ಡಿ.20ರಿಂದ ಮಡಿಕೇರಿ ಸಂಪಾಜೆ ರಸ್ತೆ ಬಂದ್

Madikeri Sampaje road bandh
ಮಡಿಕೇರಿ, ಡಿ.14: ಮಡಿಕೇರಿಯಿಂದ ಸುಳ್ಯ ಮೂಲಕ ಮಂಗಳೂರಿಗೆ ತೆರಳುವವರು ಈಗ ಪರದಾಡುವಂತಾಗಿದೆ. ಕಾರಣ ಮೈಸೂರು-ಬಂಟ್ವಾಳ ರಾಜ್ಯ ಹೆದ್ದಾರಿ 88ರ ಮಡಿಕೇರಿ-ಮಂಗಳೂರು ರಸ್ತೆಯ ಭಾಗಮಂಡಲ 1 ನೇ ಕ್ರಾಸ್‌ನಿಂದ ಸಂಪಾಜೆಯವರೆಗಿನ ರಸ್ತೆಯ ವಿಸ್ತರಣೆ ಹಾಗೂ ಅಭಿವೃದ್ಧಿ ಕಾಮಗಾರಿ ಆರಂಭಿಸಲಾಗುತ್ತಿದೆ. ಇದರ ಪರಿಣಾಮ ಡಿ.20 ರಿಂದ 2011 ರ ಏಪ್ರಿಲ್ 30ರವರೆಗೆ ಈ ಮಾರ್ಗದಲ್ಲಿ ಎಲ್ಲಾ ತರದ ವಾಹನ ಸಂಚಾರವನ್ನು ಕೆಲವು ಷರತ್ತಿನೊಂದಿಗೆ ನಿಷೇಧಿಸಲಾಗಿದೆ.

ಹೀಗಾಗಿ ಬೆಂಗಳೂರಿನಿಂದ ಮಂಗಳೂರಿಗೆ ಮೈಸೂರು ಮೂಲಕ ತೆರಳುವವರು ಕೆ.ಆರ್.ನಗರ, ಸಕಲೇಶಪುರ ಮೂಲಕ ತೆರಳುವುದು ಉತ್ತಮ. ಕುಶಾಲನಗರದಿಂದ ತೆರಳುವವರು ಸೋಮವಾರಪೇಟೆ ಮೂಲಕ ಶಾಂತಳ್ಳಿ ಮಾರ್ಗವಾಗಿ ಸುಬ್ರಮಣ್ಯಕ್ಕೆ ತೆರಳಿ ಅಲ್ಲಿಂದ ಮಂಗಳೂರಿಗೆ ತೆರಳಬಹುದಾಗಿದೆ. ಆದರೆ ಈ ಮಾರ್ಗದ ರಸ್ತೆಗಳು ಹದಗೆಟ್ಟಿರುವುದು ಸಮಸ್ಯೆಯನ್ನು ಸೃಷ್ಟಿಸಿದೆ. ಮಡಿಕೇರಿಯಿಂದ ಮಂಗಳೂರಿಗೆ ತೆರಳುವವರು ಮಾತ್ರ ಪರದಾಡುವಂತಾಗಿದೆ.

ಮಡಿಕೇರಿಯಿಂದ ಸಂಪಾಜೆವರೆಗೆ ವಿವಿಧ ಗ್ರಾಮಗಳ ಜನರು ಎಲ್ಲಾ ಕಾರ್ಯಗಳಿಗೂ ಮಡಿಕೇರಿಯನ್ನೇ ಅವಲಂಭಿಸಿರುವುದರಿಂದ ಅಲ್ಲದೆ, ಮಡಿಕೇರಿಗೆ ಬರಲು ಪರ್ಯಾಯ ಮಾರ್ಗವಿಲ್ಲದೆ ಇರುವುದರಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಕೆಲವು ಷರತ್ತಿನೊಂದಿಗೆ ಲಘುವಾಹನ ಹಾಗೂ ಕೆಎಸ್‌ಆರ್‌ಟಿಸಿಯ ಮಿನಿ ಬಸ್‌ಗಳ ಓಡಾಟಕ್ಕೆ ಅವಕಾಶ ಮಾಡಿಕೊಟ್ಟಿದ್ದು, ದಿನಂಪ್ರತಿ ಹತ್ತು ಬಸ್‌ಗಳು ಈ ಮಾರ್ಗದಲ್ಲಿ ಸಂಚರಿಸಲಿವೆ.

ಲಘು ವಾಹನಕ್ಕೆ ಅನುಮತಿ: ಭಾಗಮಂಡಲ ರಸ್ತೆಯ 1ನೇ ಕ್ರಾಸ್‌ನಿಂದ ಸಂಪಾಜೆಯ ವರೆಗಿನ ನಿಷೇಧಿತ ರಸ್ತೆಯ ವ್ಯಾಪ್ತಿಯಲ್ಲಿ ನೆಲೆಸಿರುವವರು ತಮ್ಮ ಲಘು ವಾಹನಗಳನ್ನು ಮಾತ್ರ ಜಿಲ್ಲಾಡಳಿತದ ಅನುಮತಿಯೊಂದಿಗೆ ಓಡಿಸಬಹುದಾಗಿದೆ. ಶಾಲಾ ಕಾಲೇಜುಗಳಿಗೆ ತೆರಳುವ ಮಕ್ಕಳಿಗೆ, ಆಸ್ಪತ್ರೆಗಳಿಗೆ ಹಾಗೂ ರೋಗಿಗಳಿಗೆ ಆಸ್ಪತ್ರೆಯ ಲಘು ವಾಹನ, ದ್ವಿಚಕ್ರ ವಾಹನಗಳನ್ನು ಚಾಲಿಸಲು ಅನುಮತಿ ನೀಡಲಾಗಿದೆ.

ಈ ಬಗ್ಗೆ ದೂರದಿಂದ ಬರುವಂತಹ ಪ್ರವಾಸಿಗರು ಹಾಗೂ ವಾಹನ ಚಾಲಕರಿಗೆ ಮಾಹಿತಿ ನೀಡಲು ಮಡಿಕೇರಿಯಿಂದ ತೆರಳುವವರಿಗೆ ಭಾಗಮಂಡಲ ರಸ್ತೆಯ 1ನೇ ಕ್ರಾಸ್‌ನಲ್ಲಿ ಮತ್ತು ಮಂಗಳೂರು ಕಡೆಯಿಂದ ಬರುವವರಿಗೆ ಸಂಪಾಜೆಯಲ್ಲಿ ಬ್ಯಾರಿಕೇಡ್ ನಿರ್ಮಿಸಿ ಪೊಲೀಸ್ ಪಹರೆಗೆ ವ್ಯವಸ್ಥೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+