ಲೈಂಗಿಕ ಕಿರುಕುಳ ತಡೆ ಮಸೂದೆ ಮಂಡನೆ

Sexual Harassment Bill 2010 tabled
ನವದೆಹಲಿ, ಡಿ.8: ಉದ್ಯೋಗಸ್ಥ ಮಹಿಳೆಯರ ಮೇಲೆ ನಡೆಯುವ ವಿವಿಧ ರೀತಿಯ ಲೈಂಗಿಕ ಕಿರುಕುಳಗಳನ್ನು ನಿಯಂತ್ರಿಸುವ ಮಸೂದೆಯನ್ನು ಲೋಕಸಭೆಯಲ್ಲಿ ಮಂಗಳವಾರದಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ರಾಜ್ಯ ಸಚಿವೆ ಕೃಷ್ಣ ತೀರ್ಥ ಅವರು ಮಂಡಿಸಿದರು. ಲೈಂಗಿಕ ಕಿರುಕುಳಕ್ಕೊಳಗಾಗುವವರು ನೀಡುವ ಲಿಖಿತ ದೂರನ್ನು ತನಿಖೆಗೊಳಪಡಿಸಲು ಸಂಸ್ಥೆ ಆಂತರಿಕ ಸಮಿತಿ ಯೊಂದನ್ನು ಕಡ್ಡಾಯವಾಗಿ ರಚಿಸಬೇಕಿರುವ ಕಾನೂನನ್ನು ಉದ್ಯೋಗ ಸ್ಥಳದಲ್ಲಿ ಲೈಂಗಿಕ ಕಿರುಕಳ ವಿರುದ್ಧ ಮಹಿಳೆಯ ರಕ್ಷಣೆ ಮಸೂದೆ- 2010 ಒಳಗೊಂಡಿದೆ.

ಮನೆಗೆಲಸದವರನ್ನು ಹೊರತು ಪಡಿಸಿ ಬೇರೆಲ್ಲಾ ಕ್ಷೇತ್ರದಲ್ಲಿನ ಉದ್ಯೋಗಸ್ಥ ಮಹಿಳೆಯರಿಗೆ ಅವರ ವಯಸ್ಸು ಅಥವಾ ಸ್ಥಾನಮಾನವನ್ನು ಗಣನೆಗೆ ತೆಗೆದುಕೊಳ್ಳದೆ ಯಾವುದೇ ರೀತಿಯ ಲೈಂಗಿಕ ತೊಂದರೆಯಾಗದ ಮುಕ್ತ ವಾತಾವರಣ ಕಲ್ಪಿಸುವುದು ಮತ್ತು ಪ್ರತಿಯೊಬ್ಬ ಮಹಿಳೆಯನ್ನು ಇದರಿಂದ ರಕ್ಷಿಸುವುದು ಮಸೂದೆಯ ಉದ್ದೇಶ ವಾಗಿದೆ ಎಂದು ಮಸೂದೆ ಮಂಡಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಕೃಷ್ಣ ತೀರ್ಥ ಹೇಳಿದರು.

ಶೋಷಣೆಗೊಳಗಾದವರಿಗೆ ಪರಿಹಾರ ನೀಡಿಸುವ ಶಾಸನಬದ್ಧ ಅಧಿಕಾರದ ಹೊಣೆಗಾರಿಕೆಯನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿ, ಜಿಲ್ಲಾ ನ್ಯಾಯಾಧೀಶ ಅಥವಾ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಿಗೆ ವಹಿಸಲಾಗುವುದು. ಅಲ್ಲದೆ ಆಂತರಿಕ ತನಿಖಾ ಸಮಿತಿ ರಚನೆ ಮಾಡದಿರುವುದು ಅಥವಾ ಹೊಸ ಕಾನೂನಿನ ನಿಯಮಾವಳಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದು ಕಂಡು ಬಂದರೆ ಅಂತಹವರಿಗೆ ರೂ.50,000 ದಂಡ ವಿಧಿಸಬಹುದಾಗಿದೆ.

ಒಂದು ವೇಳೆ ಸುಳ್ಳು ಅಥವಾ ದುರುದ್ದೇಶದಿಂದ ದೂರು ನೀಡಿದ್ದು ಕಂಡುಬಂದಲ್ಲಿ ಅಂತಹ ದೂರು ನೀಡಿ ದವರ ವಿರುದ್ಧ ಸೇವಾ ನಿಯಮಗಳ ಪ್ರಕಾರ ಅಥವಾ ಇನ್ನಾವುದೇ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಲೂ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಮಸೂದೆಯು ಸರಕಾರಿ ಕಚೇರಿ, ಸರಕಾರೇತರ ಸಂಸ್ಥೆ, ಖಾಸಗಿ ಸಂಸ್ಥೆ, ಅಸಂಘಟಿತ ವಲಯ, ಸ್ವ ಉದ್ಯೋಗ ಅಥವಾ ಏಕ ವ್ಯಕ್ತಿ ಒಡೆತನದಂತಹ ಎಲ್ಲವನ್ನು ಒಳಗೊಂಡಿದ್ದು, ಉದ್ಯೋಗ ಸ್ಥಳಗಳಲ್ಲಿ ನಡೆಯುವ ಲೈಂಗಿಕ ದೌರ್ಜ ನ್ಯವನ್ನು ಮಹಿಳೆಯರ ಹಕ್ಕುಗಳಾದ ಸಮಾನತೆ, ಬದುಕು ಮತ್ತು ಸ್ವಾತಂತ್ರದ ಉಲ್ಲಂಘನೆಯೆಂದು ಪರಿಗಣಿಸುವ ಅಂಶವೂ ಮಸೂದೆಯಲ್ಲಿ ಅಡಕವಾಗಿದೆ ಎಂದು ಕೃಷ್ಣ ತೀರ್ಥ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+