ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂಹಗರಣ ಸರ್ಕಾರಿ ಆದೇಶಕ್ಕೆ ಲೋಕಾಯುಕ್ತರ ಆಕ್ಷೇಪ

By Mahesh
|
Google Oneindia Kannada News

Lokayukta objects to judicial inquiry on land scam
ಬೆಂಗಳೂರು, ನ. 23: ರಾಜ್ಯ ಸರ್ಕಾರ ಬಿಡಿಎ ಮತ್ತು ಕೆಐಎಡಿಬಿ ಭೂ ಹಗರಣಗಳ ಕುರಿತು ತನಿಖೆಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರನ್ನು ನೇಮಿಸಿರುವುದನ್ನು ಲೋಕಾಯುಕ್ತ ನ್ಯಾ. ಎನ್.ಸಂತೋಷ್ ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಲೋಕಾಯುಕ್ತ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೇ ಪ್ರಕರಣದ ಬಗ್ಗೆ ಎರಡೆರಡು ತನಿಖೆಗಳ ಅಗತ್ಯವಿಲ್ಲ. ಭೂ ಹಗರಣಗಳಿಗೆ ಸಂಬಂಧಿಸಿದಂತೆ ಈಗಾಗಲೇ ಲೋಕಾಯುಕ್ತ ಇಲಾಖೆ ತನಿಖೆ ಕೈಗೊಂಡಿದೆ. ಆದರೆ, ಇದೇ ಸಂದರ್ಭದಲ್ಲಿ ತಮಗೆ ಯಾವುದೇ ಮಾಹಿತಿ ನೀಡದೆ ಮತ್ತೊಂದು ತನಿಖೆ ಅಗತ್ಯವಿದೆಯೇ? ಎಂಬ ಕುರಿತು ಕಾನೂನು ಪರಾಮರ್ಶೆ ಅಗತ್ಯ ಎಂದರು.

ರಾಜ್ಯ ಸರಕಾರ ತನ್ನ ಅಭಿಪ್ರಾಯ ಕೇಳಿದ್ದರೆ ತಮ್ಮ ಬಳಿ ಇದ್ದ ಪ್ರಕರಣವನ್ನು ವರ್ಗಾವಣೆ ಮಾಡಬಹುದಿತ್ತು. ಇಲ್ಲವಾದರೆ ಲೋಕಾಯುಕ್ತ ಇಲಾಖೆಯಿಂದಲೇ ಸಮಗ್ರ ತನಿಖೆ ನಡೆಸಬಹುದಿತ್ತು ಎಂದ ಹೆಗ್ಡೆ, ಈ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆದು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

English summary
Lokayukta Justice N Santosh Hegde obejects to judicial inquiry on land scam in Karnataka. He expressed displeasure over govt decision to appoint former HC judge to probe alleged land scams.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X