ಮೈಸೂರು : ಮತಾಂತರಕ್ಕೆ ಯತ್ನ, ಕರವೇ ದಾಳಿ
ಮೈಸೂರು,
ನ. 13 : ನಗರದ ಹೊರವಲಯದ ಹೂಟಗಳ್ಳಿ ಕೆ ಎಚ್ ಬಿ ಕಾಲೋನಿ ದುರ್ಗೇಶ್ವರಿ ಕಲ್ಯಾಣ ಮಂಟಪದಲ್ಲಿ ಎರಡು ತಿಂಗಳಿನಿಂದ ಸುಮಾರು 40 ಯುವತಿಯರು ಮತ್ತು 20 ಯುವಕರಿಗೆ ಕ್ರೈಸ್ತ ಧರ್ಮಕ್ಕೆ ಮತಾಂತರಕ್ಕೆ ಸಂಬಂಧಿಸಿ ತರಬೇತಿ ನೀಡಲಾಗುತ್ತಿದೆ ಎನ್ನುವ ಮಾಹಿತಿ ಪಡೆದ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಕಾರ್ಯಕರ್ತರು ಮತಾಂತರದ ವಿರುದ್ದ ಪ್ರತಿಭಟನೆ ನಡೆಸಿ ಕೆಲವರಿಗೆ ದಿಗ್ಬಂದನೆ ವಿಧಿಸಿದ್ದಾರೆ. id="toptextpromo">ಮಂಡ್ಯ,
ಕೆ ಆರ್ ಪೇಟೆ, ಚಿಕ್ಕಮಗಳೂರು, ಮೈಸೂರು ಮುಂತಾದ ಕಡೆಯಿಂದ ಆಗಮಿಸಿದ್ದ ಯುವಕ ಯುವತಿಯರನ್ನು ಮತಾಂತರಿಸಲಾಗುತ್ತಿತ್ತು. ಇದಕ್ಕಾಗಿ ಇಲ್ಲಿ ಅವರಿಗೆ ಕ್ರೈಸ್ತ ಧರ್ಮದ ವಿಶೇಷ ತರಬೇತಿ ವ್ಯವಸ್ಥೆ ಮಾಡಲಾಗಿತ್ತು. ವಿಷಯ ತಿಳಿದ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಯುವಕ ಯುವತಿಯರ ಕುಟುಂಬ ವರ್ಗದವರ ಜೊತೆಗೆ ಮತಾಂತರ ಕೇಂದ್ರದ ಮೇಲೆ ದಾಳಿ ನಡೆಸಿದರು. id='are-slot-1' class='oiad oi-axt oiadv'> id='top-searched-articles'>ದಾಳಿ
ವೇಳೆ ಕ್ರೈಸ್ತ ಧರ್ಮದ ವಿರುದ್ದ ಘೋಷಣೆಗಳನ್ನು ಕೂಗಿ, ಅವರನ್ನು ಕೇಂದ್ರದಿಂದ ಹೊರಬಿಡದೆ ಕೆಲಕಾಲ ದಿಗ್ಬಂಧನೆ ವಿಧಿಸಿದರು. ಈ ಸಂದರ್ಭದಲ್ಲಿ ಕೆಲವರು ನಮ್ಮನ್ನು ಯಾರೂ ಬಲವಂತದಿಂದ ಮತಾಂತರ ಮಾಡುತ್ತಿಲ್ಲ, ನಾವೇ ಸ್ವಯಂ ಪ್ರೇರಿತರಾಗಿ ಬಂದಿದ್ದೇವೆ ಎಂದು ಸಮರ್ಥಿಸಿಕೊಂಡರು. ಮೇಟಗಲ್ ಪೋಲಿಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ಪೊಲೀಸರು ಶಾಂತಿಪಾಲ್ ಎನ್ನುವವನನ್ನು ಸೇರಿ ಮೂವರನ್ನು ವಶಕ್ಕೆ ತೆಗೆದು ಕೊಂಡಿದ್ದಾರೆ.











Click it and Unblock the Notifications