ಅದಿರು ರಫ್ತು : ಸರಕಾರಿ ಆದೇಶ ಎತ್ತಿ ಹಿಡಿದ ಕೋರ್ಟ್

ರಾಜ್ಯ ಸರಕಾರದ ಕಬ್ಬಿಣ ಅದಿರು ರಫ್ತು ನಿಷೇಧ ಆದೇಶವನ್ನು ಪ್ರಶ್ನಿಸಿ, ವಿಎಸ್ ಲಾಡ್, ಸೆಸಾ ಗೋವಾ ಮತ್ತು ಕುಮಾರಸ್ವಾಮಿ ಮಿನರಲ್ಸ್ ಕಂಪನಿಗಳು ಸೇರಿದಂತೆ 32 ಗಣಿ ಕಂಪೆನಿಗಳು ಸಲ್ಲಿಸಿದ್ದ ತಕರಾರು ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಜೆಎಸ್ ಖೇಹರ್ ಹಾಗೂ ನ್ಯಾ ಎಸ್ ಅಬ್ದುಲ್ ನಜೀರ್ ಅಹ್ಮದ್ ಅವರಿದ್ದ ವಿಭಾಗೀಯ ಪೀಠ, ಕಬ್ಬಿಣ ಅದಿರು ರಫ್ತು ನಿಷೇಧ ಸರಿಯಾಗಿದೆ ಎಂದು ತೀರ್ಪು ಹೊರಡಿಸಿ ಅರ್ಜಿಯನ್ನು ವಜಾ ಮಾಡಿದೆ.
6 ತಿಂಗಳೊಳಗೆ ಅಕ್ರಮ ಗಣಿಗಾರಿಕೆ ಮತ್ತು ಅಕ್ರಮ ಅದಿರು ಸಾಗಣೆಯನ್ನು ನಿಷೇಧಿಸಲು ಸರಕಾರ ವಿಫಲವಾದಲ್ಲಿ, ಸರಕಾರ ಹೊರಡಿಸಿರುವ ಅದಿರು ರಫ್ತು ನಿಷೇಧ ಆದೇಶವನ್ನು ಪರಿಶೀಲಿಸಬೇಕಾಗುತ್ತದೆ ಎಂದು ಹೈಕೋರ್ಟ್ ತಿಳಿಸಿದೆ.
ಹೈಕೋರ್ಟ್ ಶುಕ್ರವಾರ ನೀಡಿದ ತೀರ್ಪು, ಸರಕಾರದ ನಿರ್ಧಾರಕ್ಕೆ ಸಂದ ಜಯವಾಗಿದ್ದು, ದೇಶದಲ್ಲಿಯೇ ಇದೊಂದು ಮಹತ್ವದ ತೀರ್ಪಾಗಿದೆ. ಅದಿರು ರಫ್ತು ನಿಷೇಧಿಸಿ ರಾಜ್ಯ ಸರಕಾರ ಕಳೆದ ಜುಲೈ 26 ಹಾಗೂ 28ಕ್ಕೆ ಆದೇಶ ಹೊರಡಿಸಿತ್ತು.











Click it and Unblock the Notifications