ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಿವಾಸಪುರ ಜಿಪಂಗೆ ಸ್ಪರ್ಧಿಸಲು ಮೈಲುದ್ದ ಕ್ಯೂ

By * ಶ್ರೀನಿವಾಸಮೂರ್ತಿ, ಕೋಲಾರ
|
Google Oneindia Kannada News

Zilla panchayat election in Karnataka
ಕರ್ನಾಟಕ ಮತ್ತೊಂದು ಮತಸಮರಕ್ಕೆ ಸಜ್ಜಾಗಿ ನಿಂತಿದೆ. ನಡೆಸುವುದಾಗಿ ರಾಜ್ಯ ಚುನಾವಣಾ ಆರೋಗ ಘೋಷಿಸಿದೆ. ರಾಜ್ಯದ 30 ಜಿಲ್ಲಾ ಪಂಚಾಯತಿಗಳ 1013 ಕ್ಷೇತ್ರಗಳಿಗೆ ಹಾಗೂ 176 ತಾಲೂಕು ಪಂಚಾಯತಿಗಳ 3,400 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಜಿಲ್ಲಾ ಪಂಚಾಯತಿಗೆ ಯಾರ್ಯಾರು ಸ್ಪರ್ಧೆಯಲ್ಲಿದ್ದಾರೆ, ಇಲ್ಲಿ ನೋಡಿ.

ಶ್ರೀನಿವಾಸಪುರ (ಕೋಲಾರಜಿಲ್ಲೆ), ಡಿ. 10 : ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕ ಪಂಚಾಯಿತಿ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಸ್ಪರ್ಧಿಸುವ ಆಕಾಂಕ್ಷಿಗಳ ಪಟ್ಟಿ ದಿನೆ ದಿನೆ ಏರುತ್ತಿದೆ. ತಾಲ್ಲೂಕು ಬಿಟ್ಟು ಬೆಂಗಳೂರು ಸೇರಿಕೊಂಡು ಆಗಾಗ ಊರಿಗೆ ಬಂದು ಹೋಗುವಂತಹ ಯುವಕರು ಸಹ ಟಿಕೆಟ್ ಆಕಾಂಕ್ಷಿಗಳಾಗಿ ತಮ್ಮ ಬಂಧುಗಳ ಮೂಲಕ ಪಕ್ಷದ ವರಿಷ್ಠರ ಮೇಲೆ ಒತ್ತಡ ಹಾಕಿಸುತ್ತಿದ್ದಾರೆ.

ತಾಲ್ಲೂಕಿನಲ್ಲಿ ಪಕ್ಷರಾಜಕೀಯಕ್ಕಿಂತ ವ್ಯಕ್ತಿ ಪ್ರತಿಷ್ಠೆಯ ರಾಜಕೀಯದ್ದೇ ಮೇಲುಗೈ. ಶ್ರೀನಿವಾಸಪುರ ವಿಧಾನಸೌಭೆ ಕ್ಷೇತ್ರದಲ್ಲಿ ಪಕ್ಷಗಳು, ಚಿಹ್ನೆಗಳು ನೆಪ ಮಾತ್ರ. ಇಲ್ಲಿ ನಡೆಯುತ್ತಿರುವುದು ವಿಧಾನಸಭೆ ಮಾಜಿ ಅಧ್ಯಕ್ಷ ರಮೇಶಕುಮಾರ್ (ಸ್ವಾಮಿ) ಮತ್ತು ಹಾಲಿ ಶಾಸಕ ವೆಂಕಟಶಿವಾರೆಡ್ದಿ (ರೆಡ್ಡಿ) ನಡುವೆ ನಡುಯುತ್ತಿರುವ ವ್ಯಕ್ತಿಗತ ರಾಜಕೀಯ ಸಮರ.

ಕಾಂಗ್ರೆಸ್ ಪಕ್ಷದ ಅಕಾಂಕ್ಷಿಗಳು ಮುಖಂಡರಾದ ಮಾಜಿ ಸ್ಪೀಕರ್ ರಮೇಶಕುಮಾರ್(ಸ್ವಾಮಿ)ಯವರ ಅಡ್ಡಗಲ್ಲು ತೋಟದ ಮನೆ ಹಾಗು ಕೇಂದ್ರ ಸಚಿವ ಮುನಿಯಪ್ಪನವರ ಬೆಂಗಳೂರು ಸಂಜಯನಗರದ ನಿವಾಸ ಸುತ್ತುತ್ತಿದ್ದರೆ ಜೆಡಿಎಸ್ ನವರು ಶಾಸಕ ವೆಂಕಟಶಿವಾರೆಡ್ಡಿಯವರ ಚಿಂತಾಮಣಿಯಲ್ಲಿರುವ ಮನೆಗೆ ಅಲೆಯುತ್ತಿದ್ದಾರೆ.

