ಯಡಿಯೂರಪ್ಪ ತೊಲಗಲಿ : ಅನರ್ಹ ಶಾಸಕರು
ಬೆಂಗಳೂರು,
ನ. 10 : ಆದರ್ಶ ಸೊಸೈಟಿಯ ಹಗರಣಕ್ಕೆ ಸಂಬಂಧಿಸಿ ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚೌವಾಣ್ ರಾಜೀನಾಮೆ ನೀಡಿದಂತೆ ಕೆಐಎಡಿಬಿ ಹಗರಣದಲ್ಲಿ ಭಾಗಿಯಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ನೀಡಬೇಕೆಂದು ಬಿಜೆಪಿ ಅನರ್ಹ ಶಾಸಕರು ಮಂಗಳವಾರ ಆಗ್ರಹಿಸಿದ್ದಾರೆ. id="toptextpromo">ಮಾಧ್ಯಮ
ಪ್ರತಿನಿಧಿಗಳೊಂದಿಗೆ ಮಾತನಾಡಿದ ಅನರ್ಹ ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ಬೇಳೂರು ಗೋಪಾಲಕೃಷ್ಣ, ಡಾ.ಸಾರ್ವಭೌಮ ಬಗಲಿ ಸೇರಿದಂತೆ ಇನ್ನಿತರರು ಕೂಡಲೇ ಯಡಿಯೂರಪ್ಪ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಇದಕ್ಕೆಲ್ಲ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ನೇರ ಹೊಣೆಗಾರರು. ರಾಜ್ಯವನ್ನು ಲೂಟಿ ಮಾಡುತ್ತಿರುವ ಈ ಮುಖ್ಯಮಂತ್ರಿ ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. id='are-slot-1' class='oiad oi-axt oiadv'> id='top-searched-articles'>ಮುಖ್ಯಮಂತ್ರಿ
ಹಾಗೂ ಅವರ ಮಕ್ಕಳು ಹಲವು ಹಗರಣಗಳಲ್ಲಿ ಭಾಗಿಯಾಗಿದ್ದು, ರಾಜ್ಯವನ್ನು ಕೊಳ್ಳೆ ಹೊಡೊಯುತ್ತಿದ್ದಾರೆ. ಇಂತವರು ಅಧಿಕಾರದಲ್ಲಿರಬಾರದು. ಮುಂದಿನ ಜಿಪಂ ಮತ್ತು ತಾಪಂ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯನ್ನು ರಾಜ್ಯಾದ್ಯಂತ ಕಣಕ್ಕಿಳಿಸಲು ಚಿಂತನೆ ನಡೆಸಲಾಗುತ್ತಿದೆ. ಶೀಘ್ರವೇ ತಾವು ಅರ್ನಹತೆ ಕುರಿತು ಸುಪ್ರಿಂಕೋರ್ಟ್ ಮೆಟ್ಟಿಲೇರುವುದಾಗಿ ಸ್ಪಷ್ಟಪಡಿಸಿದರು.











Click it and Unblock the Notifications