ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಳ್ಳು ದಾಖಲೆ ಸೃಷ್ಟಿ ಗಣಿಗಾರಿಕೆಯಿಂದ ಕಾಂಚನ ವೃಷ್ಟಿ

By * ರೋಹಿಣಿ, ಬಳ್ಳಾರಿ
|
Google Oneindia Kannada News

Bellary mining fraud case
ಬಳ್ಳಾರಿ, ಡಿ.10: ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಬಳ್ಳಾರಿಯ ಮೆ: ಸ್ಪಾರ್ಕ್ ಲೈನ್ ಮೈನಿಂಗ್ ಕಾರ್ಪೊರೇಷನ್ ಸಂಸ್ಥೆಗೆ ಕೋಟ್ಯಾಂತರ ರುಪಾಯಿಗಳನ್ನು ವಂಚಿಸಿದ ಆರೋಪದ ಮೇಲೆ ಆರು ಆರೋಪಿಗಳನ್ನು ಬ್ರೂಸ್ ಪೇಟೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ನಾಗರಾಜ್ ಅವರು ಹೇಳಿದರು.

ಬಂಧಿತ ಆರೋಪಿಗಳು ಅನಂತಪುರ ನಿವಾಸಿ ಸಿ.ಹೆಚ್. ಮೋಹನ್‌ರಾವ್ (50), ಬಳ್ಳಾರಿ ನಿವಾಸಿ ಸಿ. ಸುಧಾಕರ್ (45), ಕೆ. ದೊಡ್ಡರಾಮಯ್ಯ (50), ಜಿ. ಸೂರ್ಯಕಾಂತರೆಡ್ಡಿ (43), ಕೆ. ವಿಜಯಪ್ರಕಾಶ್ ಮತ್ತು ಎ. ಎಲಿಸಾ. ಇವರೆಲ್ಲರೂ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಬಂಧಿತ ಆರೋಪಿಗಳು ಜಿಲ್ಲಾ ನೋಂದಣಾಧಿಕಾರಿ ಕಚೇರಿಯಲ್ಲಿ 2004ರಲ್ಲಿ ನೋಂದಣಿಯಾಗಿರುವ ಮೆ: ಸ್ಪಾರ್ಕ್ ಲೈನ್ ಮೈನಿಂಗ್ ಕಾರ್ಪೊರೇಷನ್ ಸಂಸ್ಥೆ ಹೆಚ್. ಸೌಜನ್ಯ ಗಂ. ವಿಜಯ ಪ್ರಕಾಶ್ ರೆಡ್ಡಿ ಹಾಗೂ ಕೆ. ರಾಜಶೇಖರ ರೆಡ್ಡಿ, ಅರವಿಂದಾಚಾರಿ, ಹೆಚ್. ತಿಮ್ಮಾರೆಡ್ಡಿ, ಅಶ್ವಿನ್‌ಕುಮಾರ್ ನಾಯ್ಕ ಇವರುಗಳ ಪಾಲುದಾರಿಕೆಯಲ್ಲಿ ನಡೆದುಕೊಂಡು ಬಂದಿದೆ.

ಈ ಸಂಸ್ಥೆಯ ಪಾಲುದಾರರಲ್ಲಿ ಒಬ್ಬರಾದ ಹೆಚ್. ತಿಮ್ಮಾರೆಡ್ಡಿ ಅವರು ಮರಣ ಹೊಂದಿದ್ದು, ಸದರಿ ಮಾಹಿತಿ ನೀಡಲು ನೋಂದಣಾಧಿಕಾರಿಗಳ ಕಚೇರಿಗೆ ಹೋದಾಗ ಪಾಲುದಾರಿಕೆ ಪಟ್ಟಿಯಲ್ಲಿ ಆರೋಪಿಗಳ ಹೆಸರಿರುವುದು ಬೆಳಕಿಗೆ ಬಂದಿದೆ. ಆರೋಪಿಗಳು ಸಂಸ್ಥೆಗೆ ಸಂಬಂಧಿಸಿದ ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ಸಾರ್ವಜನಿಕರನ್ನು ವಂಚಿಸುತ್ತಿರುವ ಕುರಿತು ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ತನಿಖೆ ನಡೆಸಿದಾಗ ಬಂಧಿತ ಆರು ಜನರ ವಿರುದ್ಧದ ದೂರಿನಲ್ಲಿ ವಂಚನೆ ಪ್ರಕರಣ ಪತ್ತೆ ಆಗಿದ್ದು, ಪೊಲೀಸರು ಶಂಕಿತರನ್ನು ಕೂಡಲೇ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

English summary
Bellary Bruspet Police have held six persons who had fake documents related to Sparkline mining corp and accused also involved in illegal mining scam worth multi crores of rupees said Ballari SP MN Nagaraj.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X