ಬೆಂಕಿ ಜೊತೆ ಸರಸಬೇಡ, ಕೈಗೆ ಸಿಎಂ ಎಚ್ಚರಿಕೆ
ಬೆಂಗಳೂರು,
ಡಿ. 21 : ರಾಹುಲ್ ಗಾಂಧಿಯವರೆ ಬೆಂಕಿ ಜೊತೆಗೆ ಸರಸವಾಡಬೇಡಿ. ಯಾವುದೇ ಆಧಾರವಿಲ್ಲದೇ ದೇಶ ಭಕ್ತ ಸಂಘಟನೆಗಳ ವಿರುದ್ಧ ವಿನಾಕಾರಣ ಆರೋಪ ಮಾಡುವುದು ಅಕ್ಷಮ್ಯ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಹುಲ್ ಗಾಂಧಿ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. id="toptextpromo">ಸಂಘ
ಪರಿವಾರದ ವಿರುದ್ಧ ಕಾಂಗ್ರೆಸ್ ಆರೋಪಗಳನ್ನು ಮುಂದುವರಿಸಿದರೆ ವಿರುದ್ಧ ದೇಶಾದ್ಯಂತ ಆಂದೋಲನಕ್ಕೆ ಚಾಲನೆ ನೀಡಲಾಗುವುದು ಸಹ ಅವರು ಎಚ್ಚರಿಕೆ ನೀಡಿದರು. ಜೇವರ್ಗಿಯಲ್ಲಿ ಏರ್ಪಡಿಸಲಾದ ಬಿಜೆಪಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. id='are-slot-1' class='oiad oi-axt oiadv'> id='top-searched-articles'>ಸಂಘ
ಪರಿವಾರದ ವಿರುದ್ಧ ಆಧಾರ ರಹಿತ ಮತ್ತು ದುರುದ್ದೇಶದಿಂದ ಕೂಡಿದ ಆರೋಪ ಮಾಡುವುದನ್ನು ಕಾಂಗ್ರೆಸ್ ನವರು ನಿಲ್ಲಿಸಬೇಕು. ಇಲ್ಲದಿದ್ದರೆ ಬಿಜೆಪಿ ರಾಷ್ಟ್ರಾದ್ಯಾಂತ ಹೋರಾಟ ನಡೆಸಲಿದೆ ಎಂದರು. 2ಜಿ ಸ್ಪೆಕ್ಟ್ರಂದಂತಹ ಶತಮಾನದ ಅತಿದೊಡ್ಡ ಭ್ರಷ್ಟಾಚಾರ ಪ್ರಕರಣವನ್ನು ಮುಚ್ಚಿಹಾಕಲು ಸೋನಿಯಾ ಗಾಂಧಿ ತಮ್ಮ ವಿರುದ್ಧ ಭ್ರಷ್ಟಾಚಾರದ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.(ಯಡಿಯೂರಪ್ಪ)











Click it and Unblock the Notifications