ಭಾರತಕ್ಕೆ ಫ್ರಾನ್ಸ್ ಅಧ್ಯಕ್ಷ ಸರ್ಕೋಜಿ ಬೆಂಬಲ

France president Nicolas Sarkozy
ಬೆಂಗಳೂರು, ಡಿ. 4 : ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನ ಪಡೆಯುವ ಭಾರತದ ಯತ್ನಕ್ಕೆ ನಾಲ್ಕು ದಿನಗಳ ಭಾರತ ಪ್ರವಾಸದಲ್ಲಿರುವ ಫ್ರಾನ್ಸ್ ಅಧ್ಯಕ್ಷ ನಿಕೋಲಾಸ್ ಸರ್ಕೋಜಿ ಅವರ ಬೆಂಬಲ ದೊರೆತಿದೆ.

ಬೆಂಗಳೂರಿನ ಇಸ್ರೋದಲ್ಲಿ ವಿಜ್ಞಾನಿಗಳು, ಉದ್ಯಮದ ಮುಖಂಡರು ಮತ್ತು ವಿದ್ಯಾರ್ಥಿಗಳಿದ್ದ 500 ಜನರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ವಿಶ್ವಸಂಸ್ಥೆಯಲ್ಲಿ ಕಾಯಂ ಸ್ಥಾನ ಪಡೆಯಲು ಭಾರತ ಅರ್ಹವಾಗಿದೆ. ಭಾರತ ಸೇರಿದಂತೆ ಬ್ರಜಿಲ್, ಜರ್ಮನಿ, ಜಪಾನ್, ಆಫ್ರಿಕಾ ಮತ್ತು ಅರಬ್ ರಾಷ್ಟ್ರಗಳಿಗೆ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನ ಸಿಗಬೇಕು ಎಂದು ಆಶಿಸಿಸಿದರು.

ನೂರು ಕೋಟಿ ಜನಸಂಖ್ಯೆಯನ್ನು ಪ್ರತಿನಿಧಿಸುವ ಭಾರತದಂಥ ರಾಷ್ಟ್ರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಇರದಿರುವುದು ಊಹಿಸಲಸಾಧ್ಯವಾದ ಸಂಗತಿ ಎಂದು ಅವರು ಅಭಿಪ್ರಾಯಪಟ್ಟರು. ಭಾರತದಲ್ಲಿ ಅಣು ಕಾರ್ಯಕ್ರಮದ ಅಭಿವೃದ್ಧಿಗೆ ಫ್ರಾನ್ಸ್ ಎಲ್ಲ ಸಹಕಾರವನ್ನು ನೀಡಲಿದೆ ಎಂದು ಅವರು ನುಡಿದರು.

ನಾಲ್ಕು ದಿನಗಳ ಭಾರತ ಪ್ರವಾಸದ ಮೊದಲ ಭಾಗವಾಗಿ ಬೆಂಗಳೂರಿಗೆ ಬಂದಿರುವ ಸರ್ಕೋಜಿ ಅವರು, ನಾಗರಿಕ ಅಣು ಸಹಕಾರ ಮತ್ತು ಖಗೋಳ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಭಾರತದ ಜೊತೆ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ಮಾಲಿನ್ಯರಹಿತ ಇಂಧನ ಉತ್ಪಾದಿಸುವ ಭಾರತದ ಉದ್ದೇಶಕ್ಕೆ ಭಾರತದೊಂದಿಗೆ ಸ್ನೇಹದಿಂದಿರುವ ಫ್ರಾನ್ಸ್ ಸಂಪೂರ್ಣ ಸಹಕಾರ ನೀಡಲಿದೆ. ಅಣು ಶಕ್ತಿ ಉತ್ಪಾದಿಸುವ ಭಾರತದ ಹಕ್ಕಿಗೆ ಕೂಡ ಧಕ್ಕೆ ಉಂಟಾಗಿದೆ. ಇದಕ್ಕೆ ಕೊನೆ ಹಾಡಬೇಕು ಎಂದು ಅವರು ನುಡಿದರು.

ಮಹಾರಾಷ್ಟ್ರದ ಜೈತಪುರದಲ್ಲಿ ಫ್ರಾನ್ಸ್ ನ ಕಂಪನಿ ಅರೇವಾ 10 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಅಣು ಸ್ಥಾವರವನ್ನು ಸ್ಥಾಪಿಸುತ್ತಿರುವುದು ಸಂತಸದ ಸಂಗತಿ ಎಂದು ಸರ್ಕೋಜಿ ಹೇಳಿದರು. ಮಾಡೆಲ್ ಮತ್ತು ಸಂಗೀತಗಾರ್ತಿ ಆಗಿರುವ ಪತ್ನಿ ಕಾರ್ಲಾ ಬ್ರುನಿ ಮತ್ತು ಉನ್ನತ ಮಟ್ಟದ ನಿಯೋಗದೊಂದಿಗೆ ಅವರು ಭಾರತ ಪ್ರವಾಸ ಕೈಗೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+