ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಲಂ ಮುಕ್ತ ಕರ್ನಾಟಕ ಸಚಿವ ಕಟ್ಟಾ ಕನಸು

By Mahesh
|
Google Oneindia Kannada News

Minister Katta Subramanya Naidu
ಬೆಂಗಳೂರು, ನ. 15: ರಾಜ್ಯದ 40 ನಗರಗಳನ್ನು ಮುಂದಿನ ಐದು ವರ್ಷಗಳೊಳಗೆ ಕೊಳೆಗೇರಿ ಮುಕ್ತ ನಗರಗಳನ್ನಾಗಿ ರೂಪಿಸಲು ಸರಕಾರ ನಿರ್ಧರಿಸಿದೆ. ಕೇಂದ್ರ ಹಾಗೂ ರಾಜ್ಯದ ಸಹಭಾಗಿತ್ವದಲ್ಲಿ 2000 ಕೋಟಿ ರೂ. ವೆಚ್ಚದೊಂದಿಗೆ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು. ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ ತಲಾ ಒಂದೊಂದು ಸಾವಿರ ಕೋಟಿ ರೂ. ಈ ಯೋಜನೆಗೆ ವಿನಿಯೋಗಿಸಲಿದೆ ಎಂದು ವಸತಿ ಹಾಗೂ ಐಟಿ ಬಿಟಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ಯೋಜನೆಯಡಿ ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ಎಲ್ಲ ಮಹಾನಗರಗಳನ್ನು ಸೇರಿಸಿಕೊಳ್ಳಲಾಗಿದೆ. ಜೊತೆಗೆ ಪ್ರತಿ ಜಿಲ್ಲೆಯ ಒಂದು ಅಥವಾ ಎರಡು ನಗರಗಳನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂದ ಕಟ್ಟಾ, ಕೇಂದ್ರದಿಂದ ಹಸಿರು ನಿಶಾನೆ ದೊರೆತ ಕೂಡಲೇ ಯೋಜನೆಗೆ ಚಾಲನೆ ನೀಡಲಾಗುವುದು ಎಂದರು.

ಸ್ಲಂ ನಿವಾಸಿಗಳಿಗೆ ಹಕ್ಕು ಪತ್ರ: ಬೆಂಗಳೂರಿನ 597 ಸ್ಲಂಗಳನ್ನು ಹೊರತುಪಡಿಸಿದಂತೆ ರಾಜ್ಯದಲ್ಲಿರುವ 2,722 ಕೊಳೆಗೇರಿಗಳಿವೆ. ಈ ಪೈಕಿ 2,251ನ್ನು ಕೊಳೆಗೇರಿ ಪ್ರದೇಶಗಳೆಂದು ಅಧಿಕೃತವಾಗಿ ಘೋಷಿಸಲಾಗಿದೆ. ಇಲ್ಲಿ 5.96 ಲಕ್ಷ ಕುಟುಂಬಗಳ 20 ಲಕ್ಷ ಜನ ವಾಸಿಸುತ್ತಿದ್ದಾರೆ. ಮುಂದಿನ ಎರಡು ತಿಂಗಳಲ್ಲಿ ಇಲ್ಲಿನ ನಿವಾಸಿಗಳಿಗೆ ಹಕ್ಕು ಪತ್ರ ನೀಡಲಾಗುವುದು ಎಂದರು.

ನೆರೆ ಪೀಡಿತ ಪ್ರದೇಶಗಳ ಸಂತ್ರಸ್ತರಿಗೆ ಸೂರು ಒದಗಿಸುವ ಆಸರೆ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ. ಇತ್ತೀಚೆಗೆ ಸುರಿದ ಮಳೆಯಿಂದ ಸ್ವಲ್ಪ ವಿಳಂಭವಾಗಿದೆ. ಈಗಾಗಲೇ ನಿರ್ಮಿಸಲು ಉದ್ದೇಶಿಸಲಾಗಿರುವ 56,727 ಮನೆಗಳ ಪೈಕಿ 44,139 ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ವಿವರ ನೀಡಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X