• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

2ಜಿ ಸ್ಪೆಕ್ಟ್ರಂ ಹಗರಣ ತನಿಖೆಗೆ ಸಮಿತಿ ರಚನೆ

By Mrutyunjaya Kalmat
|

ನವದೆಹಲಿ, ಡಿ. 10 : 2 ಜಿ ಸ್ಪೆಕ್ಟ್ರಂ ಹಗರಣದಿಂದ ಕಂಗೆಟ್ಟಿದ್ದ ಯುಪಿಎ ಸರಕಾರ ಇದೀಗ ಎನ್ ಡಿಎ ಅವಧಿಯಲ್ಲಿನ ಅಕ್ರಮಗಳನ್ನು ಹೊರಹಾಕಲು ಮುಂದಾಗಿದೆ. ಈ ನಿಟ್ಟಿನಲ್ಲಿ ತನಿಖೆಗೆ ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರನ್ನು ನೇಮಿಸಿದೆ. ಶಿವರಾಜ್ ಪಾಟೀಲ್ ಕರ್ನಾಟಕದ ರಾಯಚೂರಿನವರು ಎನ್ನುವುದು ವಿಶೇಷವಾಗಿದೆ.

2001 ರಿಂದ ಎನ್ ಡಿಎ ಅವಧಿಯಲ್ಲಿ ನಡೆದ ತರಂಗಗುಚ್ಛ ಹಂಚಿಕೆ ಬಗ್ಗೆ ಸಿಬಿಐ ತನಿಖೆಗೆ ಸುಪ್ರೀಂಕೋರ್ಟ್ ಸೂಚಿಸಿತ್ತು. ಈ ಮಧ್ಯೆ ಏಕಸದಸ್ಯ ಪೀಠ ರಚಿಸಿರುವ ಸರಕಾರ 2001 ರಿಂದ 2009ರವರೆಗೆ ತರಂಗಗುಚ್ಛ ಹಂಚಿಕೆ ನೀತಿ ಮತ್ತು ಪ್ರಕ್ರಿಯೆಯನ್ನು ಪರಿಶೀಲನೆ ನಡೆಸಲು ಸೂಚಿಸಿದೆ. ಕೇಂದ್ರ ಟೆಲಿಕಾಂ ಸಚಿವ ಕಪಿಲ್ ಸಿಬಲ್ ಈ ವಿಷಯವನ್ನು ಗುರುವಾರ ಪ್ರಕಟಿಸಿದ್ದಾರೆ.

ನಾಲ್ಕು ವಾರದೊಳಗೆ ಏಕದಸದಸ್ಯ ಪೀಠ ತನಿಖೆಯನ್ನು ಪೂರ್ಣಗೊಳಿಸಲಿದೆ. ಮಾಜಿ ಟೆಲಿಕಾಂ ಸಚಿವ ಎ ರಾಜಾ ವಿತರಿಸಿದ 122 ಪರವಾನಿಗಳು ಮಾತ್ರವಲ್ಲದೇ ಹಿಂದಿನ ಎಲ್ಲ ಪ್ರಕ್ರಿಯೆಗಳ ಬಗ್ಗೆಯೂ ಸರಕಾರಕ್ಕೆ ಮಾಹಿತಿ ದೊರೆಯಲಿದೆ. 2 ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದಂತೆ ಸಂಸದ ರಾಜ್ಯ ರಾಜೀವ ಚಂದ್ರಶೇಖರ್ ಉದ್ಯಮಿ ರತನ್ ಟಾಟಾ ಅವರಿಗೆ ಬಹಿರಂಗ ಪತ್ರ ಬರೆದಿದ್ದರು. ಈ ಹಗರಣದ ಹಿನ್ನೆಲೆಯಲ್ಲಿ ಈ ಇಬ್ಬರಿಗೂ ಪತ್ರಗಳ ಮೂಲಕ ಆರೋಪ ಪ್ರತ್ಯಾರೋಪಗಳು ನಡೆದಿವೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
One day after the Supreme Court directed the CBI to widen the probe of the 2G spectrum scam, the government on Thursday announced that a retired Supreme Court judge would look into spectrum allocation procedures and policies during 2001-2009, a period that includes the NDA regime.
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more