ದಲಿತ ಯುವತಿಯರಿಗೆ ಬೆಂಕಿ ಹಚ್ಚಿದ ದುರುಳರು
ಮೊರಾದಬಾದ್,
ಡಿ.20: ಇಲ್ಲಿನ ಕೊಥಿವಾಲ್ ನಗರದಲ್ಲಿ ನಡೆದ ಡಬ್ಬಲ್ ಮರ್ಡರ್ ಗೆ ಸಂಬಂಧಿಸಿದಂತೆ ರೊಚ್ಚಿಗೆದ್ದ ಜನರು ಆರೋಪಿತನ ತಂಗಿಯರಿಬ್ಬರಿಗೆ ಬೆಂಕಿ ಹಚ್ಚಿ ಅಮಾನವೀಯವಾಗಿ ಕೊಂದಿದ್ದಾರೆ. ಸ್ಥಳೀಯ ವ್ಯಾಪರಿಯೊಬ್ಬನ ಹೆಂಡತಿ ಹಾಗೂ ಮಗುವನ್ನು ಕೊಲೆ ಮಾಡಿರುವ ಆರೋಪವನ್ನು ಈ ಯುವತಿಯರ ಅಣ್ಣನ ಮೇಲೆ ಹೊರೆಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ಈ ದುರ್ಘಟನೆಗೆ ಸಂಬಂಧಿಸಿದಂತೆ ಸುಮಾರು 12 ಜನರನ್ನು ಬಂಧಿಸಿರುವ ಪೊಲೀಸರು ಎಫ್ ಐಆರ್ ದಾಖಲಿಸಿ ತನಿಖೆ ನಡೆಸಿದ್ದಾರೆ. id="toptextpromo">ಸ್ಥಳೀಯ
ವ್ಯಾಪಾರಿಯ ಪತ್ನಿ ಹಾಗೂ ಎಂಟು ವರ್ಷದ ಮಗಳ ಕೊಲೆಯಿಂದ ರೊಚ್ಚಿಗೆದ್ದಿದ್ದ ಜನ, ದಲಿತ ಯುವತಿಯರ ಮನೆ ಮುಂದೆ ನಿಂತು ಅರಚಾಡತೊಡಗಿದರು. ಮನೆಯೊಳಗಿನಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದಾಗ ಸಿಟ್ಟಿಗೆದ್ದು, ಮನೆಗೆ ಬೆಂಕಿ ಹಚ್ಚಿದ್ದಾರೆ. ಈ ಘಟನೆಯಲ್ಲಿ ಮನೆಯೊಳಗಿದ್ದ ಗೀತಾ(22) ಹಾಗೂ(20) ಸಜೀವ ಸಮಾಧಿಯಾಗಿದ್ದಾರೆ. ಆದರೆ, ಇವರಿಬ್ಬರ ತಾಯಿ ರಜ್ಜೋ ಮಾತ್ರ ಅಚ್ಚರಿಯ ರೀತಿಯಲ್ಲಿ ಸಾವಿನ ಮನೆಯಿಂದ ಪಾರಾಗಿ ಹೊರಬಿದ್ದಿದ್ದಾರೆ. id='are-slot-1' class='oiad oi-axt oiadv'> id='top-searched-articles'>ವಾಲ್ಮೀಕಿ
ಜನಾಂಗಕ್ಕೆ ಸೇರಿದ ಯುವತಿಯರ ಅಣ್ಣ ರಾಕೇಶನ ಮೇಲೆ ಡಬ್ಬಲ್ ಮರ್ಡರ್ ಕೇಸ್ ಅಲ್ಲದೆ ಡಿ.9ರಂದು ಕಳ್ಳತನ ಮಾಡಿರುವ ಆರೋಪವನ್ನೂ ಹೊರೆಸಲಾಗಿದೆ. ಕೊಲೆ ನಡೆದ ಎರಡು ದಿನ ನಂತರ ಈ ಘಟನೆ ನಡೆದಿದ್ದು, ಪೊಲೀಸರು ದಲಿತ ಕುಟುಂಬಕ್ಕೆ ರಕ್ಷಣೆ ನೀಡಲು ನಿರಾಕರಿಸಿದ್ದರು ಎಂದು ಗ್ರಾಮಸ್ಥರು ಹೇಳುತ್ತಾರೆ. ಅಲ್ಲದೆ, ಇದು ಆಕಸ್ಮಿಕ ಸಾವು ಯಾವುದೇ ದೊಂಬಿ, ಜಗಳ ನಡೆದಿಲ್ಲ ಎಂದು ಕೇಸ್ ಮುಚ್ಚಿ ಹಾಕಲು ಪೊಲೀಸರು ಯತ್ನಿಸಿದ್ದು ನಡೆದಿದೆ. ವಾಲ್ಮೀಕಿ ಜನಾಂಗ ನ್ಯಾಯಕ್ಕಾಗಿ ಹೋರಾಟ ನಡೆಸಿದೆ. [ದಲಿತರು]











Click it and Unblock the Notifications