ಕೇಕ್ ನೀಡಿ ಪ್ರಜ್ಞೆ ತಪ್ಪಿಸಿ ನಗ-ನಗದು ಲೂಟಿ
ಪುತ್ತೂರು,
ನ.17: ವಿವಾಹ ನಿಶ್ಚಿತಾರ್ಥವಾಗಿದ್ದ ಯುವತಿಗೆ ವಿಷ ಮಿಶ್ರಿತ ಕೇಕ್ ನೀಡಿ ಪ್ರಜ್ಞೆ ತಪ್ಪಿಸಿ, ಮದುವೆಗೆಂದು ಕೂಡಿಟ್ಟಿದ್ದ ಚಿನ್ನಾಭರಣ ಹಾಗೂ ನಗದು ದೋಚಿದ ಸಂಬಂಧಿಕನೊಬ್ಬ ಪರಾರಿಯಾದ ಘಟನೆ ಬೆಳ್ತಂಗಡಿ ತಾಲೂಕಿನ ಕಳಂಜದಲ್ಲಿ ನಡೆದಿದೆ. ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. id="toptextpromo">ಕಳಂಜಗ್ರಾಮ
ಮಾವಿನಡಿ ಮನೆ ನಿವಾಸಿ ಲಿಂಗಪ್ಪ ಗೌಡರ ಪುತ್ರಿ ಹೇಮಾವತಿ(23) ಎಂಬ ಯುವತಿಯೇ ಮೋಸಕ್ಕೀಡಾದವರು. ಆಕೆ ಮನೆಯಲ್ಲಿ ಒಂಟಿಯಾಗಿರುವ ಸಮಯ ನೋಡಿದ ಆರೋಪಿ ಬೆಳ್ತಂಗಡಿ ತಾಲೂಕಿನ ಕೊಯ್ಯೂರು ನಿವಾಸಿ ಶಶಿ ಕುಮಾರ್ ಮಹಿಳೆಗೆ ಪ್ರಜ್ಞೆ ತಪ್ಪಿಸುವ ಕೇಕ್ ನೀಡಿ ಮನೆಯಲ್ಲಿದ್ದ ಹತ್ತು ಪವನ್ ಚಿನ್ನ ಹಾಗೂ ಒಂದು ಲಕ್ಷ ನಗದನ್ನು ಹಾಡು-ಹಗಲೇ ದೋಚಿ ಪರಾರಿಯಾಗಿದ್ದಾನೆ. id='are-slot-1' class='oiad oi-axt oiadv'> id='top-searched-articles'>ವಿಷಯುಕ್ತ
ಕೇಕ್ ತಿಂದ ಹೇಮಾವತಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದಾಗಲೇ ಆಕೆಯ ಮೈಮೇಲಿದ್ದ ಒಡವೆಗಳನ್ನು ಕಳಚಿದ್ದಾಳೆ. ಶಶಿ ಮಾಡುತ್ತಿರುವ ದುಷ್ಕೃತ್ಯದ ಅರಿವು ಉಂಟಾದರೂ ಏನೂ ಮಾಡಲಾಗದ ಸ್ಥಿತಿಯಲ್ಲಿದ್ದ ಹೇಮಾ, ನಂತರ ವಾಂತಿ ಮಾಡಿಕೊಂಡು ಬೊಬ್ಬೆ ಹಾಕತೊಡಗಿದಾಗ, ನೆರೆಮನೆಯವರು ಬಂದು ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಉಪ್ಪಿನಂಗಡಿ ಪೊಲೀಸರು ಈ ಕಳವು ಪ್ರಕರಣದ ತನಿಖೆಯನ್ನು ಮಾಡುತ್ತಿದ್ದಾರೆ.











Click it and Unblock the Notifications