ಚಿಂದಿ ಆಯುವವನ ತಲೆ ಚೆಂಡಾಡಿದ ದುಷ್ಕರ್ಮಿಗಳು
ಬೆಂಗಳೂರು,
ನ. 12: ಪತ್ನಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸುತ್ತಿದ್ದ ದುಷ್ಕರ್ಮಿಗಳನ್ನು ತಡೆಯಲು ಹೋದ ಪತಿಯನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಗರದ ಕಾಟನ್‌ಪೇಟೆಯಲ್ಲಿ ನಡೆದಿದೆ. id="toptextpromo">ಭಕ್ಷಿಗಾರ್ಡ್‌ನ
ಅಂಗಡಿಯೊಂದರ ಬಳಿ ಬುಧವಾರ ರಾತ್ರಿ ಚಿಂದಿ ಹಾಯುವ ಅಕ್ರಂ ಅಲಿಯಾಸ್ ಸಲೀಮ್ (29) ಹಾಗೂ ಆತನ ಪತ್ನಿ ಭವಾನಿ ಮಲಗಿದ್ದರು. ತಡರಾತ್ರಿ ವೇಳೆ ಕೆಲ ದುಷ್ಕರ್ಮಿಗಳು ಕುಡಿದ ಅಮಲಿನಲ್ಲಿ ಬಂದು ಭವಾನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಇದನ್ನು ತಡೆಯಲು ಹೋದ ಅಕ್ರಂನನ್ನು ಕಲ್ಲಿನಿಂದ ಜಜ್ಜಿದ್ದಾರೆ,ನಂತರ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ನಂತರ
ಭವಾನಿ ಮೇಲೆ ಅತ್ಯಾಚಾರದ ವಿಫಲ ಯತ್ನ ನಡೆಸಿ ಪರಾರಿಯಾಗಿದ್ದಾರೆ. ಗಾಯಗೊಂಡಿರುವ ಭವಾನಿಯನ್ನು ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.











Click it and Unblock the Notifications