ಪೊನ್ನಂಪೇಟೆಯಲ್ಲಿ ಗುಂಡೇಟಿಗೆ ವ್ಯಕ್ತಿ ಬಲಿ

ಪೊನ್ನಂಪೇಟೆ, ಡಿ.5: ಕೊಡಗಿನಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಸಿದೆ. ಕಳೆದ ಕೆಲವು ತಿಂಗಳ ಹಿಂದೆ ಯವಕನೊಬ್ಬ ಚಿಕ್ಕಪ್ಪ ಹಾಗೂ ಚಿಕ್ಕಮ್ಮನನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ಇನ್ನೂ ನೆನಪಿನಿಂದ ಮಾಸದಿರುವಾಗಲೇ ಜಿಲ್ಲೆಯ ಪೊನ್ನಂಪೇಟೆ ಬಳಿಯ ಹಳ್ಳಿಗಟ್ಟು ಸಿಇಟಿ ಕಾಲೇಜು ಬಳಿಯ ಅಂಗಡಿ ಮುಂದೆ ನಿಂತಿದ್ದ ವ್ಯಕ್ತಿಯೊಬ್ಬರನ್ನು ಹಂತಕರು ಗುಂಡಿಕ್ಕಿ ಹತ್ಯೆಗೈದು ಪರಾರಿಯಾಗಿರುವ ಘಟನೆ ನಡೆದಿದೆ.

ಹಳ್ಳಿಗಟ್ಟು ನಿವಾಸಿ ದಿವಂಗತ ಬೆಳ್ಳಿಯಪ್ಪ ಎಂಬುವರ ಪುತ್ರ ಅಡ್ಡಂಡ ಸಚಿನ್ ಎಂಬಾತನೇ ಹಾಡುಹಗಲೇ ಗುಂಡೇಟಿಗೆ ಬಲಿಯಾದವನು. ಈತ ಶುಕ್ರವಾರ ಬೆಳಿಗ್ಗೆ 9.30ರ ವೇಳೆಗೆ ಹಳ್ಳಿಗಟ್ಟಿನ ಅಂಗಡಿ ಮುಂದೆ ಬಂದಿದ್ದನು. ಈ ಸಂದರ್ಭ ಯಾರು ಇಲ್ಲದನ್ನು ಗಮನಿಸಿದ ಹಂತಕರು ಗುಂಡು ಹಾರಿಸಿದ್ದಾರೆ. ಪರಿಣಾಮ ಸಚಿನ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಆತನನ್ನು ಬಳಿಕ ಎಳೆದೊಯ್ದು ಕಾಫಿತೋಟದೊಳಕ್ಕೆ ಹಾಕಿ ಪರಾರಿಯಾಗಿದ್ದಾರೆ.

ವಿಷಯ ತಿಳಿದ ಮೃತನ ತಾಯಿ ವಾಣಿ ಎಂಬುವರು ನೀಡಿದ ದೂರಿನ ಮೇರೆಗೆ ಸ್ಥಳಕ್ಕೆ ಪೊನ್ನಂಪೇಟೆ ಎಸ್‌ಐ ರಾಮರೆಡ್ಡಿ, ಎಸ್ಪಿ ಮಂಜುನಾಥ್ ಅಣ್ಣಿಗೇರಿ, ಡಿವೈಎಸ್ಪಿ ಅಣ್ಣಪ್ಪನಾಯಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಶ್ವಾನದಳ ಆಗಮಿಸಿತ್ತಾದರೂ ಸಮರ್ಪಕ ಮಾಹಿತಿ ಲಭ್ಯವಾಗಿಲ್ಲ.

ಸುತ್ತಮುತ್ತಲಿನ ಜನರು ಯಾವುದೇ ರೀತಿಯ ಮಾಹಿತಿಯನ್ನು ನೀಡುವಲ್ಲಿ ಹಿಂಜರಿಯುತ್ತಿರುವುದರಿಂದ ಪೊಲೀಸರು ತನಿಖೆಗೆ ತೊಂದರೆಯಾಗಿದೆ ಎನ್ನಲಾಗಿದೆ. ಡಿವೈಎಸ್ಪಿ ಅಣ್ಣಪ್ಪನಾಯಕ್ ಆದೇಶದ ಮೇರೆಗೆ ಆರೋಪಿಯ ಪತ್ತೆಗಾಗಿ 4 ತನಿಖಾ ತಂಡಗಳನ್ನು ರಚಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+