ಶೋಭಾ ಸಿಎಂ ಆಗಲಿ ಯಡಿಯೂರಪ್ಪ?
ಬೆಂಗಳೂರು,
ನ. 22 : ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವೆ ಆದರೆ, ನನ್ನ ಕೆಲ ಷರತ್ತುಗಳಿಗೆ ಒಪ್ಪಿಕೊಂಡರೆ ಮಾತ್ರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಯಡಿಯೂರಪ್ಪ ಹೈಕಮಾಂಡ್ ಗೆ ತಿರುಗೇಟು ನೀಡಿದ್ದಾರೆ. ಒಂದು ವೇಳೆ ಯಡಿಯೂರಪ್ಪ ಅವರಿಗೆ ಮುಂದಿನ ಸಿಎಂ ಆಯ್ಕೆ ಹೊಣೆ ಹೊರಿಸಿದರೆ ಶೋಭಾ ಕರಂದ್ಲಾಜೆಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಎಂದು ಸೂಚನೆ ನೀಡಬಹುದು. id="toptextpromo">ಪುಟ್ಟಪರ್ತಿ
ಸಾಯಿಬಾಬಾನ ದರ್ಶನ ಪಡೆದು ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಂಜೆ ವೇಳೆಗೆ ದೆಹಲಿಗೆ ತೆರಳಿ, ಪಕ್ಷದ ಮುಖಂಡರನ್ನು ಭೇಟಿ ಮಾಡಿ ಚರ್ಚಿಸುವುದಾಗಿ ಹೇಳಿದ್ದಾರೆ. ಆದರೆ, ರಾಜೀನಾಮೆ ನೀಡಲು ಸುತಾರಾಂ ಒಪ್ಪದ ಸಿಎಂ, ಒಂದು ವೇಳೆ ರಾಜೀನಾಮೆ ನೀಡುವ ಪ್ರಸಂಗ ಬಂದರೆ ಹೈಕಮಾಂಡ್ ಮುಂದೆ ಕೆಲ ಷರತ್ತುಗಳನ್ನು ಇಟ್ಟಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಬಿಜೆಪಿಯೊಳಗೆ
ಭಿನ್ನಮತ ಆರಂಭವಾಗಲು ರೆಡ್ಡಿ ಸಹೋದರರು ಕಾರಣರಾಗಿದ್ದು, ಬಳ್ಳಾರಿ ಮೂವರು ಸಹೋದರರು ಹಾಗೂ ಜಗದೀಶ್ ಶೆಟ್ಟರ್ ಅವರನ್ನು ಸಂಪುಟದಿಂದ ಕೈಬಿಡಬೇಕು ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಅವರನ್ನು ಸರಕಾರದಿಂದ ದೂರಿ ಇಡಬೇಕು ಎನ್ನುವುದು ಮೊದಲಿನ ಷರತ್ತಾದರೆ, ಮುಂದಿನ ಮುಖ್ಯಮಂತ್ರಿಯನ್ನು ಸೂಚಿಸುವ ಹೊಣೆಯನ್ನು ಹೈಕಮಾಂಡ್ ಯಡಿಯೂರಪ್ಪ ಅವರಿಗೆ ಬಿಟ್ಟಿದ್ದರಿಂದ ಶೋಭಾ ಕರಂದ್ಲಾಜೆ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಸೂಚಿಸಿದರೆ ಅಚ್ಚರಿಯಿಲ್ಲ.











Click it and Unblock the Notifications