ಶೋಭಕ್ಕನ ಹೆಸರಲ್ಲಿ 166 ಎಕರೆ ಕಾಫಿ ತೋಟ?
ಬೆಂಗಳೂರು,
ನ. 19 : ಸಾಲದ ಹೊರೆ ಹೊತ್ತಿರುವುದಾಗಿ ಹೇಳುವ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಕೊಡಗಿನಲ್ಲಿ ಕೋಟ್ಯಂತರ ರೂ. ಮೌಲ್ಯದ ನೂರಾರು ಎಕರೆ ಕಾಫಿ ತೋಟ ಖರೀದಿಸಿರುವುದು ಬೆಳಕಿಗೆ ಬಂದಿದೆ. id="toptextpromo">ಶೋಭಾ
ವ್ಯವಸ್ಥಾಪಕ ನಿರ್ದೇಶಕರಾಗಿರುವ ಕಪಿಲ ಮಂಜೂಶ್ರೀ ಅಪರೆಲ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ಜಾಗದ ಖಾತೆ ಮಾಡಲಾಗಿದೆ. ಮಡಿಕೇರಿ ತಾಲೂಕಿನ ಭಾಗಮಂಡಲ ಹೋಬಳಿ ವ್ಯಾಪ್ತಿಯ ತಣ್ಣಿಮಾನಿ ಗ್ರಾಮದಲ್ಲಿ 166.40 ಎಕರೆ ಕಾಫಿ ತೋಟ ಖರೀದಿಸಿದ್ದಾರೆ. 2007ರಲ್ಲಿ ಕಪಿಲ ಮಂಜೂಶ್ರೀ ಅಪರೆಲ್ ಪ್ರೈವೇಟ್ ಲಿಮಿಟೆಡ್ ಅನ್ನು ಸಿದ್ಧ ಉಡುಪು ಕಾರ್ಖಾನೆ ನಿರ್ಮಾಣಕ್ಕೆ ಸ್ಥಾಪಿಸಲಾಗಿದೆ. id='are-slot-1' class='oiad oi-axt oiadv'> id='top-searched-articles'>ಈ
ಸಂಸ್ಥೆ ಸ್ಥಾಪನೆಗೆ ಬೆಂಗಳೂರಿನ ಎಚ್‌ಎಸ್ ಆರ್ ಬಡಾವಣೆಯ ನಿವೇಶನ (ಎಂಎಲ್ಸಿ ಆಗಿದ್ದಾಗ ಸಿಕ್ಕ ನಿವೇಶನ) ಆಧಾರ ಇಟ್ಟು ಫೆಡರಲ್ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಸಾಲ ಪಡೆದಿದ್ದೇನೆ ಎಂದು ಸಚಿವೆ ಹೇಳಿದ್ದರು. ಇದೇ ಸಂಸ್ಥೆ ಹೆಸರಿನಲ್ಲಿ 2008ರಲ್ಲಿ ಕೊಡಗಿನಲ್ಲಿ 166.40 ಎಕರೆ ಜಾಗ ಖರೀದಿಸಿದ್ದಾರೆಂದು ವಿಜಯ ಕರ್ನಾಟಕ ವರದಿ ಹೇಳುತ್ತದೆ.











Click it and Unblock the Notifications