ನಿತ್ಯಾನಂದನಿಂದ ಜೀವ ಬೆದರಿಕೆ : ಲೆನಿನ್ ಕುರುಪ್ಪನ್

ಇದೇ ಮೊದಲ ಬಾರಿಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಿತ್ಯಾನಂದನ ವಿರುದ್ದ ಪ್ರಕರಣ ದಾಖಲಾದ ನಂತರ ಸ್ವಾಮೀಜಿ ಮತ್ತು ಅವರ ಅನುಯಾಯಿಗಳು ಪ್ರತ್ಯೇಕ್ಷ ಹಾಗೂ ಪರೋಕ್ಷವಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದರು. ದೈಹಿಕವಾಗಿ ತಮ್ಮ ಮೇಲೆ ಹಲ್ಲೆಯಾಗಿದೆ. ತಮ್ಮ ವಿರುದ್ಧ ಆರೋಪ ಮಾಡದಂತೆ ಸ್ವಾಮೀಜಿ 20 ಕೋಟಿ ರುಪಾಯಿಗಳ ಆಮಿಷ ಒಡ್ಡಿದ್ದರು. ಪ್ರಕರಣ ಬಯಲಾಗುವ ಮೊದಲು ಹಾಗೂ ನಂತರವೂ ಇದು ಮುಂದುವರೆಯಿತು ಎಂದು ಕುರುಪ್ಪನ್ ವಿವರಿಸಿದ್ದಾರೆ.
ಹಿಂದೂ ಧರ್ಮದ ಮುಖಂಡರ ಅನುಕಂಪ ಪಡೆಯುವ ಉದ್ದೇಶದಿಂದ ನನ್ನನ್ನು ಕ್ರೈಸ್ತ ಧರ್ಮದವನು ಎಂದು ಸ್ವಾಮೀಜಿ ಅನುಯಾಮಿಗಳು ಬಿಂಬಿಸುತ್ತಿದ್ದಾರೆ. ನನ್ನ ತಂದೆ ಒಬ್ಬ ಕಮ್ಯುನಿಷ್ಟ್ ಆಗಿದ್ದರಿಂದ ನನ್ನ ಹೆಸರನ್ನು ಲೆನಿನ್ ಎಂದು ಇಡಲಾಗಿದೆ. ನಾನು ಹಿಂದೂ ಎಂಬ ದಾಖಲೆಗಳು ನನ್ನ ಬಳಿ ಇವೆ. ನನಗೆ ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸುವ ಉದ್ದೇಶ ಇಲ್ಲ ಎಂದು ಲೆನಿನ್ ಸ್ಪಷ್ಟೀಕರಣ ನೀಡಿದ್ದಾನೆ.
ನಿತ್ಯಾನಂದ ಮಠಕ್ಕೆ ಬರುವ ಮಹಿಳೆಯೊಂದಿಗೆ ರಹಸ್ಯ ಒಪ್ಪಂದ ಮಾಡಿಕೊಳ್ಳುತ್ತಿದ್ದ. ಈ ಮೂಲಕ ಲೈಂಗಿಕವಾಗಿ ಭಕ್ತಾದಿಗಳನ್ನು ಬಳಿಸಿಕೊಳ್ಳುತ್ತಿದ್ದ. ಮೋಕ್ಷದ ಹೆಸರಿನಲ್ಲಿ ಮಹಿಳೆಯರು ಪುರುಷರು ಮಾತ್ರವಲ್ಲದೇ ಮಕ್ಕಳೊಂದಿಗೂ ಅಸಹಜ ಲೈಂಗಿಕ ಚಟುವಟಿಕೆಯಲ್ಲಿ ಆತ ತೊಡಗಿದ್ದ. ಇಂತಹ ಅನೇಕ ಉದಾಹರಣೆಗಳು ಇವೆ ಎಂದು ಕುರುಪ್ಪನ್ ಆರೋಪಿಸಿದ್ದಾನೆ.












Click it and Unblock the Notifications