ಬಿಹಾರಿ ಹುಡ್ಗ, ಲೋಕಲ್ ಆಂಟಿ ಕಾಮ ಕಥೆ

Illegal affair ends in Murder
ಬೆಂಗಳೂರು, ಡಿ. 27: ಅವಳು ಹೇಳಿದ್ಳು ಅಷ್ಟೇ ನೋಡು "ನಾನು ಸತ್ತು ಹೋಗುತ್ತೀನಿ" ಅಂತಾ, ಇವನು ಹೇಳ್ದ "ಸರಿ, ನಾನು ನೀ ಸಾಯೋದಕ್ಕೆ ಸಹಾಯ ಮಾಡ್ತೀನಿ". ಕೊನೆಗೆ ಆಕಸ್ಮಿಕವೋ, ಉದ್ದೇಶಪೂರ್ವಕವೋ, ಸಿಟ್ಟು, ಜಿಗುಪ್ಸೆಯ ಪರಮಾವಧಿಯೋ ಬಿಹಾರಿ ಹುಡ್ಗನ ಹಿಂದೆ ಬಿದ್ದಿದ್ದ ಕಾಮುಕ ಆಂಟಿ ಕೊಲೆಯಾದಳು. ಎಂಸಿಎ ಓದಲು ಬಂದು, ಕೊಲೆಗಾರನಾದ ಬಿಹಾರಿ ಯುವಕ ಬೆಂಗಳೂರು ಪೊಲೀಸರ ಅತಿಥಿಯಾದ.

ಆತನಿಗಿನ್ನು 23 ವರ್ಷ, ಹೆಸರು ಲಲ್ಲನ್ ಕುಮಾರ್. ಆಚಾರ್ಯ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಸಿಎ ಸೀಟು ಗಿಟ್ಟಿಸಿಕೊಂಡು, 2009ರಲ್ಲಿ ಸೋದರಿ ಮಮತಾ ಮನೆಯಲ್ಲಿ ಉಳಿದುಕೊಂಡಿದ್ದ. ಆದರೆ, ಮೊದಲ ಸೆಮಿಸ್ಟರ್ ನಂತರ ಯಾಕೋ ಓದೋದಿಕ್ಕೆ ಸರಿಯಾದ ವಾತಾವರಣ ಇಲ್ಲಿಲ್ಲ ಎಂದೆನಿಸಿ, ಅಕ್ಕನ ಮನೆ ತೊರೆದು ಒಂಟಿಯಾಗಿ ವಾಸಿಸತೊಡಗಿದ.

ಲತಾ ಆಂಟಿ ಗಾಳಕ್ಕೆ ಬಿದ್ದ: ಹೊಸ ಮನೆಗೆ ಅವನು ಕಾಲಿಟ್ಟ ಗಳಿಗೆಯಿಂದಲೇ ಕಂಗಳೆರಡು ಆತನ ಅಂದ ಚೆಂದ ಅಂಗಾಂಗಗಳನ್ನು ಹರಿದು ಮುಕ್ಕುವಂತೆ ನೋಡುತ್ತಲ್ಲಿದ್ದವು. ಇದು ಅವನಿಗೆ ತಿಳಿಯಿತು. ಆ ಜೋಡಿ ಕಂಗಳ ಒಡತಿ 35 ವರ್ಷದ ವಿವಾಹಿತೆ ಲತಾಳ ಸಖ್ಯ ಬೆಳೆಸಲು ಅಷ್ಟೇನೂ ಕಷ್ಟವಾಗಲಿಲ್ಲ. ಲತಾಳ ಪತಿ ಸೌದಿ ಅರೇಬಿಯಾದಲ್ಲಿ ಉದ್ಯೋಗಿ. ಶಾಲೆ ಹೋಗುವ ವಯಸ್ಸಿನ ಎರಡು ಮಕ್ಕಳೊಂದಿಗೆ ಲತಾ ಒಂಟಿಯಾಗಿ ವಾಸವಾಗಿದ್ದಳು. ಇವರಿಬ್ಬರ ಗೆಳೆತನ ಬಹುಬೇಗ ಪ್ರೇಮಸಂಬಂಧಕ್ಕೆ ತಿರುಗಿಬಿಟ್ಟಿತು.

