ಗವಾಯಿಗಳ ಸ್ಮರಣೆಯಲ್ಲಿ ತಬಲಾ ಸಿಂಫೋನಿ

ವೇದಿಕೆಯ ಸಂಚಾಲಕ ನಿಶಾಂತ್ ಮಾತನಾಡಿ, ಇದೊಂದು ವಿಶೇಷ ಕಾರ್ಯಕ್ರಮವಾಗಿದ್ದು, ಇದರಲ್ಲಿ 22 ಪ್ರಖ್ಯಾತ ತಬಲ ವಾದಕರು ತಬಲ ಸ್ವರಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಮೇರಿಕ, ಸ್ವಿಡ್ಜರ್ ಲ್ಯಾಂಡ್, ದೆಹಲಿ, ಕೋಲ್ಕತ್ತಾ ಹಾಗೂ ರಾಜ್ಯದ ಗಾಯಕರು ಹಾಗೂ ತಬಲ ವಾದಕರು ಭಾಗವಹಿಸುವ ಈ ಕಾರ್ಯಕ್ರಮವು ಅಂತಾರಾಷ್ಟ್ರೀಯ ತಂಡ ಹಾಗೂ ಗುಣಮಟ್ಟದ್ದಾಗಿದೆ ಎಂದರು.
ಅಂತಾರಾಷ್ಟ್ರೀಯ ಖ್ಯಾತಿಯ ಪಂಡಿತ್ ಸಮೀರ್ ಚರ್ಟಜಿಯವರ ಕಲ್ಪನೆಯಿಂದ ಮೂಡಿಬರುತ್ತಿರುವ ಈ ತಬಲ ಸ್ವರಮೇಳ ಜೀವನದ ಹಲವಾರು ಮಜಲುಗಳಾದ ಸೌಂದರ್ಯ, ಪರಂಪರೆ ಹಾಗೂ ಭಾವನೆಗಳನ್ನು ಮನಮುಟ್ಟುವ ನಿಟ್ಟಿನಲ್ಲಿ ಪ್ರಯತ್ನಿಸುತ್ತದೆ. ತಬಲ ಲಯಕ್ಕೆ ಆಲಾಪನೆಯೊಂದಿಗೆ ನಾಲ್ವರು ಗಾಯಕರು ಧ್ವನಿಗೂಡಿಸಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಪಾಸ್‌ಗಳನ್ನು ವಿತರಿಸಲಾಗುತ್ತಿದ್ದು, ಹೆಚ್ಚಿನ ವಿವರಗಳಿಗಾಗಿ 94481 27254, 92433 22238ಗೆ ಸಂಪರ್ಕಿಸಬಹುದು. [ಪುಟ್ಟರಾಜ ಗವಾಯಿ]












Click it and Unblock the Notifications