ಕೂಡ್ಲಿಗಿ ರಾ.ಹೆ 13 ರಸ್ತೆ ಅಪಘಾತದಲ್ಲಿ 3 ಬಲಿ

NH13 Kudlgi Accident
ಬಳ್ಳಾರಿ, ಡಿ. 15: ರಾಷ್ಟ್ರೀಯ ಹೆದ್ದಾರಿ 13 ರ ಎಂಬಿ ಅಯ್ಯನಹಳ್ಳಿ ಸಮೀಪ ಬುಧವಾರ ನಸುಕಿನ ಜಾವ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬಿಜಾಪುರದ ಮುಳವಾಡ ಗ್ರಾಮದ ಮೂವರು ಈರುಳ್ಳಿ ಬೆಳೆಗಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರು ಬಿಜಾಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮುಳವಾಡ ಗ್ರಾಮದ ಈರುಳ್ಳಿ ಬೆಳೆಗಾರರಾದ ಬಾಬು ಚಪ್ಪರಬಂದ (50), ಮಲ್ಲುಗುಂಡ್ಲಪಲ್ಲಿ (35) ಮತ್ತು ಹನುಮಂತ ಲಗಾಣಿ (35).

ಈರುಳ್ಳಿಯನ್ನು ಬೆಂಗಳೂರಿನಲ್ಲಿ ಮಾರಾಟ ಮಾಡಲು ಮಿನಿಲಾರಿಯಲ್ಲಿ ಹೊರಟಿದ್ದ ಇವರ ವಾಹನಕ್ಕೆ ಎದುರಲ್ಲಿ ಬಂದ ಲಾರಿಯು ಢಿಕ್ಕಿ ಹೊಡೆದ ಕಾರಣ ಘಟನೆ ನಡೆದಿದೆ. ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ. ಲಾರಿಯ ಕ್ಲೀನರ್ ಜಗಳೂರು ತಾಲೂಕಿನ ಸಿದ್ಧಮ್ಮನಹಳ್ಳಿಯ ಶಿವು (30) ತೀವ್ರವಾಗಿ ಗಾಯಗೊಂಡಿದ್ದು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಿನಿ ಲಾರಿ ಚಾಲಕ ನಾಪತ್ತೆ ಆಗಿದ್ದಾನೆ. ಘಟನೆಯು ಬುಧವಾರ ನಸುಕಿನ 3 ಗಂಟೆ ಸುಮಾರಿಗೆ ಸಂಭವಿಸಿರಬೇಕು ಎಂದು ಅಂದಾಜಿಸಲಾಗಿದೆ. ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.

ಯಂತ್ರಕ್ಕೆ ಸಿಲುಕಿ ಸಾವು: ಶೇಂಗಾ ಬಿಡಿಸುವ ಯಂತ್ರದ ಬೆಲ್ಟ್‌ಗೆ ಸಿಲುಕಿದ್ದ ಯುವತಿ ಮೃತಪಟ್ಟ ಘಟನೆ ಕಾನಾಹೊಸಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಮೃತಳು ನಾಗವೇಣಿ (20). ಮಂಗಳವಾರ ಶೇಂಗಾ ಬಿಡಿಸುತ್ತಿದ್ಧಾಗ ಆಕಸ್ಮಿಕವಾಗಿ ಯಂತ್ರದ ಬೆಲ್ಟ್‌ಗೆ ಸಿಲುಕಿ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾಳೆ. ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+