ಕಿಲ್ಲರ್ ಬಿಎಂಟಿಸಿಗೆ ನಿರ್ವಾಹಕನೇ ಬಲಿ

ಬೆಳಗ್ಗೆ 6. 20ರ ಸುಮಾರಿಗೆ ಜಯನಗರ 4ನೇ ಡಿಪೋದಿಂದ ಬಿಎಂಟಿಸಿ ಬಸ್ ಜಂಬೂಸವಾರಿ ದಿನ್ನೆಗೆ ಹೋಗುತಿತ್ತು. ಚಾಲಕ ನಾರಾಯಣಸ್ವಾಮಿ ಜಯನಗರ 9ನೇ ಬ್ಲಾಕ್‌ನ ವೈಶಾಲಿ ವೃತ್ತದಲ್ಲಿ ತಿರುವು ಪಡೆಯಲು ಹೋಗಿದ್ದಾನೆ. ಬ್ರೇಕ್ ತುಳಿಯಲು ಹೋಗಿ ಎಕ್ಸಲೇಟರ್ ತುಳಿದ ಪರಿಣಾಮ ಬಸ್ ಪಕ್ಕದಲ್ಲಿದ್ದ ಲಲಿತ್ ಸ್ಟೀಲ್ ಎಂಬ ಅಂಗಡಿಗೆ ನುಗ್ಗಿದೆ.
ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ನಿರ್ವಾಹಕನ ತಲೆಗೆ ಪೆಟ್ಟಾಗಿ, ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸುವ ಮಾರ್ಗದಲ್ಲಿ ಸಾವನ್ನಪ್ಪಿದ್ದಾನೆ. ಗಾಯಗೊಂಡಿರುವ ಚಾಲಕ ನಾರಾಯಣಸ್ವಾಮಿ ಸಣ್ಣ ಪುಟ್ಟ ಗಾಯಗಳಿಂದ ಪರಾರಿಯಾಗಿದ್ದಾನೆ. ಬಸ್ ಅಂಗಡಿಗೆ ನುಗ್ಗಿದ ಪರಿಣಾಮ ಕೆಲವು ಅಂಗಡಿ ಜತೆಗೆ ಕೆಲವು ವಸ್ತುಗಳು ಜಖಂಗೊಂಡಿದೆ. ಬಸ್‌ನ ಗ್ಲಾಸ್‌ಗಳು ಸಹ ಪುಡಿಯಾಗಿವೆ.
ಬ್ರೇಕ್ ತುಳಿಯಲು ಹೋಗಿ, ಎಕ್ಸಲೇಟರ್ ತುಳಿದ ಕಾರಣ ನಿಯಂತ್ರಣ ತಪ್ಪಿದ ಬಸ್ ಅಂಗಡಿಗೆ ನುಗ್ಗಿ ಈ ಅವಘಡ ಸಂಭವಿಸಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಮೈಕೋ ಲೇಔಟ್ ಸಂಚಾರಿ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ತಿಳಿಸಿದರು. ಚಾಲಕನಿಗೆ ಫಿಟ್ಸ್ ಕಾಯಿಲೆಯಿದ್ದು, ಕೆಲಸ ನಿರ್ವಹಿಸಲು ಸಾಧ್ಯವಾಗದೇ ಕೆಲಕಾಲ ತೊಂದರೆ ಅನುಭವಿಸಿ, ಮತ್ತೆ ಕೆಲಸಕ್ಕೆ ಸೇರಿದ್ದನು ಎಂದು ತಿಳಿದುಬಂದಿದೆ. [ಬಿಎಂಟಿಸಿ]












Click it and Unblock the Notifications