ಮುಂದಿನ ಮುಖ್ಯಮಂತ್ರಿ ಯಾರು?

ಪಟ್ಟ ಉಳಿಸಿಕೊಳ್ಳಲು ಪುಟ್ಟಪರ್ತಿ ಸಾಯಿಬಾಬಾನ ಮೊರೆ ಹೋಗಿರುವ ಮುಖ್ಯಮಂತ್ರಿ ಹೋಮ ಹವನ ನಡೆಸಿದ್ದು, ದೆಹಲಿಯತ್ತ ಪ್ರಯಾಣ ಬೆಳಸಲಿದ್ದಾರೆ ಎಂದು ಹೇಳಲಾಗಿದೆ. ಜೊತೆಗೆ ವೈಷ್ಣವಿ ಮಂದಿರಕ್ಕೂ ಭೇಟಿ ನೀಡಿ ಪದವಿ ಉಳಿಸುವಂತೆ ಪೂಜೆ ಪುನಸ್ಕಾರ ನಡೆಸಲಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಆಗಲಿದೆ ಎಂಬ ಉಹಾಪೋಹ ಎದ್ದಿರುವ ಮಧ್ಯೆದಲ್ಲಿಯೇ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ವಿ ಎಸ್ ಆಚಾರ್ಯ ಸ್ಪಷ್ಟಪಡಿಸಿದ್ದಾರೆ.
ಇಂದು 11 ಗಂಟೆಯೊಳಗೆ ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆಗೆ ಡೆಡ್ ಲೈನ್ ವಿಧಿಸಲಾಗಿದೆ ಎಂಬ ಮಾತು ಇದೆ. ಸಂಸತ್ತಿನ ಅಧಿವೇಶನ 11 ಗಂಟೆಗೆ ಆರಂಭವಾಗಲಿದೆ. ಇದರೊಳಗೆ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಸೂಚನೆ ನೀಡಿದ್ದಾರೆ. ಆದರೆ, ಯಡಿಯೂರಪ್ಪ ಅವರ ಸೂಚನೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.
ಮುಖ್ಯಮಂತ್ರಿ ರೇಸ್ ನಲ್ಲಿ ಮೂರು ಮಂದಿ
ಅನಂತಕುಮಾರ್ : ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಟ್ಟಕ್ಕೆ ಏರಿರುವ ಅನಂತಕುಮಾರ್ ಗೆ ಪಕ್ಷದಲ್ಲಿ ಒಲವಿದೆ. ಪ್ರಸಕ್ತ ಸನ್ನಿವೇಶದಲ್ಲಿ ಪ್ರತಿಪಕ್ಷಗಳನ್ನು ಎದುರಿಸುವ ಶಕ್ತಿ ಇದೆ ಎನ್ನುವ ನಂಬಿಕೆ ವರಿಷ್ಠರದ್ದು.
ಜಗದೀಶ್ ಶೆಟ್ಟರ್ : ಮೃದು ಸ್ವಭಾವದ ಶೆಟ್ಟರ್ ಅವರ ಬಗ್ಗೆ ಹೆಚ್ಚಿನ ಶಾಸಕರಿಗೆ ಒಲವಿದೆ. ಯಡಿಯೂರಪ್ಪ ಅವರ ಲಿಂಗಾಯಿತ ಸಮುದಾಯದ ನಾಯಕತ್ವವನ್ನು ಶೆಟ್ಟರ್ ತಕ್ಕ ಮಟ್ಟಿಗೆ ತುಂಬಬಲ್ಲರು.
ಸುರೇಶ್ ಕುಮಾರ್ : ಸರಳ, ಬುದ್ಧಿವಂತ ಸಚಿವ ಎಂಬ ಹೆಸರು ಪಡೆದ ಸುರೇಶ್ ಕುಮಾರ್ ಅವರದ್ದು ಕ್ಲೀನ್ ಇಮೇಜು. ನಿಷ್ಠುರವಾದಿ ಎಂಬ ಹಣೆ ಪಟ್ಟಿಯಿಂದಾಗಿ ಶಾಸಕರು ಅವರನ್ನು ಸಿಎಂ ಆಗಿ ಒಪ್ಪುವುದು ಕಷ್ಟ.
ಅಥವಾ ಶೋಭಾ ಕರಂದ್ಲಾಜೆ?












Click it and Unblock the Notifications