ಪ್ರಮುಖ ಆಕಾಂಕ್ಷಿಗಳು

ದಳಸನೂರು - ಎಸ್ ಸಿ(ಮಹಿಳೆ) : ಜೆಡಿಎಸ್ ನಿಂದ ಗ್ರಾಪಂ ಸದಸ್ಯ ಶಿವಪುರಗಣೇಶ್, ಹಾಲಿ ತಾಪಂ ಉಪಾಧ್ಯಕ್ಷೆ ಲಕ್ಷ್ಮಿದೇವಮ್ಮ, ಕಾಂಗ್ರೆಸ್ನಿಂದ ಮಾಜಿ ತಾಪಂ ಸದಸ್ಯ ಪಣಸಮಾಕನಹಳ್ಳಿ ನರಸಿಂಪ್ಪನವರ ಶ್ರೀಮತಿ, ಆರಿಕುಂಟೆ ಗ್ರಾಪಂ ಆಧ್ಯಕ್ಷೆ ಹಾಗು ಲಾಟರಿ ಸೀನಪ್ಪನವರ ಶ್ರೀಮತಿ, ಕೇಂದ್ರ ಸಚಿವ ಮುನಿಯಪ್ಪನವರ ಪರಮಾಪ್ತ ದೊಡಮಲದೊಡ್ಡಿ ಈರಪ್ಪನವರ ಪತ್ನಿ ಅವರುಗಳ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿದೆ.

ಯಲ್ದೂರು - (ಸಾಮಾನ್ಯ ಮಹಿಳೆ) : ಜೆಡಿಎಸ್ ನಿಂದ ಹಾಲಿ ಜಿಪಂ ಸದಸ್ಯ ರಾಜಣ್ಣನವರ ಪತ್ನಿ ಗೀತಾರಾಜ್, ಮಾಜಿ ತಾಪಂ ಅಧ್ಯಕ್ಷೆ ಹೊಸಹಳ್ಳಿ ಅಶ್ವಥಮ್ಮ, ಹಾಲಿ ತಾ.ಪಂ ಸದಸ್ಯ ರಾಜಶೇಖರರೆಡ್ಡಿ ಪತ್ನಿ, ಹಾಲಿ ಗ್ರಾಪಂ ಸದಸ್ಯ ವಕೀಲ ಸಂಪತ್ ಕುಮಾರ ಪತ್ನಿ, ಹಾಲಿ ಗ್ರಾಪಂ ಸದಸ್ಯ ವಕೀಲ ಜಯರಾಮೇಗೌಡ ಪತ್ನಿಯವರುಗಳ ಹೆಸರು ಕೇಳಿಬರುತ್ತಿವೆ. ಕಾಂಗ್ರೆಸನಿಂದ ಮಾಜಿ ತಾಪಂ ಅಧ್ಯಕ್ಷ ಶಾಗತ್ತೂರು ಸುಧಾಕರ ಪತ್ನಿ ರತ್ನಮ್ಮ, ಜಿಲ್ಲಾ ಸಹಕಾರಿ ಯೂನಿಯನ್ ಸದಸ್ಯ ಶೇಷಾಪುರ ಗೋವಿಂದಗೌಡ ಪತ್ನಿ, ಹೊಗಳಗೆರೆ ಗ್ರಾಪಂ ಹಾಲಿ ಸದಸ್ಯ ವಕೀಲ ಮುರಳಿಧರ್ ಪತ್ನಿ, ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿದೆ.

ಗೌವನಿಪಲ್ಲಿ - (ಸಾಮಾನ್ಯ) : ಕ್ಷೇತ್ರದಿಂದ ಕಾಂಗ್ರೆಸ್ ಆಕಾಂಕ್ಷಿಗಳಾಗಿ ಹಾಲಿ ಜಿಪಂ ಸದಸ್ಯ ತೂಪಲ್ಲಿ ನಾರಾಯಣಸ್ವಾಮಿ, ಬೊರ್ ವೆಲ್ ಕೃಷ್ಣಾರೆಡ್ಡಿ, ನಾಗರೆಡ್ಡಿಪಲ್ಲಿ ಆನಂದ್, ಬೈರಗಾನಪಲ್ಲಿ ಸಂಜಯರೆಡ್ಡಿ ಹೆಸರುಗಳು ಮುಂಚೂಣಿಯಲ್ಲಿದೆ. ಜೆಡಿಎಸ್ ನಿಂದ ಜಿಪಂ ಹಾಲಿ ಸದಸ್ಯ ಹಾಗು ಮಾಜಿ ಅಧ್ಯಕ್ಷ ಎಂ ಶ್ರೀನಿವಾಸನ್, ಮಾಜಿ ಎಪಿಎಂಸಿ ಆಧ್ಯಕ್ಷ ಜಿಡಿಮಾಕಲಹಳ್ಳಿ ಸೋಮಶೇಖರರೆಡ್ಡಿ, ಭಾರತೀಯ ಜನತಾಪಕ್ಷದ ಅಭ್ಯರ್ಥಿಯಾಗಿ ಭೀಮಗಾನಪಲ್ಲಿ ಶಿವಾರೆಡ್ಡಿ ನಿಲ್ಲುವುದು ಖಚಿತ ಎಂಬ ಮಾತು ಕೇಳಿ ಬಂದಿದೆ.

