ಸಿಎಂ ರಾಜೀನಾಮೆಗೆ ಜನಾರ್ದನ ರೆಡ್ಡಿ ಪಟ್ಟು?
ಬೆಂಗಳೂರು
ನ 26 :ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ರಾಜೀನಾಮೆಗಾಗಿ ಜನಾರ್ದನ ರೆಡ್ಡಿ ಪಟ್ಟು ಹಿಡಿದಿದ್ದಾರೆ. 'ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಯಡಿಯೂರಪ್ಪ ಅವರಿಗೆ ಜೀವದಾನ ನೀಡಿರಬಹುದು. ಆದರೆ ನಾನು ಅವರನ್ನು ಸುಮ್ಮನೆ ಬಿಡುವುದಿಲ್ಲ, ಅಧಿಕಾರದಿಂದ ಇಳಿಸುವವರೆಗೆ ನಾನು ವಿರಮಿಸುವುದಿಲ್ಲ' ಎಂದು ಪ್ರವಾಸೋದ್ಯಮ ಸಚಿವ ಜನಾರ್ಧನ ರೆಡ್ಡಿ ತಮ್ಮ ಸಹೋದ್ಯೋಗಿಗಳ ಹೇಳಿಕೊಂಡಿದ್ದಾರೆಂದು ಬಿಜೆಪಿ ಉನ್ನತ ಮೂಲಗಳು ಹೇಳಿವೆ. id="toptextpromo">ಗುರುವಾರ
(ನ. 25 ) ನಡೆದ ಸಂಪುಟ ಸಭೆಯಲ್ಲಿ ಯಡ್ಡಿ - ರೆಡ್ಡಿ ನಡುವೆ ಯಾವುದೇ ಮಾತುಕತೆ ನಡೆದಿಲ್ಲ. ಸಿಎಂ ಸಭೆ ಮುಗಿಸಿ ಹೊರ ನಡೆದ ಮೇಲೆ ರೆಡ್ಡಿ ಅಶೋಕ್, ಕಟ್ಟಾ ಸುಬ್ರಮಣ್ಯ ನಾಯ್ಡು ಮತ್ತು ಶೆಟ್ಟರ್ ಜೊತೆ ಅರ್ಧ ಗಂಟೆಗಳ ಮಾತುಕತೆ ನಡೆಸಿದರು. ಕೇಂದ್ರ ಕಾನೂನು ಇಲಾಖೆಯ ಸಲಹೆಗಾರ ಅಶೋಕ ಶರ್ಮಾ ಅವರೊಂದಿಗೆ ತಾವು ಸಮಾಲೋಚನೆ ನಡೆಸಿರುವ ಸಿ.ಡಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವುದರ ಹಿಂದೆ ಯಡಿಯೂರಪ್ಪ ಕೈವಾಡವಿದೆ. ಉದ್ದೇಶ ಪೂರ್ವಕವಾಗಿ ನನ್ನ ವಿರುದ್ಧ ಪಿತೂರಿ ನಡೆಸಿದ್ದಾರೆ. ಇದರ ಪರಿಣಾಮವನ್ನು ಮುಂದೆ ಎದುರಿಸಬೇಕಾಗುತ್ತದೆ" ಎಂದು ರೆಡ್ಡಿ ಸಹೋದ್ಯೋಗಿಗಳ ಬಳಿ ಹೇಳಿಕೊಂಡಿದ್ದಾರೆಂದು ತಿಳಿದು ಬಂದಿದೆ. id='are-slot-1' class='oiad oi-axt oiadv'> id='top-searched-articles'>ಮಠಾಧೀಶರು
ಯಡಿಯೂರಪ್ಪ ಪರವಾಗಿ ಬೀದಿಗಿಳಿದು ಹೋರಾಟ ಮಾಡಿದ್ದಕ್ಕೆ ಬುಧವಾರವಷ್ಟೇ ಅಸಮಾಧಾನ ವ್ಯಕ್ತಪಡಿಸಿದ್ದ ಪ್ರವಾಸೋದ್ಯಮ ಸಚಿವ ಬಿ.ಜನಾರ್ದನ ರೆಡ್ಡಿ, ಸಚಿವ ಬಿ.ಶ್ರೀರಾಮುಲು ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಬಳ್ಳಾರಿಯ ರೆಡ್ಡಿ ಸಹೋದರ ಸಚಿವರು ಬಿಗಿ ಪಟ್ಟು ಹಿಡಿಯುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮತ್ತೊಮ್ಮೆ ಇಕ್ಕಟ್ಟಿಗೆ ಸಿಲುಕಿಸಲು ಸಜ್ಜಾಗಿದ್ದಾರೆ.











Click it and Unblock the Notifications