ಎಂಸಿಎ ಓದಿಗೆ ಬ್ರೇಕ್ ಹಾಕಿದ ಲಲ್ಲನ್, ಲತಾ ಜೊತೆ ಸರಸ ಸಲ್ಲಾಪದಲ್ಲಿ ಕಾಲ ಕಳೆಯತೊಡಗಿದ. ಲಲ್ಲನ್ ಮಾತು ಕತೆ, ಪ್ರಣಯಚೇಷ್ಟೆಗಳಿಗೆ ಮಾರು ಹೋದ ಲತಾ, ಗಂಡನಿಗೆ ಸೋಡಾಚೀಟಿ ಕೊಟ್ಟು, ತನಗಿಂತ ಕಿರಿಯನಾದ ಲಲ್ಲನ್ ನನ್ನು ವರಿಸಲು ಯೋಜನೆ ಹಾಕತೊಡಗಿದ್ದಳು. ಆದರೆ, ಲಲ್ಲನ್ ಗೆ ಇದು ಬೇಕಿರಲಿಲ್ಲ. ಲತಾಳ ಗಂಡ ಬಂದ ಮೇಲೆ ಲತಾ ಆಂಟಿ ಸಹವಾಸ ಮುರಿದುಕೊಳ್ಳುವ ಆಶಯ ಲಲ್ಲನ್ ಗಿತ್ತು.

ಟ್ರಾಜಿಕ್ ಕ್ಲೈಮ್ಯಾಕ್ಸ್ : ಬಹುಶಃ ಲತಾಳ ಪತಿ ಬೆಂಗಳೂರಿಗೆ ಬಂದಿದ್ದರೆ, ಕಥೆಗೆ ಬೇರೆಯದೇ ಕ್ಲೈಮ್ಯಾಕ್ಸ್ ಸಿಗುತ್ತಿತ್ತು ಎನ್ನಿಸುತ್ತದೆ. ಆದರೆ, ಆದ್ದದ್ದೇ ಬೇರೆ, ಡಿ.20 ರಂದು ಲತಾಳಿಗೆ ಲಲ್ಲನ್ ಬೇಕೆನಿಸಿದೆ. ರಾತ್ರಿ 10.30 ರ ಸುಮಾರಿಗೆ ಲಲ್ಲನ್ ಕುಮಾರ್ ಗೆ ಕರೆ ಮಾಡಿದ್ದಾಳೆ. ಆದರೆ, ಅಪರೂಪಕ್ಕೆ ಬುಕ್ ಹಿಡಿದುಕೊಂಡು 2ನೇ ಸೆಮಿಸ್ಟರ್ ಪರೀಕ್ಷೆಗೆ ಪ್ರಿಪೇರ್ ಆಗುತ್ತಿದ್ದ ಕುಮಾರ್, ಅವಳ ಕರೆಯನ್ನು ನಿರಾಕರಿಸಿದ್ದಾನೆ.

ಪದೇ ಪದೇ ಕರೆ ಬಂದಾಗ, ವಿಧಿಯಿಲ್ಲದೆ ಆಕೆ ಮನೆಗೆ ಹೋಗಿ ಅವಳ ಮನ ತಣಿಸಿ, 2 ಗಂಟೆ ಸುಮಾರಿಗೆ ಪರೀಕ್ಷೆಗೆ ಓದಲು ಹೋಗುವುದಾಗಿ ಹೇಳಿದ್ದಾನೆ. ಆದರೆ, ಅವನನ್ನು ಬಿಟ್ಟುಕೊಡದ ಲತಾ, ಇಲ್ಲೇ ಇರು, ಹೋಗಬೇಡ, ಹೋದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಕುತ್ತಿಗೆಗೆ ಟವಲ್ ಸುತ್ತಿಕೊಂಡು ಬೆದರಿಸಿದ್ದಾಳೆ. ಇದನ್ನು ನೋಡಿದ ಕುಮಾರ್, ಕೋಪಗೊಂಡು ನಿನಗೆ ಸಹಾಯ ಮಾಡುತ್ತೇನೆ ಎಂದು ಅವಳ ಕುತ್ತಿಗೆಗೆ ಬಿಗಿದಿದ್ದ ಟವಲ್ ಅನ್ನು ಇನ್ನಷ್ಟೂ ಹಿಸುಕಿದ್ದಾನೆ.

ಈ ರೀತಿ ಲತಾಳ ಅಂತ್ಯವಾದ ಮೇಲೆ, ಬಿಹಾರಕ್ಕೆ ಓಡಿ ಹೋದ ಲಲ್ಲನ್ ಅನ್ನು ಹಿಡಿಯಲು ಬೆಂಗಳೂರು ಪೊಲೀಸರು ಲತಾಳ ಮಕ್ಕಳ ಸಹಾಯ ಪಡೆದಿದ್ದಾರೆ. ಮನೆಗೆ ಕೊನೆ ಬಾರಿಗೆ ಬಂದವನು ಕುಮಾರ್ ಎಂದು ಮಕ್ಕಳು ಸೂಚನೆ ನೀಡಿದ ಮೇಲೆ ಆತನ ಮೊಬೈಲ್ ಟ್ರಾಪ್ ಮಾಡಿ, ಹಳ್ಳಿಯಲ್ಲಿ ಕೂತು ಚಹಾ ಹೀರುತ್ತಿದ್ದ ಲಲ್ಲನ್ ಅನ್ನು ಹಿಡಿದು ಕರೆತಂದಿದ್ದಾರೆ. [ಅನೈತಿಕ ಸಂಬಂಧ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+