ರಾಯಲ್ಪಾಡು - (ಎಸ್ ಟಿ) : ಕ್ಷೇತ್ರದಲ್ಲಿ ಕಾಂಗ್ರೆಸ ನಿಂದ ಏಕಮೇವ ಆಭ್ಯರ್ಥಿಯಾಗಿ ಕೇಂದ್ರ ಸಚಿವರ ಪರಮಾಪ್ತ ಗೋವಿಂದಸ್ವಾಮಿ ಹೆಸರು ಪ್ರಸ್ತಾಪಿಸಲಾಗಿದೆ. ಭಾರತೀಯ ಜನತಾ ಪಕ್ಷದಿಂದ ಜಿಲ್ಲಾ ಮುಖಂಡ ಸುಧಾಕರ ಹೆಸರು ಖಚಿತವಾಗಿದೆ. ಜೆಡಿಎಸ್ ನಿಂದ ನಿವೃತ್ತ ಉಪಾಧ್ಯಯ ಕೂರಿಗೇಪಲ್ಲಿ ವೆಂಕಟರಮಣಪ್ಪ ಮತ್ತು ವಂಗಸವಾರಿಪಲ್ಲಿ ನರಸಿಂಹಪ್ಪ ಎನ್ನಲಾಗುತ್ತಿದೆ.

ರೋಣುರು : ಕಾಂಗ್ರೆಸ್ ಅಭ್ಯರ್ಥಿಯಾಗಿ ದಿಂಬಾಲ ಆಶೋಕ ಹೆಸರು ಬಹುತೇಕ ಖಚಿತ ಎನ್ನಲಾಗುತ್ತಿದೆ. ಜೆಡಿಎಸ್ ನಿಂದ ಲೋಚರವುಪಲ್ಲಿ ಗೋವಿಂದಪ್ಪ ಅಥವ ಸೋಮಶೇಖರೆಡ್ಡಿ, ಭಾಜಪದಿಂದ ಅವಲಕುಪ್ಪ ಜಯರಾಮರೆಡ್ಡಿ ಹೆಸರುಗಳು ಕೇಳಿಬರುತ್ತಿದೆ. ಇಷ್ಟೆಲ್ಲ ಬೆಳವಣಿಗೆಯಲ್ಲಿ ಟಿಕೆಟ್ ವಂಚಿತರು ಕೊನೆಗಳಿಗೆಯಲ್ಲಿ ಪಕ್ಷ ಬದಲಾವಣೆಯಾದರು ಆಗಬಹುದು ಎನ್ನುವ ಮಾತು ಇದ್ದೇ ಇದೆ.

ಕೇಂದ್ರ ಸಚಿವ ಮುನಿಯಪ್ಪ ಬೆಂಬಲಿಗರಾಗಿ ಕಾಂಗ್ರೆಸ್ ನೊಂದಿಗೆ ಗುರತಿಸಿಕೊಂಡಿರುವ ಹಾಲಿ ಜಿಪಂ ಸದಸ್ಯ ತೂಪಲ್ಲಿ ನಾರಾಯಣಸ್ವಾಮಿ ಅವರನ್ನು ಜೆಡಿಎಸ್ ಪಕ್ಷಕ್ಕೆ ವಾಪಸ್ಸು ಕರೆತಂದು ಗೌನಿಪಲ್ಲಿಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸುವಂತೆ ಸ್ವತಃ ದೆವೇಗೌಡರೇ ಕೋಲಾರ ಜಿಲ್ಲಾ ಜೆಡಿಎಸ್ ಅಧ್ಯಕ್ಷರಿಗೆ ಸೂಚಿಸಿದ್ದಾರೆ. ಗೌನಿಪಲ್ಲಿ ಕ್ಷೇತ್ರದಲ್ಲಿ ರಾಜಕೀಯ ಬದಲಾವಣೆಯಾದರೆ ಜಿಪಂ ಮಾಜಿ ಅಧ್ಯಕ್ಷ ಶ್ರೀನಿವಾಸನ್ ಅವರನ್ನು ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೋಳೂರು ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಬಹುದು ಎಂಬ ಮಾತು ಸಹ ಕೇಳಿಬರುತ್ತಿದೆ.

English summary
Long list of aspirants to contest for Kolar zilla panchayat elections in Srinivaspur Constituency. Lot of youth politicians are in the race to get party ticket to contest. An over view of Kolar district politics by Sreenivasa Murthy, Citizen Reporter in Kolar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X