ರಾಜ್ಯ ಸಾರಿಗೆ ಸಂಸ್ಥೆಗೆ ಎಕ್ಸಲೆಂಟ್ ಪ್ರಶಸ್ತಿ

Minister Ashoka receives MOUD award
ಬೆಂಗಳೂರು, ಡಿ.6 ನಿಗಮಕ್ಕೆ Award for Excellence-2010 ಹಾಗೂ ನಗದು ಪ್ರಶಸ್ತಿ ರೂ.3 ಲಕ್ಷಗಳೊಂದಿಗೆ ಉತ್ಕೃಷ್ಟತಾ ಪುರಸ್ಕಾರ ಲಭಿಸಿದೆ. ನಿಗಮವು ಅನುಷ್ಠಾನಗೊಳಿಸಿರುವ ಪರಿಸರ ಸ್ನೇಹಿ ಕಾರ್ಯಕ್ರಮಗಳು, ಇಂಧನ ಕಾರ್ಯನೀತಿ ಮತ್ತು ಜೈವಿಕ ಇಂಧನ-ಎಥನಾಲ್ ಮಿಶ್ರಿತ ಡೀಸೆಲ್‌ನ ಬಳಕೆ ಒಳಗೊಂಡಂತೆ ಇನ್ನಿತರ ಪರಿಸರ ಸಂರಕ್ಷಣೆಯ ಉಪಕ್ರಮಗಳಿಗೆ ಸದರಿ ಪ್ರಶಸ್ತಿಯು "Best Clean Development Mechanism Project" " ವರ್ಗದಲ್ಲಿ ನರ್ಮ ಯೋಜನೆಯಡಿಯಲ್ಲಿ ನಗರ ಸಾರಿಗೆಯಲ್ಲಿನ ಉತ್ಕೃಷ್ಟತೆಗಾಗಿ ಲಭಿಸಿದೆ.

ನವದೆಹಲಿಯ ಹೋಟೇಲ್ ಗ್ರ್ಯಾಂಡ್ ನಲ್ಲಿ ನಡೆದ ಅರ್ಬನ್ ಮೊಬಿಲಿಟಿ ಸಮ್ಮೇಳನದಲ್ಲಿ ಜೈಪಾಲ್ ರೆಡ್ಡಿ ಸನ್ಮಾನ್ಯ ನಗರಾಭಿವೃದ್ಧಿ ಸಚಿವರು, ಭಾರತ ಸರ್ಕಾರ ರವರು ಆರ್.ಅಶೋಕ, ಸನ್ಮಾನ್ಯ ಗೃಹ ಹಾಗೂ ಸಾರಿಗೆ ಸಚಿವರು ಮತ್ತು ಗೌರವ ಗುಪ್ತ ಭಾ.ಆ.ಸೇ. ವ್ಯವಸ್ಥಾಪಕ ನಿರ್ದೇಶಕರು ಕ.ರಾ.ರ.ಸಾ.ನಿ ರವರಿಗೆ ವಿತರಿಸಿದರು.

ನಿಗಮಕ್ಕೆ ನಗರಾಭಿವೃದ್ಧಿ ಸಚಿವಾಲಯ ಭಾರತ ಸರ್ಕಾರರವರ "Award for Excellence" " ಸತತವಾಗಿ ಮೂರನೆಯ ಬಾರಿಗೆ ಲಭಿಸಿರುತ್ತದೆ. ಈ ಹಿಂದೆ 2009ರಲ್ಲಿ ವಿದ್ಯುನ್ಮಾನ ಚಾಲಕ ಪರೀಕ್ಷಾ ವ್ಯವಸ್ಥೆಯ ಪದ್ಧತಿಯ ಮೂಲಕ ಪ್ರತಿಶತಃ 100% ಪಾರದರ್ಶಕತೆಯಿಂದ ಚಾಲಕರ ನೇಮಕಾತಿಗಾಗಿ ಮತ್ತು 2008 ರಲ್ಲಿ ವಿದುನ್ಮಾನ ಟಿಕೇಟ್ ಯಂತ್ರಗಳನ್ನು 100% ರಷ್ಟು ಬಳಕೆ ಮಾಡಿ ಆದಾಯ ಸೋರಿಕೆಯಲ್ಲಿ ಕಡಿತ ಹಾಗೂ ಟಿಕೇಟ್ ವ್ಯವಸ್ಥೆಯಲ್ಲಿ ಸಂಪೂರ್ಣ ಭದ್ರತೆ ಹಾಗೂ ನಿರ್ವಹಣೆಗಾಗಿ ಸದರಿ ಪ್ರಶಸ್ತಿಗಳು ಲಭಿಸಿರುತ್ತದೆ.

Best Clean Development Mechanism Project: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು, ಇಂಧನ-ಎಥನಾಲ್ ಮಿಶ್ರಿತ ಡೀಸೆಲ್ ಬಳಕೆಯನ್ನು ಜಾರಿಗೆ ತಂದಿರುವ ರಾಷ್ಟ್ರದ ಹಾಗೂ ಅಗ್ನೇಯ ಏಷ್ಯಾದಲ್ಲಿಯೇ ಪ್ರಪ್ರಥಮ ಸಾರಿಗೆ ನಿಗಮವಾಗಿದೆ. ಸದರಿ ಯೋಜನೆಯು ವಿಶ್ವ ಬ್ಯಾಂಕ್ ನಿಂದ ಅನುಮೋದನೆ ಪಡೆದಿರುವ ಉಪಕ್ರಮವಾಗಿದೆ.

ನಿಗಮವು ತನ್ನ 21 ಘಟಕಗಳಲ್ಲಿ, 2100 ಬಸ್ಸುಗಳಲ್ಲಿ ಜೈವಿಕ ಇಂಧನ-ಎಥನಾಲ್ ಮಿಶ್ರಿತ ಡೀಸೆಲ್‌ನ್ನು ಸಮರ್ಪಕವಾಗಿ ಉಪಯೋಗಿಸಲಾಗುತ್ತಿದೆ. ಈ ಉಪಕ್ರಮದಿಂದಾಗಿ ಡೀಸೆಲ್ ಬಳಕೆಯಲ್ಲಿ ಗಣನೀಯ ಪ್ರಮಾಣದ ಇಳಿಕೆ, ವಾಹನಗಳಿಂದ ಹೊರಸೂಸುವ ಮಾಲಿನ್ಯಕಾರಕ ವಸ್ತುಗಳ ಪ್ರಮಾಣದಲ್ಲಿ ಕಡಿತ, ವಾಹನಗಳ ಇಂಧನ ಬಳಕೆಯಲ್ಲಿ ಕ್ಷಮತೆ ಹಾಗೂ ಜೈವಿಕ ಇಂಧನದ ಬಳಕೆಯಿಂದ ವಾಹನಗಳ ಮಾಲಿನ್ಯ ವಿಸರ್ಜನೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಲು ಸಹಕಾರಿಯಾಗಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+