ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಟ್ಟಾ ಗತಿ ಸಿಎಂಗೂ ಆಗಲಿದೆಯೇ?

By Mrutyunjaya Kalmat
|
Google Oneindia Kannada News

Is Yeddyurappa in Lokayukta net
ಬೆಂಗಳೂರು, ಡಿ. 5 : ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧದ ಪ್ರಕರಣಗಳು ಸೇರಿದಂತೆ ಎಲ್ಲ ಭೂ ಹಗರಣಗಳ ತನಿಖೆಗೂ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮಾದರಿಯನ್ನೇ ಅನುಸರಿಸಲಾಗುವುದು ಎಂದು ಲೋಕಾಯುಕ್ತ ನ್ಯಾ ಎನ್ ಸಂತೋಷ್ ಹೆಗ್ಡೆ ಖಚಿತವಾಗಿ ತಿಳಿಸಿದ್ದಾರೆ.

ಸಿಎಂ ವಿರುದ್ಧ ದಾಖಲಾಗಿರುವ ದೂರುಗಳ ಬಗ್ಗೆ ನೀವೇ ತನಿಖೆ ನಡೆಸಿ ಎಂದು ಹೈಕೋರ್ಟ್ ಹೇಳಿದರೆ, 8 ತಿಂಗಳೊಳಗೆ ವಿಚಾರಣೆ ಮುಗಿಸುತ್ತೇನೆ. ಆರೋಪ ಸಾಬೀತಾದರೆ ಅವರಿಗೂ (ಸಿಎಂ ಮತ್ತು ಪುತ್ರರು) ಕಟ್ಟಾ ನಾಯ್ಡು ವಿರುದ್ಧ ಈಗ ಕೈಗೊಂಡಿರುವ ಕ್ರಮವನ್ನೇ ಅನುಸರಿಸಲಾಗುವುದು. ಅಂದರೆ ಎಫ್‌ಐಆರ್ ದಾಖಲು, ವಿಚಾರಣೆ, ಅಗತ್ಯಬಿದ್ದರೆ ಬಂಧನ, ನ್ಯಾಯಾಲಯಲ್ಲಿ ಆರೋಪಪಟ್ಟಿ ಸಲ್ಲಿಕೆ-ಈ ಎಲ್ಲ ಕ್ರಮಗಳನ್ನೂ ಪಾಲಿಸಲಾಗುವುದು. ಒಬ್ಬರಿಗೆ ಒಂದು, ಮತ್ತೊಬ್ಬರಿಗೆ ಇನ್ನೊಂದು ಎನ್ನುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದಾರೆ.

ಭ್ರಷ್ಟಾಚಾರ, ದುರಾಡಳಿತದ ವಿರುದ್ದ ಸಮರ ಸಾರಿರುವ ನ್ಯಾ ಸಂತೋಷ್ ಹೆಗ್ಡೆ, ಈಗ ಕೆಐಎಡಿಬಿ ಅವ್ಯವಹಾರದ ಮೂಟೆಗೆ ಕೈ ಹಾಕಿದ್ದಾರೆ. ತಮ್ಮ ಜನ್ಮ ಜಾಲಾಡಲು ಹೊರಟಿರುವ ಲೋಕಾಯುಕ್ತರಿಗೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಪ್ರಾಣ ಬೆದರಿಕೆಯನ್ನೂ ಹಾಕಿವೆ ಆದರೆ, ಇದ್ಯಾವುದನ್ನೂ ಲೆಕ್ಕಿಸದೆ ಮುನುಗ್ಗಿರುವ ಲೋಕಾಯುಕ್ತರ ಹಠ ಈಗ ಫಲ ನೀಡಿದೆ. ಕಳಂಕಿತ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

English summary
The sword of Damocles seems to be hanging over the ruling Bharatiya Janata Party (BJP). Lok ayukta N Santosh Hegde said on Friday that there were 10 more big fish to be caught in land scam cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X