ಶಿಡ್ಲಘಟ್ಟ ಬಳಿ ಭೀಕರ ಅಪಘಾತ, 7 ಸಾವು
ಶಿಡ್ಲಘಟ್ಟ,
ಡಿ.13: ಲಾರಿ ಮತ್ತು ಕ್ಯಾಂಟರ್(ಸರಕು ಸಾಗಣೆ ವಾಹನ) ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಸ್ಥಳದಲ್ಲೇ ಏಳು ಜನ ಮೃತಪಟ್ಟಿದ್ದಾರೆ. ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಕ್ರಾಸ್ ಬಳಿ ಭಾನುವಾರ ರಾತ್ರಿ ನಡೆದ ಈ ದುರ್ಘಟನೆಯಲ್ಲಿ ಸುಮಾರು 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. id="toptextpromo">ಹೊಸಕೋಟೆ
ತಾಲ್ಲೂಕಿನ ನಂದಗುಡಿ ಹೋಬಳಿಯ ಹಿಂಡಿಗನಾಳ ಗ್ರಾಮದ ಭರತ್ (19), ರಾಜು (18), ಕೆಂಪೇಗೌಡ (20), ಚನ್ನಕೇಶವ (20) ಮತ್ತು ಕುಮಾರ್ (26) ಮೃತಪಟ್ಟವರು. ಇನ್ನಿಬ್ಬರ ಗುರುತು ತಿಳಿದು ಬಂದಿಲ್ಲ. ಘಟನೆಯಲ್ಲಿ ಮೂವರು ತೀವ್ರ ಗಾಯಗೊಂಡಿದ್ದು, ತುರ್ತು ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. 30 ಮಂದಿ ಗಾಯಾಳುಗಳನ್ನು ಕೋಲಾರ ಜಿಲ್ಲೆಯ ಟಮಕಾದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ. id='are-slot-1' class='oiad oi-axt oiadv'> id='top-searched-articles'>ನಂದಗುಡಿ
ಹೋಬಳಿಯ ಹಿಂಡಿಗನಾಳ ಗ್ರಾಮದ ಸುಮಾರು 40 ಯುವಕರು ಉಪೇಂದ್ರ ಅಭಿನಯ/ನಿರ್ದೇಶನದ ಸೂಪರ್ ಚಿತ್ರ ನೋಡಲು ಕ್ಯಾಂಟರ್ ನಲ್ಲಿ ಹೊರಟಿದ್ದರು. ರಾತ್ರಿ ಸುಮಾರು 8 ಗಂಟೆ ವೇಳೆಗೆ ವಿಜಯಪುರದಿಂದ ವೇಗವಾಗಿ ಬಂದ ಲಾರಿಯು ಕೋಲಾರ ಮುಖ್ಯರಸ್ತೆ ಬಳಿಯಿರುವ ಫಕೀರನಹೊಸಹಳ್ಳಿ ಗೇಟು ಬಳಿ ಕ್ಯಾಂಟರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕ್ಯಾಂಟರ್ ನಜ್ಜು ಗುಜ್ಜಾಗಿದೆ. ಬಹುತೇಕ ಮಂದಿ ತೀವ್ರ ಸ್ವರೂಪದಲ್ಲಿ ಗಾಯಗೊಂಡಿದ್ದು, ಲಾರಿ ಚಾಲಕ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.











Click it and Unblock the Notifications