ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಷ್ಯನ್ ಗೇಮ್ಸ್ : ಟೆನಿಸ್ ನಲ್ಲಿ ಸೋಮ್ ದೇವ್ ಗೆ ಚಿನ್ನ

By Mrutyunjaya Kalmat
|
Google Oneindia Kannada News

Somdev Devvarman wins gold in Asian Games
ಗುವಾಂಗ್ ಜೊ, ನ. 23 : ಭಾರತ ಟೆನಿಸ್ ಆಟಗಾರ ಸೋಮ್ ದೇವ್ ದೇವರ್ಮನ್ ಏಷ್ಯನ್ ಕ್ರೀಡಾಕೂಟದಲ್ಲಿ ಇತಿಹಾಸ ನಿರ್ಮಿಸಿದ್ದು, ಪ್ರಥಮ ಬಾರಿಗೆ ಪುರುಷರ ಸಿಂಗಲ್ಸ್ ಟೆನಿಸ್ ನಲ್ಲಿ ಚಿನ್ನ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಗೌರವ ತಂದಿದ್ದಾರೆ.

ಸೋಮ್ ದೇವ್ ದೇವರ್ಮನ್ ಅವರು 44ನೇ ಕ್ರಮಾಂಕದ ಡೆನಿಸ್ ಇಸ್ತೋಮಿನ್ ಅವರನ್ನು ಸೋಲಿಸುವ ಮೂಲಕ ಚಿನ್ನದ ಪದಕ ಗಳಿಸಿದ್ದಾರೆ. ಸೋಮವಾರವಷ್ಟೆ ಸೋಮ್ ದೇವ್ ದೇವರ್ಮನ್ ಹಾಗೂ ಸನಮ್ ಸಿಂಗ್ ಅವರ ಪುರುಷ ಡಬಲ್ಸ್ ನಲ್ಲಿ ಚಿನ್ನದ ಪದಕ ಗಳಿಸಿದ್ದರು. ಸೋಮ್ ದೇವ್ ಗೆ ಎರಡನೇ ಚಿನ್ನದ ಪದಕ ಇದಾಗಿದ್ದು, ಇದರೊಂದಿಗೆ ಭಾರತದ ಚಿನ್ನದ ಪದಕದ ಸಂಖ್ಯೆ ಏಳಕ್ಕೆ ಏರಿದಂತಾಗಿದೆ.

ಏಷ್ಯನ್ ಕ್ರೀಡಾಕೂಟದ ಪುರುಷರ ಸಿಂಗಲ್ಸ್ ನಲ್ಲಿ ಲಿಯಾಂಡರ್ ಪೇಸ್, ಮಹೇಶ್ ಭೂಪತಿ ಹಾಗೂ ಪ್ರಹ್ಲಾದ್ ಶ್ರೀನಾಥ್ ಅವರು ಕಂಚು ಪದಕ ಗಳಿಸಿದ್ದು ಈವರೆಗಿನ ಸಾಧನೆಯಾಗಿತ್ತು. ಸೋಮದೇವ ದೇವರ್ಮನ್ ಮತ್ತು ಸನಮ್ ಸಿಂಗ್ ಸೋಮವಾರ ನಡೆದ ಏಷ್ಟನ್ ಗೇಮ್ಸ್ ಟೆನಿಸ್‌ ನ ಪುರುಷರ ಡಬಲ್ಸ್‌ನ ಫೈನಲ್‌ ನಲ್ಲಿ ಚೀನಾದ ಗೊಂಗ್ ಎಂ ಮತ್ತು ಲೀ ಝಡ್‌ ಅವರನ್ನು ಸೋಲಿಸಿ ಭರ್ಜರಿಯ ಜಯಗಳಿಸಿದ್ದರು.

English summary
Indian tennis player Somdev Devvarman creates history in 16th Asian Games 2010 by winning gold in tennis singles event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X