೇಂದ್ರ ತೆರಿಗೆ ಇಲಾಖೆ ಅಧಿಕಾರಿಗಳು ಖಚಿತಪಡಿಸಿದ್ದಾರೆ ಎಂದು ಸೋಮವಾರದ 'ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆ ವರದಿ ಮಾಡಿದೆ.
ಆಂಧ್ರಪ್ರದೇಶದಲ್ಲಿ ನಡೆದಿರುವ ಗಣಿಗಾರಿಕೆಗೆ ಸಂಬಂಧಿಸಿದಂತೆ ಅಲ್ಲಿನ ಸರಕಾರ ಪ್ರಕಕಣವನ್ನು ಸಿಬಿಐ ತನಿಖೆಗೆ ವಹಿಸಿದೆ. ಸಿಬಿಐ ತನಿಖೆಯ ಮಧ್ಯೆಯೇ ತೆರಿಗೆ ವಂಚನೆ ಹಗರಣ ಬೆಳಕಿಗೆ ಬಂದಿರುವುದು ರಾಜ್ಯ ಸರಕಾರದ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆಯಿದೆ. 2007-08 ಸಾಲಿನಲ್ಲಿ ತೆರಿಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿದ ಕೇಂದ್ರ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಈ ಸಂಗತಿ ತಿಳಿದು ಬಂದಿದೆ.
ಅಲ್ಲದೇ ತೆರಿಗೆ ವಂಚಿಸುವ ಉದ್ದೇಶದಿಂದ ಜನಾರ್ದನರೆಡ್ಡಿ ಅವರು ಪತ್ನಿ ಲಕ್ಷ್ಮಿ ಅರುಣಾ ಅವರ ಹೆಸರಿನಲ್ಲಿ ಸಿಂಗಪುರ್, ದುಬೈ ಮತ್ತು ಅಮೆರಿಕಗಳಲ್ಲಿ ಕಚೇರಿಗಳನ್ನು ಹೊಂದಿದ್ದಾರೆ. ಬೇರೆ ಕಂಪನಿ ಹೆಸರಿನಲ್ಲಿ ವಹಿವಾಟು ನಡೆಸಿ ತೆರಿಗೆ ವಂಚನೆ ಮಾಡಿದ್ದಾರೆ ಎಂಬ ಆರೋಪ ಅವರ ಮೇಲಿದೆ.












Click it and Unblock the Notifications