ರಾಹುಲ್ ಗಾಂಧಿಗೆ ಯಡಿಯೂರಪ್ಪ ಎಚ್ಚರಿಕೆ

ರಾಹುಲ್ ಗೆ ಹಿಂದೂಗಳನ್ನು ಅವಹೇಳನ ಮಾಡುವುದೇ ಕಸುಬಾಗಿದೆ. ಭಾರತೀಯ ಸಂಸ್ಕೃತಿ, ನಾಗರಿಕತೆ, ಸಂಪ್ರದಾಯದ ಬಗ್ಗೆ ಪಾಠ ಹೇಳಿಸಿಕೊಳ್ಳುವ ಅಗತ್ಯವಿದೆ. ಕಾಂಗ್ರೆಸ್ ನ ಹಿರಿಯ ನಾಯಕರು ಕೂಡಾ ರಾಹುಲ್ ಹೇಳಿಕೆ ಕೇಳಿ ಸುಮ್ಮನೆ ಕೂತಿರುವುದು ನಾಚಿಕೆಗೇಡಿನ ಸಂಗತಿ. ಹಿಂದೂ ಸಂಘಟನೆಗಳನ್ನು ಲಷ್ಕರ್ ಇ ತೊಯ್ಬಾದಂತಹ ಸಂಘಟನೆಗೆ ಹೋಲಿಸಿರುವುದು ಸಮಗ್ರ ಭಾರತೀಯರಿಗೆ ಮಾಡಿದ ಅವಮಾನ ಎಂದು ಯಡಿಯೂರಪ್ಪ ಟೀಕಿಸಿದರು.
ರಾಹುಲ್ ಮೈಯಲ್ಲಿ ವಿದೇಶಿ ರಕ್ತ: ರಾಹುಲ್ ಮೈಯಲ್ಲಿ ವಿದೇಶಿ ರಕ್ತ ಹರಿಯುತ್ತಿದೆ. ದೇಶದ ಇತಿಹಾಸದ ಅರಿವಿಲ್ಲ. ಇನ್ನು ಮುಂದಾದರೂ ರಾಹುಲ್ ಎಚ್ಚರವಹಿಸಲಿ. ಇಲ್ಲದಿದ್ದರೆ ಉನ್ನತ ಹುದ್ದೇ ಏರುವ ಕನಸು ಬಿಟ್ಟುಬಿಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ ಕಿಡಿ ಕಾರಿದ್ದಾರೆ.
ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಸೋನಿಯಾ: ನವದೆಹಲಿಯಲ್ಲಿ ಇಂದು ನಡೆದ 83ನೇ ಕಾಂಗ್ರೆಸ್ ಮಹಾಧಿವೇಶನದಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಬಿಜೆಪಿ ಮೊದಲು ಭ್ರಷ್ಟರನ್ನು ಪಕ್ಷದಿಂದ ಹೊರಕ್ಕೆ ದೂಡಲಿ ಎಂದರು. ಹಗರಣದಲ್ಲಿ ಸಿಲುಕಿರುವ ಯಡಿಯೂರಪ್ಪ ಅವರ ರಾಜೀನಾಮೆ ಪಡೆಯಲು ಸಾಮರ್ಥ್ಯವಿಲ್ಲದ ಬಿಜೆಪಿ ಹೈ ಕಮಾಂಡ್, ಕಾಂಗ್ರೆಸ್ ಬಗ್ಗೆ ಮಾತನಾಡಲು ನೈತಿಕ ಹಕ್ಕಿಲ್ಲ ಎಂದರು. ಭ್ರಷ್ಟಾಚಾರ ತೊಲಗಿಸಲು ಕಾಂಗ್ರೆಸ್ ಸಿದ್ಧವಿದ್ದು, ಪ್ರಧಾನಿ ಮನಮೋಹನ್ ಸಿಂಗ್ ಅವರು ಸಮರ್ಥವಾಗಿ ದೇಶವನ್ನು ಮುನ್ನಡೆಸುತ್ತಿದ್ದಾರೆ ಎಂದು ಹೇಳಿದರು.
ರಾಹುಲ್ ಉವಾಚ: ಎಲ್ಲಾ ನಾಗರೀಕಗೂ ಸಮಾನ ಹಕ್ಕು ಸಿಗಬೇಕು. ಪಕ್ಷದ ಕಾರ್ಯಕರ್ತರು ಒಗ್ಗೂಡಬೇಕು. ಭ್ರಷ್ಟಾಚಾರ ನಿರ್ಮೂಲನೆ ಕಾಂಗ್ರೆಸ್ ಬದ್ಧ. ಸಾಮಾನ್ಯ ಜನರು ಹಾಗೂ ಸರ್ಕಾರ ನಡುವೆ ಸೇತುವೆಯಾಗಿ ಪಕ್ಷ ಕಾರ್ಯನಿರ್ವಹಿಸಲಿದೆ ಎಂದು ಕೆಲ ಗಂಟೆಗಳ ಮುಂಚೆ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಆದರೆ, ವಿವಾದಿತ ಹಿಂದೂ ಭಯೋತ್ಪಾದನೆ ಬಗ್ಗೆ ಮಹಾಧಿವೇಶನದಲ್ಲಿ ಯಾವುದೇ ಪ್ರಸ್ತಾಪ ಮಾಡದೇ ಜಾಣತನ ಮೆರೆದಿದ್ದಾರೆ.












Click it and Unblock the Notifications