ನೆಲಮಂಗಲ ಮೇಲ್ಸೇತುವೆ ಸುಂಕ ಕಟ್ಟಲು ತಯಾರಾಗಿ

ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಶುಲ್ಕ ನಿಗದಿಪಡಿಸಲಾಗಿದೆ. ಕಾರು, ಜೀಪುಗಳಿಗೆ ಪ್ರತಿ ಸಂಚಾರಕ್ಕೆ 15 ರೂ., ದಿನದ ಪಾಸ್‌ಗೆ 25 ರೂ., ಮಾಸಿಕ ಪಾಸ್‌ಗೆ 465 ರೂ. ನಿಗದಿಪಡಿಸಲಾಗಿದೆ. ಬಸ್ ಮತ್ತು ಟ್ರಕ್‌ಗಳಿಗೆ ಕ್ರಮವಾಗಿ 55 ರೂ., 80 ರೂ., 1585 ರೂ. ನಿಗದಿಪಡಿಸಲಾಗಿದೆ. ಹಗುರ ಸರಕು ಸಾಗಣೆ ವಾಹನಗಳಿಗೆ 25 ರೂ., 40 ರೂ., 770 ರೂ. ನಿಗದಿಪಡಿಸಲಾಗಿದೆ. ಭಾರೀ ವಾಹನಗಳಿಗೆ 85 ರೂ., 125 ರೂ., 2550 ರೂ. ನಿಗದಿಪಡಿಸಲಾಗಿದೆ.
ನೋ ಟ್ರಾಫಿಕ್ ಜಾಮ್ ಕಿರಿಕಿರಿ: ಸಂಚಾರ ದಟ್ಟನೆಯಿಲ್ಲದೆ ಇಲ್ಲದೆ ಇನ್ಮುಂದೆ ತುಮಕೂರು, ಹಾಸನ, ಧರ್ಮಸ್ಥಳ, ಮಂಗಳೂರು ಕಡೆ ವಾಹನಗಳು ಸಂಚರಿಸಬಹುದಾಗಿದೆ. ವರ್ಷಗಳ ಕಾಲ ಸಂಚಾರ ದಟ್ಟಣೆ ಸಮಸ್ಯೆ ಎದುರಿಸಿದ್ದ ವಾಹನ ಸವಾರರು ಗೊರಗುಂಟೆಪಾಳ್ಯದಿಂದ-ನೆಲಮಂಗಲದವರೆಗಿನ 19.7 ಕಿ.ಮೀ. ಉದ್ದದ ಎಲಿವೇಟೆಡ್ ಎಕ್ಸ್‌ಪ್ರೆಸ್ ಹೈವೇನಲ್ಲಿ ಸಂಚರಿಸಿ ಖುಷಿಪಟ್ಟರು. ಒಟ್ಟು 19.7 ಕಿ.ಮೀ ಪೈಕಿ 4.5 ಕಿಲೋ ಮೀಟರ್ 4 ಪಥದ ಎಲಿವೇಟೆಡ್ ರಸ್ತೆ, ಉಳಿದದ್ದು 6 ಪಥದ ಎಕ್ಸ್‌ಪ್ರೆಸ್ ರಸ್ತೆ. ಒಟ್ಟಾರೆ ತುಮಕೂರಿಗೆ ತಲುಪಲು 1 ಗಂಟೆ ಸಾಕು.
ಎಕ್ಸ್‌ಪ್ರೆಸ್ ಹೈವೇ ನಿರ್ಮಾಣದ ಯೋಜನೆ 2007 ರಲ್ಲಿ ರೂಪಿಸಿ ನವೆಂಬರ್‌ನಿಂದ ಕಾಮಗಾರಿ ಆರಂಭಿಸಲಾಗಿತ್ತು.776 ಕೋಟಿ ರೂ. ವೆಚ್ಚದ ನಿರ್ಮಾಣವಾಗಿರುವ ಈ ಎಕ್ಸ್‌ಪ್ರೆಸ್ ಹೈವೇ ಮಾರ್ಗದಲ್ಲಿ ಆರು ಕಡೆ ವಾಹನಗಳನಿಲುಗಡೆಗೆ ಸಬ್ ವೇ, 13 ಸ್ಥಳದಲ್ಲಿ ಪಾದಚಾರಿ ಸುರಂಗ ಮಾರ್ಗ ನಿರ್ಮಿಸಲಾಗಿದೆ. ಬೆಂಗಳೂರಿನಿಂದ ಹೋಗುವಾಗ ಪಾರ್ಲೆ ಬಿಸ್ಕತ್ ಫ್ಯಾಕ್ಟರಿ ಬಳಿ ಹಾಗೂ ಬರುವಾಗ(ತುಮಕೂರು ಕಡೆಯಿಂದ) ನೆಲಮಂಗಲ ಬೈಪಾಸ್ ಬಳಿ ಟೋಲ್ ಗೇಟ್ ನಲ್ಲಿ ಸುಂಕ ಕಟ್ಟಬೇಕಾಗುತ್ತದೆ.
ವೇಗ ಮಿತಿ: ಈ ರಸ್ತೆಯಲ್ಲಿ ದೊಡ್ಡ ವಾಹನಗಳು ಅತಿವೇಗ ಮತ್ತು ನಿರಾಸಾಯವಾಗಿ ಚಲಿಸಲು ಅನುಕೂಲ ಕಲ್ಪಿಸಲಾಗಿದೆ. ಫ್ಲೈ ಓವರ್ ಮೇಲೆ ಆಟೋ ಮತ್ತು ದ್ವಿಚಕ್ರ ವಾಹನ, ಟ್ರಾಕ್ಟರ್ ಸಂಚಾರ ನಿಷೇಧಿಸಲಾಗಿದೆ. ವೇಗಮಿತಿ 80ಕಿ.ಮೀ/ಗಂಟೆ ಮೀರಬಾರದು ಎಂದು ಹೆಚ್ಚುವರಿ ಆಯುಕ್ತ(ಟ್ರಾಫಿಕ್) ಪ್ರವೀಣ್ ಸೂದ್ ಹೇಳಿದರು.












Click it and Unblock the Notifications