ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರವಾರವನ್ನು ಗೋವಾಕ್ಕೆ ಸೇರಿಸಿ! : ಗೋವಾ ಸಚಿವ

By Mrutyunjaya Kalmat
|
Google Oneindia Kannada News

ಕಾರವಾರ ಡಿ 10 : ಕೊಂಕಣಿ ಹೆಚ್ಚಿನ ಭಾಷಿಗರು ಇರುವ ಕಾರವಾರ ಗಡಿಪ್ರದೇಶ ಅಭಿವೃದ್ದಿ ಇಲ್ಲದೆ ನಿರ್ಲಕ್ಷ್ಯ ಗೊಂಡಿದೆ. ಗೋವಾ ರಾಜ್ಯವನ್ನು ವಿಸ್ತರಿಸಬೇಕು. ಬಹುಭಾಷಿಗರಾದ ಕೊಂಕಣಿಯರು ಇದನ್ನು ಬೆಂಬಲಿಸಬೇಕು. ಕಾರವಾರ ಮತ್ತು ಕಾರವಾರ ಗಡಿ ಪ್ರದೇಶವನ್ನು ಗೋವಾಕ್ಕೆ ಸೇರಿಸಬೇಕೆಂದು ಗೋವಾ ಲೋಕೋಪಯೋಗಿ ಸಚಿವ ಚರ್ಚಿಲ್ ಅಲೆಮಾವೋ ವಿವಾದಕಾರಿ ಹೇಳಿಕೆ ನೀಡಿದ್ದಾರೆ. ಸಚಿವರ ಈ ಹೇಳಿಕೆಯನ್ನು ಕನ್ನಡ ಪರ ಸಂಘಟನೆಗಳು ಖಂಡಿಸಿದ್ದು, ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ಕರಾವಳಿ ಗಡಿ ನಾಗರಿಕ ಸಮಿತಿ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮಾತನಾಡುತ್ತಿದ್ದ ಅಲೆಮಾವೋ, ಈ ಪ್ರದೇಶವನ್ನು ಕರ್ನಾಟಕ ಸರಕಾರ ಸಂಪೂರ್ಣ ನಿರ್ಲಕ್ಷಿಸಿದೆ. ಇಲ್ಲಿನ ಬಹುಭಾಷಿಗರಾದ ಕೊಂಕಣಿಯರು ಇದನ್ನೇ ಬಯಸುತ್ತಿದ್ದಾರೆ. ಈ ಪ್ರದೇಶವನ್ನು ಮತ್ತು ರಾಜ್ಯದ ಕೊಂಕಣಿಯರು ಹೆಚ್ಚಾಗಿ ಮಾತಾನಾಡುವ ಪ್ರದೇಶವನ್ನು ಗೋವಾಕ್ಕೆ ನೀಡಬೇಕೆಂದು ಕರ್ನಾಟಕದದಲ್ಲಿ ಗೋವಾ ಸಚಿವರು ಉದ್ಧಟತನದ ಹೇಳಿಕೆ ನೀಡಿದ್ದಾರೆ.

ಅಲೆಮಾವೋ ಹೇಳಿಕೆಗೆ ಕನ್ನಡಪರ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಕರ್ನಾಟಕ ರಕ್ಷಣಾ ವೇದಿಕೆ, ಕಸಪಾ ಮತ್ತು ಇತರ ಕನ್ನಡಪರ ಸಂಘಟನೆಗಳು ಪ್ರತ್ಯೇಕ ಪತ್ರಿಕಾಗೋಷ್ಠಿ ನಡೆಸಿ ಸಚಿವ ಅಲೆಮಾವೋ, ಕರ್ನಾಟಕ ಗಡಿ ನಾಗರಿಕ ಸಮಿತಿ ಪದಾಧಿಕಾರಿಗಳು ಮತ್ತು ಸಮಾರಂಭದಲ್ಲಿದ್ದ ಎಲ್ಲರ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

English summary
Various Pro-Kannada organisation have condemned the statement of Churchill Alemao, PWD Minister of Goa, that border taluks of Karwar and Joida, where a majority of people speak Konkani, should be merged with Goa for their development.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X