ಇಂಥ ಭ್ರಷ್ಟ ಸರಕಾರ ನಾನೆಂದೂ ಕಂಡಿಲ್ಲ, ನ್ಯಾ. ಹೆಗ್ಡೆ
ಸುಳ್ಯ,
ನ. 19 : ಹಗರಣಗಳು ಹನುಮಂತನ ಬಾಲದಂತೆ ಸಾಗುತ್ತಲೇ ಇದೆ. ಭವಿಷ್ಯದ ಬಗ್ಗೆ ಕನಸು ಕಂಡಾಗ ಪ್ರತಿ ಹೆಜ್ಜೆ ಹೆಜ್ಜೆಗೂ ಭ್ರಷ್ಟಾಚಾರ ಮತ್ತು ಅನ್ಯಾಯದ ದರ್ಶನವಾಗುತ್ತಿದೆ. ಇಷ್ಟೊಂದು ಅನ್ಯಾಯ, ಅನೈತಿಕ ಮತ್ತು ಭ್ರಷ್ಟ ಸರಕಾರವನ್ನು ನಾನೆಂದೂ ಕಂಡಿಲ್ಲ ಎಂದು ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ವಿಷಾದವ್ಯಕ್ತಪಡಿಸಿದ್ದಾರೆ. id="toptextpromo">ಇಲ್ಲಿಯ
ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಾತನಾಡುತ್ತಿದ್ದ ಹೆಗ್ಡೆ, ಭ್ರಷ್ಟಾಚಾರದ ಬಲೆಗೆ ಎಂದೂ ಬೀಳಬೇಡಿ. ಭ್ರಷ್ಟ ಅಧಿಕಾರಿ, ಜನಪ್ರತಿನಿಧಿಗಳನ್ನು ಬಹಿಷ್ಕರಿಸಿ, ಸಮಾಜ ಸಮುದಾಯದ ಕಾರ್ಯಕ್ರಮದಿಂದಲೂ ಅವರನ್ನು ದೂರವಿಡಿ ಎಂದು ಭ್ರಷ್ಟಾಚಾರ ವಿರೋಧಿ ಅರಿವು-ಆಂದೋಲನ ವಿದ್ಯಾರ್ಥಿ ಮತ್ತು ಸಾರ್ವಜನಿಕ ಸಂವಾದಲ್ಲಿ ಮಾತನಾಡುತ್ತಾ ಕರೆ ನೀಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಚುನಾವಣೆಯಲ್ಲಿ
ಗೆದ್ದು ಬರುವ ರಾಜಕಾರಿಣಿಗಳಿಗೆ ಆ ಹಣ ದೊಡ್ಡ ಇನ್ವೆಸ್ಟ್ ಮೆಂಟ್ ಇದ್ದ ಹಾಗೆ. ಗೆದ್ದ ನಂತರ ಅದಕ್ಕೆ ಡಿವಿಡೆಂಡ್ ಮಾತ್ರವಲ್ಲ ಚಕ್ರಬಡ್ಡಿಯನ್ನೂ ಪಡೆಯುತ್ತಾರೆ. ಇಂಥವರನ್ನು ಆರಿಸುವಾಗ ಗಮನಿಸಿ ಮತ ನೀಡಿ ಎಂದು ನ್ಯಾ. ಹೆಗ್ಡೆ ಹೇಳಿಕೆ ನೀಡಿದ್ದಾರೆ.











Click it and Unblock the Notifications