ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ನಿ ಹತ್ಯೆಗೆ ಜೀವಾವಧಿ ಅಲ್ಲ ಗಲ್ಲು ಶಿಕ್ಷೆ ಉಚಿತ!

By Mrutyunjaya Kalmat
|
Google Oneindia Kannada News

Supreme Court
ನವದೆಹಲಿ, ನ. 13 : ತನ್ನ ಹೆಂಡತಿಯನ್ನು ಭೀಕರವಾಗಿ ಕೊಂದಿದ್ದಕ್ಕೆ ನೀಡಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಇಂತಹ ಹೀನ ಕೃತ್ಯ ನಡೆಸಿದ್ದಕ್ಕೆ ಜೀವಾವಧಿ ಬದಲು ಮರಣದಂಡನೆ ಏಕೆ ವಿಧಿಸಬಾರದೆಂದು ಪ್ರಶ್ನಿಸಿದೆ.

ನ್ಯಾಯಮೂರ್ತಿಗಳಾದ ಮಾರ್ಕಂಡೇಯ ಕಟ್ಜು ಮತ್ತು ಜ್ಞಾನಸುಧಾ ಮಿಶ್ರ ಅವರಿದ್ದ ಪೀಠವು ಅರ್ಜಿಯ ವಿಚಾರಣೆ ನಡೆಸಿದ್ದು, ಇಂತಹ ಘಟನೆಗಳು ಸಾಮಾಜಿಕ ಅಪರಾಧಗಳಾಗಿದ್ದು, ಇವು ಸಮಾಜದ ಸ್ವಾಸ್ಥವನ್ನೇ ಹಾಳುಮಾಡುತ್ತವೆ. ಇಂತಹ ಕೃತ್ಯಗಳಿಗೆ ಗರಿಷ್ಠ ಪ್ರಮಾಣದ ಶಿಕ್ಷೆಯನ್ನು ವಿಧಿಸಬೇಕಿದೆ. ಆದರೂ ಈ ಪ್ರಕರಣದಲ್ಲಿ ಆರೋಪಿಯು ತನ್ನ ವಾದವನ್ನು ಮಂಡಿಸುವ ಸ್ವಾತಂತ್ರವನ್ನು ಹೊಂದಿದ್ದಾನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದು ಅಪರೂಪದಲ್ಲಿ ಅಪರೂಪದ ಪ್ರಕರಣವಾಗಿರುವುದರಿಂದ ನಮ್ಮ ದೃಷ್ಟಿಯಲ್ಲಿ ಇಂತಹ ಕೃತ್ಯವೆಸಗಿರುವ ಈತನಿಗೆ ಗರಿಷ್ಠ ಪ್ರಮಾಣದ ಗಲ್ಲು ಶಿಕ್ಷೆಯನ್ನು ವಿಧಿಸಬೇಕಿದೆ ಎಂದು ನ್ಯಾಯಾಲಯ ಹೇಳಿದೆ. ಪಂಜಾಬ್ ಮೂಲದ ಸುಖದೇವ್ ಸಿಂಗ್ ತನ್ನ ಹೆಂಡತಿ ದಲ್ಜಿತ್ ಕೌರ್ ಳನ್ನು ಅಮಾನುಷವಾಗಿ ಹತ್ಯೆಗೈದು ನಂತರ ಸುಟ್ಟು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಯಾಣ ಹೈಕೋರ್ಟ್ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು.

English summary
A fortnight ago, the Supreme Court had termed Indian society as sick for the prevalence of bride burning incidents and advocated death penalty for the accused.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X