ಕಾರ್ನಾಡ್ ಆತ್ಮಕತೆ ಓದುತ್ತಾರೆ ಕೇಳೋಣ ಬನ್ನಿ

ಎಲ್ಲೋ ಸಂಚಯ, ಕೇಳೋ ರಸಿಕಾ, ಛಂದಾ ಪ್ರಕಾಶನದವರು ಆಗೊಮ್ಮೆ ಈಗೊಮ್ಮೆ ಸಾಹಿತಿ ಜೊತೆ ಆಪ್ತ ಸಂವಾದ ನಡೆದಿದ್ದುಂಟು. ಈಗ ಇದರ ಮುಂದುವರಿಕೆ ಭಾಗವೆಂಬಂತೆ ಸುಚಿತ್ರಾ, ಸಂಚಯ ತಂಡದವರು ಜ್ಞಾನ ಪೀಠ ಪ್ರಶಸ್ತಿ ವಿಜೇತ ಸಾಹಿತಿ, ನಾಟಕಕಾರ ಗಿರೀಶ್ ಕಾರ್ನಾಡ್ ಅವರ ಆತ್ಮಕಥೆ ಓದುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕ್ರಿಯೇಟಿಂಗ್ ಕಮ್ಯೂನಿಕೇಷನ್ ನ ಸುಚಿತ್ರ ಸೃಷ್ಟಿ ಸಮುದಾಯ ಸಂಡೇ ಸರಣಿಯಲ್ಲಿ ಈ ಬುಕ್ ರೀಡಿಂಗ್ ಸೆಷನ್ "ಆಡಾಡತ ಆಯುಷ್ಯ" ಕಾರ್ಯಕ್ರಮ ಆಯೋಜನೆಯಾಗಿದೆ. ಗಿರೀಶ್ ಅವರ ಆತ್ಮಕತೆಯ "ಸಂಸ್ಕಾರ" ಎಂಬ ಅಧ್ಯಾಯವನ್ನು ಸ್ವತಃ ಗಿರೀಶ್ ಅವರೇ ಆಯ್ದ ಸಭಿಕರ ಎದುರು ಓದಲಿದ್ದಾರೆ.
ಸ್ಥಳ, ಸಮಯ ಹಾಗೂ ಪಾಸು ಪಡೆಯುವ ವಿವರಗಳಲ್ಲಿ ಗುರುತಿಟ್ಟುಕೊಳ್ಳಿ:
ಸ್ಥಳ: ಸುಚಿತ್ರಾ ಆಡಿಟೋರಿಯಂ, ಬನಶಂಕರಿ ಎರಡನೇ ಹಂತ, ಬೆಂಗಳೂರು
ದಿನಾಂಕ/ ಸಮಯ: ನ.21, ಬೆಳಗ್ಗೆ 11 ಗಂಟೆ
ಮುಂಗಡ ಬುಕ್ಕಿಂಗ್ ಪಾಸ್:
ಡೋನರ್ ಪಾಸ್ / ಲಘು ಉಪಹಾರ: 100 ರು.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: (080) 2671 1785












Click it and Unblock the Notifications