ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ಸ್ಯಗಂಧ ರೈಲು ಅವಘಡ: ಒಂದು ಸಾವು

By Mahesh
|
Google Oneindia Kannada News

20 injured as boulder falls on Matsyagandha Express
ಅಂಕೋಲಾ, ನ.9: ಭಾರೀ ಮಳೆಗೆ ಕೊಂಕಣ ರೈಲು ಮಾರ್ಗದಲ್ಲಿ ತೋಡೂರು ಬಳಿ ಭೂ ಕುಸಿತ ಸಂಭವಿಸಿದ್ದು ಚಲಿಸುತ್ತಿರುವ ಮತ್ಸ್ಯಗಂಧ ರೈಲಿನ ಮೇಲೆ ಬಂಡೆಯೊಂದು ಉರುಳಿ ಬಿದ್ದು ಕೇರಳದ ಕಣ್ಣೂರು ಮೂಲದ ಮಹಿಳೆ ಶೈನಾ(30) ಸಾವನ್ನಪ್ಪಿದ್ದಾರೆ. ಸೋಮವಾರ ರಾತ್ರಿ 7.45ರ ಸುಮಾರಿಗೆ ನಡೆದ ಈ ದುರ್ಘಟನೆಯಲ್ಲಿ 20 ಕ್ಕೂ ಹೆಚ್ಚು ಜನಕ್ಕೆ ತೀವ್ರ ಗಾಯಗಳಾಗಿವೆ.

ಹಾರವಾಡಾ ರೈಲು ನಿಲ್ದಾಣದಿಂದ ತುಸು ದೂರ ತೋಡೂರು ಜಡ್ಡಿಗದ್ದೆಯ ಅಮದಳ್ಳಿ ಸಮೀಪ ಈ ದುರ್ಘಟನೆ ನಡೆದಿದೆ. ಮಂಗಳೂರಿನಿಂದ ಮಂಬೈಯತ್ತ ಹೊರಟಿದ್ದ 2620 ಮತ್ಸಗಂಧ ರೈಲಿನ ಮೇಲೆ ಈ ಭಾರೀ ಬಂಡೆ ಬಿದ್ದು ಈ ಅವಘಡ ಸಂಭವಿಸಿದೆ. ಕಲ್ಲು ಬಿದ್ದ ಹೊಡೆತದಲ್ಲಿ ರೈಲಿನ ಎಸ್‌-2ರಿಂದ ಎಸ್‌-5 ಬೋಗಿಗಳು ಜಖಂ ತೀವ್ರವಾಗಿ ಜಖಂಗೊಂಡಿದೆ.

ಸುಮಾರು 15 ನಿಮಿಷಗಳ ಕಾಲ ರೈಲು ಸ್ಥಳದ ನಿಂತಿತ್ತು. ನಂತರ ಗಾಯಾಳುಗಳನ್ನು ಹೊತ್ತುಕೊಂಡು ಅದು ಕಾರವಾರ ನಿಲ್ದಾಣಕ್ಕೆ ಹೋಯಿತು. ತಕ್ಷಣ ಧಾವಿಸಿ ಬಂದ 108 ವಾಹನ, ಅಂಬ್ಯುಲೆನ್ಸ್‌ಗಳು ಗಾಯಾಳುಗಳನ್ನು ಸಿವಿಲ್ ಆಸ್ಪತ್ರೆಗೆ ಒಯ್ದಿದ್ದು ಅಲ್ಲಿ ಗಾಯಾಳುಗಳಿಗೆ ತುರ್ತು ಚಿಕಿತ್ಸೆ ನೀಡಲಾಗಿದೆ. ರೈಲನ್ನು ಕೆಲ ತಾಸು ಕಾರವಾರ ರೈಲು ನಿಲ್ದಾಣ ದಲ್ಲೇ ನಿಲ್ಲಿಸಲಾಗಿತ್ತು. ಮಡಗಾಂವ್‌ಗೆ ತೆರಳಿ ದುರಸ್ತಿ ಗೊಂಡ ಬಳಿಕ ರೈಲು ಪ್ರಯಾಣ ಮುಂದುವರಿಸಲಾಗಿದೆ.

ಕೊಂಕಣ ರೈಲು ಮಾರ್ಗದಲ್ಲಿ ಸಂಚರಿಸುತ್ತಿದ್ದ ರೈಲು ಸಂಚಾರವನ್ನು ಕೆಲಕಾಲ ಸ್ಥಗಿತಗೊಳಿಸಲಾಗಿತ್ತು. ಎರಡು ದಿನಗಳಿಂದ ಈ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು ಹಳಿಗುಂಟ ಇರುವ ಗುಡ್ಡದ ಪದರು ಸಡಿಲಗೊಂಡಿದ್ದರಿಂದ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಪೊಲೀಸರು, ಅಗ್ನಿಶಾಮಕ ದಳ, ರೈಲ್ವೇ ಪೊಲೀಸರು ಸ್ಥಳಕ್ಕೆ ಮತ್ತು ಕಾರವಾರ ನಿಲ್ದಾಣಕ್ಕೆ ಧಾವಿಸಿ ತುರ್ತು ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ. ಹೆಚ್ಚಿನ ಮಾಹಿತಿಗೆ ಅಥವಾ ನೆರವಿಗೆ ಈ ಕೆಳಕಂಡ ಸಹಾಯವಾಣಿ ಬಳಸಲು ಕೋಂಕಣ್ ರೈಲ್ವೇ ಅಧಿಕಾರಿಗಳು ಸೂಚಿಸಿದ್ದಾರೆ.

ಉಡುಪಿ: 0820-2524351
ಸುರತ್ಕಲ್: 0824-2475938
ಮಂಗಳೂರು: 0824 2425720
ಪಾಲಕ್ಕಾಡ್ : 04912552755

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X